ಮೋಸದ ಬುದ್ಧಿ ಬಿಡದ ಚೀನಾ.. ಸದ್ದಿಲ್ಲದೇ ಭಾರತದ ಗಡಿಯಲ್ಲಿ ಗ್ರಾಮಗಳ ನಿರ್ಮಾಣ..!


ನವದೆಹಲಿ: ಒಂದ್ಕಡೆ ಪಾಕಿಸ್ತಾನ, ಇನ್ನೊಂದು ಕಡೆ ಚೀನಾ.. ಭಾರತಕ್ಕೆ ತಾಗಿಕೊಂಡಿರುವ ಈ ಎರಡೂ ರಾಷ್ಟ್ರಗಳು ಗಡಿ ವಿಚಾರದಲ್ಲಿ ತೋರಿಸೋ ಕಪಟತನಕ್ಕೆ ಕೊನೆ ಬೀಳೋ ಯಾವುದೇ ಲಕ್ಷಣಗಳು ಕಾಣಿಸ್ತಿಲ್ಲ. ಪಾಕಿಸ್ತಾನ ಭೂಮಿ ವಿಚಾರಕ್ಕೆ ಉಗ್ರವಾದದ ಹಿಂದೆ ಬಿದ್ದಿದ್ರೆ, ಇತ್ತ ಚೀನಾ ಸೈಲೆಂಟ್ ಆಗಿಯೇ ಕೋಟೆ ಕಟ್ಟಿಕೊಳ್ತಿದೆ.

ಭಾರತದಿಂದ ಆಕ್ರಮಿಸಿಕೊಂಡ ಪ್ರದೇಶದಲ್ಲಿ ಚೀನಾ ಭದ್ರಕೋಟೆ..!
ಭಾರತದ ಸ್ಥಳದಲ್ಲಿ ಚೀನಾ ತನ್ನದೊಂದು ಸಾಮ್ರಾಜ್ಯ ರಚನೆಗೆ ಮುಂದಾಗಿದೆ. ಹೊಸದಾಗಿ ಲಭ್ಯವಾದ ಸ್ಯಾಟಲೈಟ್​ ಪಿಕ್ಚರ್​ ಪ್ರಕಾರ, ಚೀನಾ ಇಲ್ಲಿ ಬರೋಬ್ಬರಿ 60 ಬಿಲ್ಡಿಂಗ್​ಗಳನ್ನ ನಿರ್ಮಿಸಿದೆ. ಇವಿಷ್ಟೇ ಅಲ್ಲದೇ, ಈ ಸ್ಥಳದಲ್ಲಿ ಕಟ್ಟಡವೊಂದರ ಛಾವಣಿ ಮೇಲೆ ಚೀನಾ ಬಾವುಟದ ಚಿತ್ರ ಬಿಡಿಸಲಾಗಿದ್ದು, ಸಹ ಸ್ಯಾಟಲೈಟ್​ನಲ್ಲಿ ಸೆರೆಯಾಗಿದೆ.

ಭಾರತದ ನೆಲದಲ್ಲಿ ‘ಚೀನಾ’!
ಅಸಲಿಗೆ ಅರುಣಾಚಲ ಪ್ರದೇಶ ರಾಜ್ಯದ ಶಿಯೋಮಿ ಎಂಬ ಜಿಲ್ಲೆಗೆ ಈ ಪ್ರದೇಶ ಸೇರುತ್ತೆ. ಲೈನ್ ಆಫ್ ಌಕ್ಚುಲ್ ಕಂಟ್ರೋಲ್​ನ 6 ಕಿಲೋಮೀಟರ್​ ದೂರದಲ್ಲಿ ಈ ಪ್ರದೇಶ ಬರಲಿದೆ. ಭಾರತಕ್ಕೆ ಸೇರಿದ ಈ ಪ್ರದೇಶವನ್ನ ಚೀನಾ ದಶಕಗಳ ಹಿಂದೆಯೇ ಅಕ್ರಮವಾಗಿ ವಶಪಡಿಸಿಕೊಂಡಿದೆ. ಲೈನ್ ಆಫ್ ಌಕ್ಚುಲ್ ಕಂಟ್ರೋಲ್ ಹಾಗೂ ಭಾರತ-ಚೀನಾದ ನಿಜವಾದ ಅಂತರಾಷ್ಟ್ರೀಯ ಗಡಿ ಮಧ್ಯೆ ಈ ಪ್ರದೇಶ ಬರುತ್ತದೆ. ಇನ್ನೂ ಸುಲಭವಾಗಿ ಹೇಳಬೇಕೆಂದ್ರೆ, ಸದ್ಯ ಬಿಡುಗಡೆಯಾಗಿರುವ ಸ್ಯಾಟ್​ಲೈಟ್​ ಚಿತ್ರಗಳು ಚೀನಾ ಆಕ್ರಮಿಸಿಕೊಂಡ ಭಾರತದ ಭೂಭಾಗ.

ಇದಕ್ಕೂ ಮೊದಲು ತ್ಸಾರಿ ಚು ನದಿ ದಂಡೆ ಸಮೀಪದ ವಿವಾದಿತ ಪ್ರದೇಶದಲ್ಲಿ 100ಮನೆಗಳನ್ನ ಚೀನಾ ನಿರ್ಮಿಸಿ ಹೊಸ ಊರೊಂದನ್ನು ಸೃಷ್ಟಿಸಿತ್ತು. ಇದಕ್ಕೆ ಭಾರತ ಕೆಂಗಣ್ಣು ಬೀರಿದ ಬೆನ್ನಲ್ಲೇ, ಮತ್ತೊಂದು ಹೊಸ ಊರನ್ನ ಹುಟ್ಟಿಹಾಕಿದೆ. ಭಾರತದ ಭೂಭಾಗಳನ್ನ ಚೀನಾ ಹೇಗೆ ಒಂದೊಂದಾಗಿಯೇ ತನ್ನ ತೆಕ್ಕೆಗೆ ಹಾಕಿಕೊಳ್ತಿದೆ ಅನ್ನೋದಕ್ಕೆ ಸ್ಯಾಟ್​ಲೈಟ್​ ಚಿತ್ರವೇ ಸಾಕ್ಷಿ.

ಶೀಘ್ರದಲ್ಲೇ ಭಾರತ-ಚೀನಾ ನಡುವೆ 14ನೇ ಸುತ್ತಿನ ಕಮಾಂಡರ್ ಲೆವೆಲ್ ಮೀಟಿಂಗ್ ನಡೆಯಲಿದೆ. ಈ ಮೀಟಿಂಗ್​ನಲ್ಲಿ ಸ್ಯಾಟಲೈಟ್​ ವಿಚಾರ ಪ್ರತಿಧ್ವನಿಸಿದ್ರೂ ಅಚ್ಚರಿಯಿಲ್ಲ. ಒಂದಂತೂ ಸತ್ಯ, ಕಂಡಕಂಡವರ ಜಾಗಕ್ಕೆಲ್ಲಾ ಬೇಲಿ ಹಾಕ್ತಿರೋ ಚೀನಾದ ದುರ್ಬುದ್ಧಿ ಕೊನೆಗೊಳ್ಳುವ ಲಕ್ಷಣ ಸದ್ಯಕ್ಕಂತೂ ಕಾಣ್ತಿಲ್ಲ.

News First Live Kannada


Leave a Reply

Your email address will not be published. Required fields are marked *