ನವದೆಹಲಿ: ಕರ್ನಾಟಕ ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ನೀಡುವಂತೆ ಹೈಕೋರ್ಟ್​ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್​​ ಎತ್ತಿ ಹಿಡಿದಿದೆ. ಅಲ್ಲದೇ ಕರ್ನಾಟಕಕ್ಕೆ ನೀಡಬೇಕಾದ ಆಮ್ಲಜನಕದ ಬಗ್ಗೆ ಹೈಕೋರ್ಟ್ ಸರಿಯಾಗಿ ವಿಶ್ಲೇಷಣೆ ಮಾಡಿದೆ. ಈ ಆದೇಶವನ್ನು ನಾವು ಬದಲಿಸಿ ಕರ್ನಾಟಕದ ಜನತೆಗೆ ತೊಂದರೆ ಉಂಟುಮಾಡಲು ಬಯಸಲ್ಲ ಎಂದು ತೀಕ್ಷ್ಣ ಚಾಟಿಯನ್ನು ಸುಪ್ರೀಂ ಕೋರ್ಟ್ ಬೀಸಿದೆ.

ಆಕ್ಸಿಜನ್ ಕೊರತೆ ಹೆಚ್ಚಾಗಿ ರಾಜ್ಯದಲ್ಲಿ ಸೋಂಕಿತ ಸಾವಿನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹೈ ಕೋರ್ಟ್ ಮೇ 5ರಂದು ಕರ್ನಾಟಕ ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ ಹೈ ಕೋರ್ಟ್​ ಆದೇಶವನ್ನು ಪ್ರಶ್ನಿಸಿ ಮೇ 06 ರಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ ಮೊರೆ ಹೋಗಿತ್ತು.

ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನಿನ್ನೆ ದೆಹಲಿಯ ಆಕ್ಸಿಜನ್ ಕೊರತೆಯ ಬಗ್ಗೆ ವಾದ ನಡೆಸುವಾಗ ಸಾಲಿಟರ್ ಜನರಲ್ ಕರ್ನಾಟಕದ ಹೈಕೋರ್ಟ್ ಆದೇಶದ ಬಗ್ಗೆ ಪ್ರಶ್ನಿಸಿದ್ದರು. ಈ ಬಗ್ಗೆ ನಿನ್ನೆಯೂ ನ್ಯಾ. ಚಂದ್ರಚೂಡ್ ಪೀಠದ ಮುಂದೆ ಮೆಹ್ತಾ ಪ್ರಸ್ತಾಪಿಸಿದ್ದರು. ಆ ವೇಳೆ ನ್ಯಾ.ಚಂದ್ರಚೂಡ್ ರವರು ಎನ್.ವಿ ರಮಣ್ ಅವರ ಪೀಠದ ಮುಂದೆ ಪ್ರಸ್ಥಾಪಿಸಿ ಅಂತ ಹೇಳಿದ್ದರು. ಆದರೆ ಮತ್ತೆ ಇವತ್ತು ಸಾಲಿಟರ್ ಜರ್ನಲ್ ಮೆಹ್ತಾ ಕರ್ನಾಟಕದ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದಾಗ, ನ್ಯಾಯಪೀಠ ಹೈಕೋರ್ಟ್ ಆದೇಶವನ್ನ ಎತ್ತಿಹಿಡಿದಿದೆ. ಅಂದಹಾಗೇ, ಸದ್ಯ 865 ರಿಂದ 965 ಮೆಟ್ರಿಕ್ ಟನ್ ಆಕ್ಸಿಜನ್​​ ಅನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಪೂರೈಕೆ ಮಾಡುತ್ತಿದೆ.

The post ಮೋದಿ ಸರ್ಕಾರಕ್ಕೆ ಮುಖಭಂಗ; ಕರ್ನಾಟಕ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್ appeared first on News First Kannada.

Source: newsfirstlive.com

Source link