ರಾಮ ರಾಮ ರೇ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ನಿರ್ದೇಶಕ ಎಂದು ಸ್ಥಾನ ಪಡೆದ ಸತ್ಯಪ್ರಕಾಶ್ ಅವರ ಹೊಸ ಸಿನಿಮಾ ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರೀಕರಣ ಆರಂಭವಾಗಿದೆ. ಇದರೊಂದಿಗೆ ಪುನೀತ್​​ ರಾಜ್​ಕುಮಾರ್ ಅವರೊಂದಿಗೆ ಸತ್ಯಪ್ರಕಾಶ್​ ಮಾಡಬೇಕಿದ್ದ ಸಿನಿಮಾ ಮತ್ತಷ್ಟು ತಡವಾಗುವುದು ಖಚಿತವಾಗಿದೆ. ಈ ನಡುವೆ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರತಂಡದೊಂದಿಗೆ ಕೈಜೋಡಿಸಿರುವ ಪುನೀತ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಅಂದಹಾಗೇ, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಹೊತ್ತಿಗೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರವೊಂದನ್ನು ಸತ್ಯಪ್ರಕಾಶ್ ನಿರ್ದೇಶನ ಮಾಡಬೇಕಿತ್ತು. ಕೋವಿಡ್ ಮತ್ತು ಲಾಕ್ಡೌನ್ ನಿರ್ಬಂಧಗಳಿಂದಾಗಿ ಆ ಚಿತ್ರ ಸ್ವಲ್ಪ ತಡವಾಗುತ್ತಾ ಬಂದಿತ್ತು. ಆ ಚಿತ್ರದ ಚರ್ಚೆಯ ಸಂದರ್ಭದಲ್ಲೇ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಎಳೆಯನ್ನು ಸತ್ಯಪ್ರಕಾಶ್ ಪುನೀತ್ ಅವರ ಬಳಿ ಹೇಳಿದ್ದರು.

ಹೊಸ ಕಲಾವಿದರಿಗಾಗಿಯೇ ತಯಾರಿಸಿದ್ದ ಆ ಕಥೆಯ ವಸ್ತು ಹಾಗೂ ಚಿತ್ರಕಥೆಯಲ್ಲಿದ್ದ ಹೊಸತನ, ಪುನೀತ್ ಅವರಿಗೂ ಸಹ ಮೆಚ್ಚುಗೆಯಾಗಿ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಇತ್ತರು. ಆಗ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.

ಪಿಆರ್ಕೆ ಹಾಗೂ ಸತ್ಯ ಮತ್ತು ಮಯೂರ ಪಿಕ್ಚರ್ಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಏಪ್ರಿಲ್ ನಲ್ಲಿ ಶುರುವಾಗಿ, ಬಹುತೇಕ ಚಿತ್ರೀಕರಣ ಮುಗಿಸಿದೆ. ಈಗ ನಿರ್ಮಾಣನಂತರ ಕೆಲಸಗಳು ನಡೆಯುತ್ತಿದ್ದು, ಮೊನ್ನೆ ನಡೆದ ಚಿತ್ರದ ಅಂತಿಮ ಹಂತದ ಚಿತ್ರೀಕರಣದ ವೇಳೆ ಪುನೀತ್ ರಾಜ್ ಕುಮಾರ್ ಭೇಟಿ ನೀಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

The post ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದ ಶೂಟಿಂಗ್​​ ಶುರು- ನಿರ್ದೇಶಕ ಸತ್ಯಪ್ರಕಾಶ್​ಗೆ ಪುನೀತ್ ಗುಡ್ ​ಲಕ್​ appeared first on News First Kannada.

Source: newsfirstlive.com

Source link