ಮ್ಯಾಂಚೆಸ್ಟರ್​ನ ಸೌತ್ಲೀ ರಸ್ತೆಯಲ್ಲಿ ಹದಿಹರೆಯದ ಯುವಕನ ಬರ್ಬರ ಹತ್ಯೆ; ತನಿಖೆ ಆರಂಭಿಸಿದ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸ್ – Greater Manchester Police take-up investigation after a teenager brutally stabbed to death on Southley Road crime story in Kannada


ಘಟನೆ ನಡೆದ ಸ್ಥಳಕ್ಕೆ ಹತ್ತಿರದಲ್ಲೇ ವಾಸವಾಗಿರುವ ಆದರೆ ಹೆಸರು ಹೇಳಿಕೊಳ್ಳಲಿಚ್ಛಿಸದ ವ್ಯಕ್ತಿಯೊಬ್ಬರು, ‘ಹತ್ಯೆ ನಡೆದ ಸ್ಥಳ ಶಾಲೆಗೆ ತೀರ ಹತ್ತಿರದಲ್ಲಿದ್ದು ನರ್ಸರಿ ಮಕ್ಕಳು ಅದೇ ಮಾರ್ಗದಲ್ಲಿ ಮನೆಗೆ ನಡೆದುಕೊಂಡು ನಡೆದು ಹೋಗುವುದರಿಂದ ಇದೊಂದು ಆಘಾತಕಾರಿ ಸಂಗತಿಯಾಗಿದೆ,’ ಎಂದು ಹೇಳಿದ್ದಾರೆ.

ಮ್ಯಾಂಚೆಸ್ಟರ್​ನ ಸೌತ್ಲೀ ರಸ್ತೆಯಲ್ಲಿ ಹದಿಹರೆಯದ ಯುವಕನ ಬರ್ಬರ ಹತ್ಯೆ; ತನಿಖೆ ಆರಂಭಿಸಿದ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸ್

ಅಪರಾಧ ನಡೆದ ಸ್ಥಳದಲ್ಲಿ ಪೊಲೀಸರು

ಮ್ಯಾಂಚೆಸ್ಟರ್ ನಗರದ ವಿದಿಂಗ್ಟನ್ (Withington) ಪ್ರದೇಶದ ಸೌತ್ಲೀ ರಸ್ತೆಯಲ್ಲಿ (Southley Road) ಮಂಗಳವಾರ ಹಾಡುಹಗಲೇ 17 ರ ಪ್ರಾಯದ ಯುವಕನೊಬ್ಬನ್ನು ತಿವಿದು ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದ್ದು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸ್ (ಜಿ ಎಮ್ ಪಿ) (Greater Manchester Police) ತನಿಖೆಯನ್ನು ಕೈಗೆತ್ತಿಕೊಂಡಿದೆ. ತೀವ್ರ ರಕ್ತಸ್ರಾವವಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವನ ಪ್ರಾಣ ಉಳಿಯಲಿಲ್ಲ. ಜಿಎಮ್ ಪಿ ಅಧಿಕಾರಿಗಳು ಅಪರಾಧ ನಡೆದ ಸ್ಥಳಕ್ಕೆ ಬುಧವಾರ ಭೇಟಿ ನೀಡಿದಾಗ ಅಲ್ಲಿದ್ದ ಜನ ಘಟನೆಯನ್ನು ನೆನದು ಕಣ್ಣೀರಿಟ್ಟರು.

ಯುವಕನ ಕೊಲೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ, ಮತ್ತು ವಿಷಯವನ್ನು ಮೃತನ ಕುಟುಂಬ ವರ್ಗಕ್ಕೆ ತಿಳಿಸಲಾಗಿದೆ ಎಂದು ಜಿಎಮ್ ಪಿ ಬಾತ್ಮೀದಾರ ಮಾಧ್ಯಮಗಳಿಗೆ ತಿಳಿಸಿದರು.
‘ಮಂಗಳವಾರ, ನವೆಂಬರ್ 22, 2022 ರಂದು ವಿದಿಂಗ್ಟನ್ ನ ಸೌತ್ಲೀ ರಸ್ತೆಯಲ್ಲಿ ನಡೆದ ತಿವಿತದ ಪ್ರಕರಣ ಬಗ್ಗೆ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸ್ ಗೆ ಅಲರ್ಟ್ ಮಾಡಲಾಯಿತು.

ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಸ್ವಲ್ಪ ಸಮಯದ ನಂತರ ಅವನು ಗಂಭೀರ ಸ್ವರೂಪದ ಗಾಯಗಳಿಂದಾಗಿ ಅಸು ನೀಗಿದ ಎಂದು ಹೇಳಲು ವಿಷಾದವಾಗುತ್ತದೆ,’ ಎಂದು ಜಿಎಮ್ ಪಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಘಟನಾ ಸ್ಥಳಕ್ಕೆ ನಮ್ಮ ಅಧಿಕಾರಿಗಳು ಹೋಗಿದ್ದರು ಮತ್ತು ಗಂಭೀರವಾಗಿ ಗಾಯಗೊಂಡಿದ್ದ ಹದಿಹರೆಯದ ಹುಡುಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.

ತನಿಖೆ ನಡೆಯುತ್ತಿವೆ ಮತ್ತು ಈ ಘಟನೆಯ ಬಗ್ಗೆ ಗೊತ್ತಿರುವ ಯಾರಿಗಾದರೂ ಮಾತನಾಡಲು ಬಯಸಿದಲ್ಲಿ ಅವರು ನಮ್ಮನ್ನು ಸಂಪರ್ಕಿಸಬಹುದು,’ ಎಂದು ಪ್ರಕಟಣೆ ತಿಳಿಸುತ್ತದೆ.

‘ಯುವಕನ ಹತ್ತಿರದ ಸಂಬಂಧಿಕರಿಗೆ ವಿಷಯ ತಿಳಿಸಲಾಗಿದೆ ಮತ್ತು ವಿಶೇಷ ತರಬೇತಿ ಹೊಂದಿರುವ ಅಧಿಕಾರಿಗಳು ಈ ಕಷ್ಟದ ಸಮಯದಲ್ಲಿ ಅವರ ಬೆಂಬಲಿಕ್ಕಿದ್ದಾರೆ. ‘ಇದೊಂದು ಱಂಡೋಮ್ ದಾಳಿ ಎಂದು ನಾವು ಭಾವಿಸುವುದಿಲ್ಲ ಮತ್ತು ಪ್ರಾಥಮಿಕ ತನಿಖೆಯ ಬಳಿಕ ಸಾರ್ವಜನಿಕರಿಗೆ ಯಾವುದೇ ಬೆದರಿಕೆ ಇಲ್ಲ ಎಂದು ವೇದ್ಯವಾಗುತ್ತಿದೆ, ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಹತ್ತಿರದಲ್ಲೇ ವಾಸವಾಗಿರುವ ಆದರೆ ಹೆಸರು ಹೇಳಿಕೊಳ್ಳಲಿಚ್ಛಿಸದ ವ್ಯಕ್ತಿಯೊಬ್ಬರು, ‘ಹತ್ಯೆ ನಡೆದ ಸ್ಥಳ ಶಾಲೆಗೆ ತೀರ ಹತ್ತಿರದಲ್ಲಿದ್ದು ನರ್ಸರಿ ಮಕ್ಕಳು ಅದೇ ಮಾರ್ಗದಲ್ಲಿ ಮನೆಗೆ ನಡೆದುಕೊಂಡು ನಡೆದು ಹೋಗುವುದರಿಂದ ಇದೊಂದು ಆಘಾತಕಾರಿ ಸಂಗತಿಯಾಗಿದೆ,’ ಎಂದು ಹೇಳಿದ್ದಾರೆ.

ಮತ್ತೊಬ್ಬರು, ‘ಇದು ಒಳ್ಳೆಯ ಸೂಚನೆಯಲ್ಲ. ಇದೊಂದು ಶಾಂತಿಯುತ ಪ್ರದೇಶವಾಗಿದೆ,’ ಎಂದಿದ್ದಾರೆ.
‘ಬೆಳಿಗ್ಗೆ 11.38 ಕ್ಕೆ ಕರೆ ಮಾಡಿದ ನಂತರ ಸೌತ್ಲಿಯಾ ರಸ್ತೆಯಲ್ಲಿ ನಡೆದ ಘಟನೆಗೆ ನಾವು ಪ್ರತಿಕ್ರಿಯಿಸಿದ್ದೇವೆ ಮತ್ತು ಆಂಬ್ಯುಲೆನ್ಸ್, ರೆಸ್ಪಾನ್ಸ್ ವೆಹಿಕಲ್, ಏರ್ ಆಂಬ್ಯುಲೆನ್ಸ್ ಹೆಜಾರ್ಡಸ್ ಏರಿಯ ರೆಸ್ಪಾನ್ಸ್ ತಂಡದ ಒಬ್ಬ ಸದಸ್ಯನನ್ನು ಕಳುಹಿಸಿದ್ದೇವೆ,’ ಎಂದು ನಾರ್ತ್ ವೆಸ್ಟ್ ಆಂಬ್ಯುಲೆನ್ಸ್ ಸೇವೆಯ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.