ಮ್ಯೂಸಿಕ್​ ಡೈರೆಕ್ಟರ್​ ಆದ ನೀನಾಸಂ ಸತೀಶ್​..ಸದ್ಯದಲ್ಲೇ ಕೊಡಲಿದ್ದಾರೆ ಸರ್ಪೈಸ್​​..!


ನಟ ನೀನಾಸಂ ಸತೀಶ್​​ ಅವರು ಇತ್ತೀಚಿಗೆ ಮೊಟ್ಟ ಮೊದಲ ಬಾರಿಗೆ ತಮ್ಮ ಮುದ್ದು ಮಗಳ ಫೋಟೋವನ್ನು, ಅಭಿಮಾನಿಗಳು ಹಾಗೂ ಆಪ್ತರು, ಸ್ನೇಹಿತರೊಂದಿಗೆ ಹಂಚಿಕೊಂಡು ಸರ್ಪೈಸ್​ ನೀಡಿದ್ದರು. ಅದರ ಬೆನ್ನಲ್ಲೇ ತಮ್ಮ ಮಗಳಿಗಾಗಿ ಸತೀಶ್​ ಹೊಸ ಸಾಹಸವೊಂದಕ್ಕೆ ಕೈ ಹಾಕಿದ್ದಾರೆ.

ಹೌದು ನೀನಾಸಂ ಸತೀಶ್​ ಒಬ್ಬ ಅಭಿನಯ ಚತುರ. ಯಾವುದೇ ಪಾತ್ರಗಳನ್ನು ಕೊಟ್ಟರು ಲೀಲಾಜಾಲವಾಗಿ ನಟಿಸಿ ತಾನೊನ್ನ ಅಪ್ರತಿಮ ಕಲಾವಿದ ಎಂಬುದನ್ನು ತಮ್ಮ ನಟನೆಯಿಂದಲೇ ಸಾಬೀತು ಪಡಿಸಿದ ಅಭಿನಯದ ಶಿಖರ. ಇತ್ತೀಚಿಗೆ ಮೊಟ್ಟ ಮೊದಲ ಬಾರಿಗೆ ತಮ್ಮ ಮಗಳ ಫೋಟೋವನ್ನು ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಸದ್ಯ ತಮ್ಮ ಮಗಳಿಗಾಗಿ ಸತೀಶ್​ ಸದ್ಯ ಗಾಯಕ, ಗೀತೆ ರಚನೆಕಾರ, ಕಮ್​ ಸಂಗೀತ ನಿರ್ದೇಶಕನಾಗುತ್ತಿದ್ದಾರೆ..

News First Live Kannada


Leave a Reply

Your email address will not be published.