ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ದಂಡ ವಿಧಿಸಿದೆ.
ಹೌದು, ಎರಡನೇ ಪಂದ್ಯದಲ್ಲಿ ಅನಗತ್ಯ ವರ್ತನೆ ತೋರಿದ್ದರು ಪಾಕ್ ವೇಗಿ ಶಾಹೀನ್ ಶಾ ಅಫ್ರಿದಿ. ಈ ಮೂಲಕ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.9 ಪ್ರಕಾರ ಅಫ್ರಿದಿ ಪ್ರಾಥಮಿಕ ಹಂತದ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅಫ್ರಿದಿಗೆ ಪಂದ್ಯದ ಸಂಭಾವನೆಯ ಶೇ. 15ರಷ್ಟನ್ನು ದಂಡವಾಗಿ ಹೇರಿದೆ.
ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರರು, ಅಂಪೈರ್, ಸಹಾಯಕ ಸಿಬ್ಬಂದಿ ಮತ್ತು ಪಂದ್ಯದ ಅಧಿಕಾರಿಗಳ ಹಾಗೂ ಬೇರೆ ಯಾವುದೇ ವ್ಯಕ್ತಿಗೆ ನೋವುಂಟು ಮಾಡಬಾರದು. ಒಂದು ವೇಳೆ ಹೀಗೆ ಮಾಡಿದ್ರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಐಸಿಸಿ ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ.