ಮೋದಿ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ, ನಮಗೆ ದೇಶ ಭಕ್ತಿ ಪಾಠವನ್ನು ಮಾಡುತ್ತಾರೆ; ಸಿದ್ದರಾಮಯ್ಯ ವಾಗ್ದಾಳಿ | Modi was born after Independence but he teach us about patriotism Siddaramaiah slams Narendra modi


ಮೋದಿ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ, ನಮಗೆ ದೇಶ ಭಕ್ತಿ ಪಾಠವನ್ನು ಮಾಡುತ್ತಾರೆ; ಸಿದ್ದರಾಮಯ್ಯ ವಾಗ್ದಾಳಿ

ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಸರ್ಕಾರದಲ್ಲಿ ಹಲವು ಯೋಜನೆಗಳು ಜಾರಿಯಾಗಿವೆ. ಆದರೆ ಈಗ ಎಲ್ಲಾ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಇವರು ನಮಗೆ ದೇಶ ಭಕ್ತಿ ಪಾಠವನ್ನು ಮಾಡುತ್ತಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಾವು ಹಲವು ಯೋಜನೆಗಳನ್ನ ತಂದಿದ್ದೆವು. ಆದರೆ ಇವರು ಎಲ್ಲಾ ಯೋಜನೆ ನಿಲ್ಲಿಸಿದ್ದಾರೆ. ಅದಾನಿ ವಿಶ್ವದಲ್ಲೇ ನಂಬರ್ ವನ್ ಶ್ರೀಮಂತ. ಅಂವಾನಿಗಿಂತ ದೊಡ್ಡ ಶ್ರೀಮಂತನಾಗಿದ್ದಾನೆ. ಇದಕ್ಕೆ ಪ್ರಧಾನಿ ಮೋದಿಯವರ ಕುಮ್ಮಕ್ಕಿದೆ. ಅದಾನಿ ಬಿಕಾಂ ಓದಲು ಅವನಿಗಾಗಲಿಲ್ಲ. ಅಂತವನು ಇಂದು ಏಷ್ಯಾದಲ್ಲೇ ದೊಡ್ಡ ಶ್ರೀಮಂತ. ಇವರು ನಮಗೆ ದೇಶ ಭಕ್ತಿ ಪಾಠ ಮಾಡ್ತಾರೆ. ಸ್ವಾತಂತ್ರ್ಯಕ್ಕಾಗಿ ಒಬ್ಬರಾದರು ಪ್ರಾಣ ತ್ಯಾಗ‌ ಮಾಡಿದ್ರಾ. ಮೋದಿನೇ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ. ಬಿಜೆಪಿ ಅವರಿಗೆ ಮಾನ ಮರ್ಯಾದೆ ಇಲ್ಲ. ಬಿಜೆಪಿಯವರು ಭಂಡರು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಹೋರಾಟದಲ್ಲಿ 700 ರೈತರು ಮೃತಪಟ್ಟಿದ್ದಾರೆ. ಲಖೀಂಪುರ್ ಕೇರಿಯಲ್ಲಿ ರೈತರ ಮೇಲೆ ಕಾರು ಹತ್ತಿಸಿದ್ರು. ಕೇಂದ್ರ ಸಚಿವರ ಮಗನೇ ಕಾರು ಹತ್ತಿಸಿ ಕೊಂದಿದ್ದಾನೆ. ಇವರು ಇನ್ನೆಂಥಾ ಕ್ರೂರಿಗಳಿರಬೇಕೆಂದು ಆಕ್ರೋಶ ಹೊರ ಹಾಕಿದ್ರು.

ಅಲ್ಲದೆ ಬೇಷರತ್ತಾಗಿ ಹಲವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಜೆಡಿಎಸ್‌ನ ಕುಟುಂಬ ರಾಜಕಾರಣಕ್ಕೆ ಬೇಸತ್ತಿದ್ದಾರೆ. ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಧರ್ಮ ಒಡೆಯುತ್ತಿದೆ. ಹೀಗಾಗಿ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ. ಸಿಆರ್ ಮನೋಹರ್ ಜೆಡಿಎಸ್ ಇಂದ ಎಂಎಲ್ಸಿ ಆಗಿದ್ದರು. ಈಗ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಇದರ ಅರ್ಥ ಕಾಂಗ್ರೆಸ್ ಪರವಾದ ಗಾಳಿ ರಾಜ್ಯದಲ್ಲಿ ಆರಂಭವಾಗಿದೆ. ಬಿಜೆಪಿ ಕೋಮುವಾದಿ ಪಕ್ಷ. ಧರ್ಮ ಆಧಾರಿತ ಪಕ್ಷ ಅಂದ್ರೆ ಬಿಜೆಪಿ. ಎಲ್ಲಾ ಜಾತಿ, ಧರ್ಮದವರನ್ನ ಸಮಾನವಾಗಿ ಕಾಣುವುದು ಕಾಂಗ್ರೆಸ್ ಪಕ್ಷ. ಬಿಜೆಪಿ ಅಲ್ಪಸಂಖ್ಯಾತರ ವಿರುದ್ಧ ಕೆಂಡಾಕಾರುತ್ತೆ. ದೇಶದಲ್ಲಿ 2% ಕ್ರಿಶ್ಚಿಯನ್ ಇದ್ದಾರೆ. ಅವರದ್ದೇ ಆದ ಧರ್ಮದ ಅನುಸಾರವಾಗಿ ಬದುಕುತ್ತಾರೆ. ಆದರೆ ಇದು ಬಿಜೆಪಿ ಸಹಿಸಲ್ಲ. ಹಿಂದುತ್ವದ ಹೆಸರಿನಲ್ಲಿ ಧರ್ಮ ಹೊಡೆಯುವ ಕೆಲಸವಾಗ್ತಿದೆ ಎಂದರು.

TV9 Kannada


Leave a Reply

Your email address will not be published. Required fields are marked *