ಚಿತ್ರದುರ್ಗ: ಕೇಂದ್ರ ಬಿಜೆಪಿ ನಾಯಕರು ಸಿಎಂ ಬಿ.ಎಸ್​ ಯಡಿಯೂರಪ್ಪರನ್ನು ಕಟ್ಟಿ ಹಾಕಿದ್ದಾರೆ ಎಂದು ಸಿರಿಗೆರೆ ತರಳಬಾಳು ಪಂಡಿತಾರಾಧ್ಯ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಪಂಡಿತಾರಾಧ್ಯ ಸ್ವಾಮೀಜಿಯವರು, ಯಾವುದೇ ಸರ್ಕಾರಕ್ಕೆ ಪೂರ್ಣ ಸ್ವತಂತ್ರ್ಯವಿದ್ದಾಗ ಮಾತ್ರ ಉತ್ತಮ ಆಡಳಿತ ಸಾಧ್ಯ. ಕೇಂದ್ರ ಸರ್ಕಾರ ಹತೋಟಿ ಸಾಧಿಸುವ ಸಂಚು ಮಾಡಿದ್ರೆ ಆಡಳಿತ ಅಸಾಧ್ಯ ಎಂದರು.

ಎಂಥ ಮುಖ್ಯಮಂತ್ರಿ ಇದ್ದರೂ ಪರಿಪೂರ್ಣ ಆಡಳಿತ ಅಸಾಧ್ಯ. ಅವರ ಕೈ ಕಟ್ಟಿ ಹಾಕ್ತಾರೆ, ಬಿಎಸ್​ವೈ ವಿಚಾರದಲ್ಲಿ ಹೀಗಾಗಿದೆ. ಉತ್ತಮ ಆಡಳಿತಕ್ಕೆ ಎಲ್ಲರ ಸಹಕಾರ ಮುಖ್ಯ. ಯಾವುದೇ ಪಕ್ಷದ ವ್ಯಕ್ತಿ ಕನಿಷ್ಠ 5 ವರ್ಷ ಮುಂದುವರೆದರೆ ಒಳ್ಳೆಯ ಕಾರ್ಯ ಸಾಧ್ಯ. ಕೇಂದ್ರ, ರಾಜ್ಯ ಪ್ರತಿನಿಧಿಗಳು ಸಿಎಂಗೆ ಸಂಪೂರ್ಣ ಸ್ವತಂತ್ರ್ಯ ನೀಡಬೇಕು ಎಂದು ಕಿವಿಮಾತು ಹೇಳಿದರು.

ಸಿಎಂ ಬದಲಾವಣೆ ಬೇಡ

ಒಳ್ಳೆಯ ಆಡಳಿತ ನಡೆಸಲು ಅವಕಾಶ ಕಲ್ಪಿಸಬೇಕು. ಆಡಳಿತದಲ್ಲಿ ದೋಷ ಕಂಡರೆ ಆಗ ಕ್ರಮ ಕೈಗೊಳ್ಳಬೇಕು. ವರ್ಷ, 2 ವರ್ಷಕ್ಕೆ ಮುಖ್ಯಮಂತ್ರಿ ಬದಲಿಸಬಾರದು. ಸಿಎಂ ಬದಲಾವಣೆಯಿಂದ ಅಧಿಕಾರಿಗಳು ಕೆಲಸ ಮಾಡಲು ಅಸಾಧ್ಯ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: “ಬಿಎಸ್​ವೈರನ್ನ ವಿರೋಧಿಸೋದೂ ಒಂದೇ.. ತಮ್ಮನ್ನು ತಾವೇ ಸುಟ್ಟುಕೊಳ್ಳುವುದೂ ಒಂದೇ”: ಮಹಾಂತಲಿಂಗೇಶ ಶ್ರೀ

ಹಾಲಿ ಸಿಎಂಗೆ ಪೂರ್ಣಾವಧಿ ಕೆಲಸ ಮಾಡಲು ಬಿಡಬೇಕು. ಸಿಎಂ ಬಿಎಸ್​ವೈ ಯಶಸ್ವಿಯಾಗಿ ಕೋವಿಡ್ ನಿರ್ವಹಿಸಿದ್ದಾರೆ. ಈ ವೇಳೆ ನೆಪ ಮಾಡಿಕೊಂಡು ಸಿಎಂ ಬದಲಾವಣೆ ಕೃತ್ಯ ಒಳ್ಳೆಯ ರಾಜಕಾರಣದ ಸಂಕೇತ ಅಲ್ಲ. ಈಗಲಾದರೂ ಕೇಂದ್ರ ಸರ್ಕಾರ ಅನಾವಶ್ಯಕ ಮೂಗು ತೂರಿಸುವುದು ಬಿಡಲಿ. ಕರ್ನಾಟಕ ಸರ್ಕಾರಕ್ಕೆ ಹೆಚ್ಚು ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕಕ್ಕೆ ಆರ್ಥಿಕ ನೆರವು ಕೊಡಿ

ಆರ್ಥಿಕ ನೆರವು ನೀಡದೆ ಪದೇಪದೇ ಕಿರುಕುಳ ನೀಡಿದರೆ ಉತ್ತಮ‌ ಆಡಳಿತ ಅಸಾಧ್ಯ. ಮತ್ತೆ ತೆಗೆದು ಮತ್ತೊಬ್ಬರನ್ನು ಹಾಕುವುದು ಕರ್ನಾಟಕದಲ್ಲಿ ಅವ್ಯವಸ್ಥೆ ಸೃಷ್ಠಿ ಆಗುತ್ತದೆ. ಅವ್ಯವಸ್ಥೆ ಆಗಲು ಕೇಂದ್ರ ಸರ್ಕಾರ ಅವಕಾಶ ನೀಡಬಾರದು. ಹಾಲಿ ಸಿಎಂ ಮುಂದುವರೆಸಬೇಕೆಂದು ಮನವಿ ಮಾಡಿದ್ದಾರೆ.

The post ಯಡಿಯೂರಪ್ಪರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಿ; ತರಳಬಾಳು ಪಂಡಿತಾರಾಧ್ಯ ಸ್ವಾಮೀಜಿ ಆಗ್ರಹ appeared first on News First Kannada.

Source: newsfirstlive.com

Source link