ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಯೋಜನೆಯಲ್ಲಿ ಹೊಸ ಲವ್ ಸಾಂಗ್

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಯೋಜನೆಯಲ್ಲಿ ಹೊಸ ಲವ್ ಸಾಂಗ್

ಕೊರೊನಾ ಎರಡನೇ ಅಲೆಯ ಲಾಕ್​​ಡೌನ್ ಬಳಿಕ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಕೆಲಸ ಕಾರ್ಯಗಳು ನಿಧಾನವಾಗಿ ಗರಿಗೆದರಿವೆ. ಈ ನಡುವೆ ಮೊಗ್ಗಿನ ಮನಸ್ಸು ಖ್ಯಾತಿಯ ನಿರ್ದೇಶಕ ಶಶಾಂಕ್ ನಿರ್ದೇಶಿಸಲಿರುವ ಹೊಸ ಸಿನಿಮಾ ಸಾಂಗ್ ಕಂಪೋಸಿಂಗ್ ಕೂಡ ಶುರುವಾಗಿದೆ.

ಸ್ಯಾಂಡಲ್‌ವುಡ್‌ ನಿರ್ದೇಶಕ ಶಶಾಂಕ್ ಅವರ ಮುಂದಿನ ಸಿನಿಮಾದಲ್ಲಿ ಅರ್ಜುನ್ ಜನ್ಯ ಕೆಲಸ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರೋ ಸಂಗತಿ. ಹೊಸ ಸಿನಿಮಾಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಕಂಪೋಸ್ ಆಗುತ್ತಿದ್ದು, ಚಿತ್ರತಂಡ ಸದ್ಯ ಇದರ ತಯಾರಿಯಲ್ಲಿದೆ.

ಈ ಕುರಿತು ನಿರ್ದೇಶಕ ಶಶಾಂಕ್ ಅವರೇ ಮಾಹಿತಿ ನೀಡಿ ವಿಡಿಯೋ ಟ್ವೀಟ್​ ಮಾಡಿದ್ದು, ಲಾಕ್‌ಡೌನ್‌ನಲ್ಲಿ ಸಾಕಷ್ಟು ಆನ್‌ಲೈನ್ ಹೋಮ್​​ ವರ್ಕ್​​ ಸೆಷನ್​​​ಗಳ ಬಳಿಕ ಇಂದು ಮ್ಯಾಜಿಕಲ್ ಕಾಂಪೊಸರ್ ಅರ್ಜುನ್‌ ಜನ್ಯ ಅವರು ಅತ್ಯುತ್ತಮ ಲವ್ ​​​ಸಾಂಗ್​​ವೊಂದನ್ನು ಕಂಪೋಸ್​​ ಮಾಡಿದ್ದಾರೆ. ಹೊಸ ಕಲಾವಿದ ಪ್ರವೀಣ್ ಎಂಬೋರನ್ನು ಈ ಬಾರಿ ಪರಿಚಯ ಮಡಲಾಗುತ್ತಿದೆ ಎಂದು  ತಿಳಿಸಿದ್ದಾರೆ. ವಿಡಿಯೋದಲ್ಲಿ ಅರ್ಜುನ್ ಜನ್ಯ ಅವರು ಕೀ ಬೋರ್ಡ್​ ನುಡಿಸುತ್ತಿದ್ದು, ಹಾಡುವುದನ್ನು ನೋಡಬಹುದಾಗಿದೆ.

The post ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಯೋಜನೆಯಲ್ಲಿ ಹೊಸ ಲವ್ ಸಾಂಗ್ appeared first on News First Kannada.

Source: newsfirstlive.com

Source link