ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ತಂಡ ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಭಾರೀ ಮೊತ್ತ ನೀಡಿ ರಿಟೈನ್ ಮಾಡಿಕೊಂಡಿದೆ. ಈ ಬೆನ್ನಲ್ಲೇ ತಂಡವನ್ನು ಮುಂದೆ ಯಾರು ಮುನ್ನಡೆಸಲಿದ್ದಾರೆ ಎಂಬ ಚರ್ಚೆಯೊಂದು ಶುರುವಾಗಿದೆ. ಈ ಬಗ್ಗೆ ಡೇನಿಯಲ್ ವೆಟ್ಟೋರಿ ಮಾತಾಡಿದ್ದಾರೆ.
ಯಾವುದೇ ತಂಡವಾಗಲಿ ಉಳಿಸಿಕೊಂಡ ಆಟಗಾರರಿಂದಲೇ ಒಬ್ಬರನ್ನು ಟೀಂ ಕ್ಯಾಪ್ಟನ್ ಮಾಡುತ್ತದೆ. ಹೀಗಾಗಿ ಈಗ ಆರ್ಸಿಬಿ ರಿಟೈನ್ ಮಾಡಿಕೊಂಡವರ ಪೈಕಿ ಒಬ್ಬರನ್ನು ಟೀಂ ಕ್ಯಾಪ್ಟನ್ ಆಗಿ ಅನೌನ್ಸ್ ಮಾಡಲಿದೆ ಎಂದಿದ್ದಾರೆ. ಅದರಂತೆ ಆರ್ಸಿಬಿ ತಂಡದ ಆಯ್ಕೆ ಗ್ಲೆನ್ ಮ್ಯಾಕ್ಸ್ವೆಲ್ ಆಗಲಿದ್ದಾರೆ ಎಂಬುದು ಬಹುತೇಕ ಖಚಿತ ಆಗಿದೆ.
ಆರಂಭದಿಂದಲೂ ಆರ್ಸಿಬಿ ನಾಯಕರ ಪಟ್ಟಿಯಲ್ಲಿ ಮ್ಯಾಕ್ಸಿ ಹೆಸರು ಮುಂಚೂಣಿಯಲ್ಲಿದೆ. ಇವರಿಗೆ ಬಿಗ್ ಬ್ಯಾಷ್ ಲೀಗ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಮುನ್ನಡೆಸಿದ ಅನುಭವ ಇದೆ. ಹಾಗಾಗಿ ವಿರಾಟ್ ಕೊಹ್ಲಿಯ ನಂತರ ಉತ್ತರಾಧಿಕಾರಿಯಾಗಿ ಮ್ಯಾಕ್ಸ್ವೆಲ್ ಆಗಲಿದ್ದಾರೆ.