ನವದೆಹಲಿ: ಕೊರೊನಾ ವೈರಸ್​​ ಸೋಂಕಿಗೆ ಕಡಿವಾಣ ಹಾಕಲು ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್​​ಮೆಂಟ್ ಆರ್ಗನೈಸೇಷನ್(DRDO) ಅಭಿವೃದ್ಧಿಪಡಿಸಿರುವ 2DG( 2-deoxy-D-glucose) ಮೆಡಿಸಿನ್ ಇಂದು ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂದಿನ ವಾರ  ಮಾರುಕಟ್ಟೆಯಲ್ಲಿ ಈ ಮೆಡಿಸಿನ್ ಲಭ್ಯವಾಗಲಿದೆ.

ಸ್ವದೇಶಿ ನಿರ್ಮಿತ ಮೆಡಿಸಿನ್ ಇದಾಗಿದ್ದು ಮೊದಲ ಹಂತದಲ್ಲಿ 10,000 ಮೆಡಿಸಿನ್ ಡೋಸ್ ಬಿಡುಗಡೆಯಾಗಲಿದೆ. 2DG ಮೆಡಿಸಿನ್ ಕೊರೊನಾ ಪಾಸಿಟಿವ್ ಬಂದಿರೋ ರೋಗಿಗಳಿಗೆ ನೀಡುವ ಮೆಡಿಸಿನ್ ಆಗಿದೆ. ರೆಡ್ಡೀಸ್ ಲ್ಯಾಬೊರೇಟರಿಯಲ್ಲಿ ಈ ಔಷಧಿ ತಯಾರಾಗುತ್ತಿದೆ.

2DG ಮೆಡಿಸಿನ್ ಹೇಗೆ ಕೆಲಸ ಮಾಡುತ್ತೆ..?
ಈ ಮೆಡಿಸಿನ್ ಮೋಸಗಾರ ವೈರಸ್​ಗೇ ಮೋಸ ಮಾಡುವ ಡ್ರಗ್ ಎನ್ನಲಾಗಿದೆ. ಯಾಕಂದ್ರೆ ಮನುಷ್ಯನ ದೇಹವನ್ನ ಸೇರುವ ವೈರಸ್ ಆತನ ದೇಹದಲ್ಲಿರುವ ಗ್ಲುಕೋಸ್ ಬಳಸಿಕೊಂಡು ದ್ವಿಗುಣಗೊಳ್ಳುತ್ತದೆ. ಇಂಥ ವೈರಸ್​ಗೆ 2DG ಮೆಡಿಸಿನ್ ನಕಲಿ ಗ್ಲುಕೋಸ್​​ ನೀಡುತ್ತದೆ. ಈ ನಕಲಿ ಗ್ಲುಕೋಸ್​​ ವೈರಸ್​​ ದ್ವಿಗುಣಗೊಳ್ಳಲಾಗದಂತೆ ಮಾಡುತ್ತದೆ. ಹೀಗೆ ವೈರಸ್ ದ್ವಿಗುಣಗೊಳ್ಳುವುದು ನಿಂತಾಗ ಮನುಷ್ಯನ ದೇಹದಲ್ಲಿರುವ ಆ್ಯಂಟಿ ಬಾಡೀಸ್ ಕೆಲವೇ ಗಂಟೆಗಳಲ್ಲಿ ವೈರಸ್​​ ವಿರುದ್ಧ ಹೋರಾಟ ನಡೆಸಿ ಗೆಲುವು ಸಾಧಿಸುತ್ತದೆ ಎನ್ನಲಾಗಿದೆ.

The post ಮೋಸಗಾರ ವೈರಸ್​​ಗೇ ಮೋಸ ಮಾಡಿ ಗೆಲ್ಲುವ DRDO ಔಷಧಿ​ ರೆಡಿ.. ಮುಂದಿನ ವಾರ ಮಾರುಕಟ್ಟೆಗೆ appeared first on News First Kannada.

Source: newsfirstlive.com

Source link