ರಾಯಲ್ ಚಾಲೆಂಜರ್ಸ್ ಬೆಂಗಳೂರು, ಐಪಿಎಲ್ನಲ್ಲಿ ಒಮ್ಮೆಯೂ ಕಪ್ ಗೆಲ್ಲದ ಈ ತಂಡ. ಆದ್ರೂ ಈ ತಂಡಕ್ಕಿರೋ ಕ್ರೇಜ್, ನಾಲ್ಕೈದು ಬಾರಿ ಟ್ರೋಪಿ ಮುಡಿಗೇರಿಸಿಕೊಂಡ ತಂಡಕ್ಕಿಂತ ಕಡಿಮೆ ಇಲ್ಲ. ಇದಕ್ಕೆ ಪ್ರಮುಖ ಕಾರಣ ವಿರಾಟ್ ಕೊಹ್ಲಿ. ಆದ್ರೆ, ಕಳೆದ 10 ಸೀಸನ್ಗಳಲ್ಲಿ ಆರ್ಸಿಬಿಯನ್ನ ಮುನ್ನಡೆಸಿದ್ದ ಕೊಹ್ಲಿ, ಈಗಾಗ್ಲೇ ನಾಯಕತ್ವಕ್ಕೆ ಗುಡ್ಬೈ ಹೇಳುವುದಾಗಿ ಘೋಷಿಸಿದ್ದಾರೆ. ಇದರಿಂದ ಆರ್ಸಿಬಿ ಫ್ರಾಂಚೈಸಿಗೆ ತಂಡದ ನಾಯಕನ ಆಯ್ಕೆ ದೊಡ್ಡ ಪ್ರಶ್ನೆಯಾಗಿದೆ.
ಯಾರಿಗೆ ನಾಯಕನ ಪಟ್ಟ ಕಟ್ಟಿದ್ರೆ, ಉತ್ತಮ ಅಂತಾ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದೆ. ಆದ್ರೆ, ಲೆಜೆಂಡ್ ಸುನಿಲ್ ಗವಾಸ್ಕರ್ ಮ್ಯಾಕ್ಸ್ವೆಲ್ರನ್ನ ತಂಡದ ನಾಯಕರನ್ನಾಗಿ ಮಾಡುವಂತೆ ಸಲಹೆ ನೀಡಿದ್ದಾರೆ.
ಮ್ಯಾಕ್ಸ್ವೆಲ್ ನಾಯಕನ ಸ್ಥಾನ ನೀಡಿದ್ರೆ, ಈ ಬಾರಿಯ ಐಪಿಎಲ್ನಲ್ಲಿ ನಾವು ಬೇರೆ ರೀತಿಯ ಮಾಕ್ಸ್ವೆಲ್ರನ್ನ ನೋಡಲಿದ್ದೇವೆ. ಕೆಲ ಆಟಗಾರರು ಚೆನ್ನಾಗಿ ಆಡ್ತಿರ್ತಾರೆ…ಆದ್ರೆ, 30, 40 ರನ್ ಗಳಿಸುತ್ತಿದ್ದಂತೆ ನಮ್ ಕೆಲಸ ಮುಗೀತು ಎನ್ನುವಂತೆ ಔಟಾಗಿ ಹೋಗ್ತಾರೆ. ಆದ್ರೆ, ಅದೇ ಆಟಗಾರರಿಗೆ ಪ್ರಮುಖ ಜವಬ್ದಾರಿ ನೀಡಿದಾಗ ಕೊನೆವರೆಗೂ ಕ್ರೀಸ್ನಲ್ಲಿ ನಿಂತು ಆಡಿ ಮಿಂಚ್ತಾರೆ. ಮ್ಯಾಕ್ಸ್ವೆಲ್ ಕೂಡ ಅಂತಹ ಆಟಗಾರರ ಪೈಕಿ ಒಬ್ಬರಾಗಿದ್ದಾರೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.