ವಾಂಖೆಡೆ ಅಂಗಳದಲ್ಲಿ ವಿರಾಟ್​ ಕೊಹ್ಲಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್​​ ಹಾಕುವಲ್ಲಿ ಕೂಲ್​​ ಕ್ಯಾಪ್ಟನ್​ ಎಂ ಎಸ್​​ ಧೋನಿ ಯಶಸ್ವಿಯಾದರು. ಹೈವೋಲ್ಟೆಜ್​ ಟಚ್​ ಪಡೆದುಕೊಂಡಿದ್ದ ಪಂದ್ಯದಲ್ಲಿ ಬ್ಯಾಟಿಂಗ್​​, ಬೌಲಿಂಗ್​ನಲ್ಲಿ ಸಿಎಸ್​ಕೆ ಪಾರಮ್ಯ ಮೆರೆದರೆ, ಆರ್​​ಸಿಬಿ ಪಡೆ ಕಂಪ್ಲೀಟ್​​ ಫ್ಲಾಫ್​​ ಶೋ ನೀಡಿತು. ಬ್ಯಾಟ್ಸಮ್ಯಾನ್​ಗಳಂತೂ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್​​ ಪರೇಡ್​​ ನಡೆಸಿ ನಿರಾಸೆ ಮೂಡಿಸಿದರು.

ಟಾಸ್​​ ಗೆದ್ದು ಬ್ಯಾಟಿಂಗ್​​ ಆಯ್ದುಕೊಂಡ ನಾಯಕನ ನಿರ್ಧಾರವನ್ನ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್​​ ಗಾಯಕ್ವಾಡ್​​​, ಫಾಪ್​​ ಡು ಪ್ಲೆಸಿಸ್​​ ಸಮರ್ಥಿಸಿಕೊಂಡರು. ಮೊದಲ ವಿಕೆಟ್​​ಗೆ ಈ ಜೋಡಿ 74 ರನ್​ಗಳ ಕಾಣಿಕೆ ನೀಡಿತು. 10ನೇ ಓವರ್​​ ಬೌಲಿಂಗ್​​ ವೇಳೆ ಯುಜುವೇಂದ್ರ ಚಹಲ್​​ ಬ್ರೇಕ್​ ಥ್ರೂ ನೀಡಿದರು. ಚಹಲ್​​ ಬೌಲಿಂಗ್​ನಲ್ಲಿ ಕೈಲ್​​ ಜೆಮಿಸನ್​ಗೆ ಕ್ಯಾಚ್​​ ನೀಡಿ ಗಾಯಕ್ವಾಡ್​​ ಔಟ್​​ ಆದರು.

ಒಂದೇ ಓವರ್​ನಲ್ಲಿ ಫಾಪ್​​, ರೈನಾಗೆ ಹರ್ಷಲ್​ ಗೇಟ್​​​ ಪಾಸ್​
ಅರ್ಧಶತಕ ಸಿಡಿಸಿದ​ ಡು ಪ್ಲೆಸಿಸ್​​ ಮತ್ತು 24 ರನ್​ಗಳೊಂದಿಗೆ ತಂಡಕ್ಕೆ ನೆರವಾಗಿದ್ದ ಸುರೇಶ್​​ ರೈನಾ ಈ ಇಬ್ಬರಿಗೂ ಒಂದೇ ಓವರ್​ನಲ್ಲಿ ಹರ್ಷಲ್​ ಪಟೇಲ್​​ ಗೇಟ್​​ ಪಾಸ್​​ ನೀಡಿದರು. ಇಷ್ಟೇ ಅಲ್ಲ 18ನೇ ಓವರ್​ನಲ್ಲಿ ಅಂಬಟಿ ರಾಯುಡು ಡಗೌಟ್​​​ ಸೇರಿದ್ದು ಕೂಡ ಹರ್ಷಲ್​​ ಬೌಲಿಂಗ್​ನಲ್ಲೇ.

ಅಂತಿಮ ಓವರ್​​ನಲ್ಲಿ ಸರ್​. ಜಡೇಜಾ ಪರಾಕ್ರಮ​​.
3 ವಿಕೆಟ್​​​ ಕಬಳಿಸಿ ಯಶಸ್ವಿ ಬೌಲರ್​​ ಆಗಿದ್ದ ಹರ್ಷಲ್​​ ಪಟೇಲ್​​ ಮೇಲೆ ಅಂತಿಮ ಓವರ್​ನಲ್ಲಿ ರವೀಂದ್ರ​ ಜಡೇಜಾ ಪರಾಕ್ರಮ ಮೆರೆದರು. ಸೊನ್ನೆಯಲ್ಲಿದ್ದಾಗಲೇ ಸಿಕ್ಕ ಒಂದು ಜೀವದಾನವನ್ನ ಸಮರ್ಥವಾಗಿ ಬಳಸಿಕೊಂಡ ಜಡ್ಡು, ಅರ್ಧಶತಕ ಸಿಡಿಸಿ ಮಿಂಚಿದರು. ಕೊನೆಯ ಓವರ್​ನಲ್ಲಿ ಬರೋಬ್ಬರಿ 37 ರನ್​​ ಚಚ್ಚಿದ ಜಡೇಜಾ 28 ಎಸೆತಗಳಲ್ಲಿ 62 ರನ್​​ ಕಲೆ ಹಾಕಿದರು. ಅಂತಿಮವಾಗಿ 20 ಓವರ್​​ಗಳ ಅಂತ್ಯಕ್ಕೆ CSK​​ 4 ವಿಕೆಟ್​​ ನಷ್ಟಕ್ಕೆ 191 ರನ್​ಗಳ ಬೃಹತ್​​ ಮೊತ್ತ ಪೇರಿಸಿತು.

192 ರನ್​ಗಳ ಸವಾಲಿನ ಗುರಿ ಬೆನ್ನತ್ತಿದ ಆರ್​ಸಿಬಿ ಪಾಳಯಕ್ಕೆ ದೇವದತ್​​ ಪಡಿಕ್ಕಲ್​​ ಕಿಕ್​​ ಸ್ಟಾರ್ಟ್​​ ನೀಡಿದರು. ಆರಂಭದಿದಂಲೇ ಅಟ್ಯಾಕಿಂಗ್​​ ಶಾಟ್ಸ್​​ ಪ್ಲೇ ಮಾಡಿದ ಪಡಿಕ್ಕಲ್​​ ಬೌಂಡರಿ, ಸಿಕ್ಸರ್​ಗಳ ಮೂಲಕ ರಂಜಿಸಿದರು. ಆದ್ರೆ ಕೇವಲ 8 ರನ್​ಗಳಿಗೆ ಔಟಾದ ನಾಯಕ ವಿರಾಟ್​​ ಕೊಹ್ಲಿ ನಿರಾಸೆ ಮೂಡಿಸಿದರು.

ಬೌಲಿಂಗ್​​ನಲ್ಲೂ ಕಮಾಲ್​ ಮಾಡಿದ ಸೂಪರ್​ಸ್ಟಾರ್​ ಜಡೇಜಾ.
ಕೊಹ್ಲಿ ಬೆನ್ನಲ್ಲೇ ಭರವಸೆ ಮೂಡಿಸಿದ್ದ ದೇವದತ್​​ ಪಡಿಕ್ಕಲ್​​ ಕೂಡ 34 ರನ್​ಗಳಿಸಿ ಔಟಾದರು. ಇದರೊಂದಿಗೆ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಪಾಳಯದ ಪೆವಿಲಿಯನ್​​ ಪರೇಡ್​​ ಆರಂಭವಾಯ್ತು. ವಾಷಿಂಗ್ಟನ್​​ ಸುಂದರ್​​, ಗ್ಲೇನ್​​ ಮ್ಯಾಕ್ಸ್​ವೆಲ್​​, ಎಬಿ ಡಿವಿಲಿಯರ್ಸ್​ ಜಡೇಜಾ ಸ್ಪಿನ್​​ ಮೋಡಿಗೆ ಬಲಿಯಾದ್ರೆ, ಡೇನಿಯಲ್​​ ಕ್ರಿಶ್ಚಿಯನ್​​ ಜಡ್ಡು ಸೂಪರ್​​ ಫೀಲ್ಡಿಂಗ್​ಗೆ ಔಟಾದರು.

ಹರ್ಷಲ್​​ ಪಟೇಲ್​​, ನವದೀಪ್​​ ಸೈನಿಗೆ ಇಮ್ರಾನ್​​ ತಾಹೀರ್​​ ಗೇಟ್​ಪಾಸ್​​ ನೀಡಿದರು. ಯಜುವೇಂದ್ರ ಚಹಲ್​, ಮೊಹಮದ್​​ ಸಿರಾಜ್​​ ಕೊನೆಯವೆಗೂ ಕ್ರಿಸ್​​ ಕಚ್ಚಿ ನಿಲ್ಲುವಲ್ಲಿ ಯಶಸ್ವಿಯಾದರು. ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ತಂಡ 20 ಓವರ್​​ಗಳಲ್ಲಿ 9 ವಿಕೆಟ್​​​ ನಷ್ಟಕ್ಕೆ 122 ರನ್​​ ಗಳಿಸಲಷ್ಟೇ ಶಕ್ತವಾಯ್ತು.

ಅಂತಿಮವಾಗಿ ಚೆನ್ನೈ ಸೂಪರ್​​ ಕಿಂಗ್ಸ್​​ 69 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ಬೌಲಿಂಗ್​​, ಬ್ಯಾಟಿಂಗ್​​ ಎರಡರಲ್ಲೂ ಸಾಲಿಡ್​ ಪರ್ಫಾಮೆನ್ಸ್​​​​ ನೀಡಿದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇದೇ ಗೆಲುವಿನೊಂದಿಗೆ ಸಿಎಸ್​ಕೆ ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿತು.

The post ಮ್ಯಾಜಿಕ್ ಮಾಡಿದ ಜಡೇಜಾ; RCB ವಿರುದ್ಧ ಗೆದ್ದು ಅಗ್ರ ಸ್ಥಾನಕ್ಕೇರಿದ CSK appeared first on News First Kannada.

Source: News First Kannada
Read More