ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಆನ್‍ಲೈನ್ ಶಾಪಿಂಗ್ ಹೆಚ್ಚಾಗಿದೆ. ಸೋಂಕು ಹರಡುವಿಕೆಗೆ ಬ್ರೇಕ್ ಹಾಕಿ ಅಗತ್ಯವಿರುವ ವಸ್ತುಗಳನ್ನು ಮನೆಯಿಂದಲೇ ಖರೀದಿ ಮಾಡಲು ಆನ್​​ಲೈನ್ ಶಾಪಿಂಗ್ ನೆರವಾಗಿದೆ. ಆದರೆ ಕೆಲವೊಮ್ಮೆ ನಡೆಯುವ ಕೆಲ ಸಣ್ಣ ತಪ್ಪುಗಳಿಂದ ಯಾವುದೋ ವಸ್ತುವನ್ನು ಬುಕ್ ಮಾಡಿದ ವ್ಯಕ್ತಿಗೆ ಮತ್ತಾವುದೋ ವಸ್ತು ತಲುಪುತ್ತದೆ. ಇಂತಹದ್ದೇ ಘಟನೆ ಮುಂಬೈನಲ್ಲಿ ನಡೆದಿದ್ದು, ಮೌತ್‍ವಾಶ್​ ಬುಕ್ ಮಾಡಿದ್ದ ವ್ಯಕ್ತಿ ಎಂಐ ನೋಟ್-10 ಮೊಬೈಲ್ ಪಡೆದುಕೊಂಡಿದ್ದಾರೆ.

ಮುಂಬೈನ ಲೋಕೇಶ್ ಎಂಬವರು ಅಮೆಜಾನ್‍ನಿಂದ ಮೌತ್‍ವಾಶ್ ಬುಕ್ ಮಾಡಿದ್ದರು. ಕೆಲ ದಿನಗಳ ಬಳಿಕ ಅವರಿಗೆ ಪಾರ್ಸೆಲ್ ಆಗಮಿಸಿತ್ತು. ಅದನ್ನು ತೆಗೆದು ನೋಡಿದ ಸಂದರ್ಭದಲ್ಲಿ ಅಚ್ಚರಿ ಕಾದಿತ್ತು.

ಈ ಕುರಿತ ಅರ್ಡರ್ ಫೋಟೋ ಹಾಗೂ ಫೈನಲ್ ಅರ್ಡರ್ ರಿಸೀವ್ ಮಾಡಿಕೊಂಡಿರೋ ಫೋಟೋವನ್ನ ಲೋಕೇಶ್​ ಹಂಚಿಕೊಂಡಿದ್ದು, ಮೌತ್‍ವಾಶ್​​ ರಿಟರ್ನ್ ಮಾಡಲು ಅವಕಾಶ ಇಲ್ಲದ ಕಾರಣ ಮೊಬೈಲ್ ಹಿಂದಿರುಗಿಸಲು ಸಾಧ್ಯವಾಗಿಲ್ಲ ಎಂದು ಬರೆದುಕೊಂಡಿದ್ದಾರೆ.

The post ಮೌತ್‍ವಾಶ್​​​ ಅರ್ಡರ್ ಮಾಡಿದ್ರೆ ರಿಯಲ್‍ಮೀ ನೋಟ್-10 ಮೊಬೈಲ್ ಬಂತು appeared first on News First Kannada.

Source: newsfirstlive.com

Source link