ಯಡಿಯೂರಪ್ಪ ಆಪ್ತ ಉಮೇಶ್ ಕೆಲವೇ ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯನಾಗಿದ್ದು ಸೋಜಿಗ ಹುಟ್ಟಿಸುತ್ತದೆ! | BSY’s close aide Umesh became millionaire in a matter of a few years

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಮಗ ಬಿವೈ ರಾಘವೇಂದ್ರ ಅವರೊಂದಿಗೆ ನಿಕಟ ಒಡನಾಟವಿಟ್ಟುಕೊಂಡಿದ್ದ ಉಮೇಶ್ ಅವರ ಊಹೆಗೂ ನಿಲುಕದಷ್ಟು ಚಿಕ್ಕ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರದಂದು ದಾಳಿ ನಡೆಸಿ ಕಾಗದ ಪತ್ರ, ದಾಖಲೆಗಳನ್ನು ಪರಿಶೀಲಿಸಿದರು. ಕಳೆದ ಕೇವಲ 8-10 ವರ್ಷಗಳ ಅವಧಿಯಲ್ಲಿ ಉಮೇಶ್ ಬಹಳ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದರು. ಅವರ ಆದಾಯ ಪ್ರತಿ ವರ್ಷ ಹೆಚ್ಚಾಗುತ್ತಲೇ ಇತ್ತು. ಅವರು ವಾಸವಾಗಿರೋದು ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿಯಿರುವ ಈ 15/40 ಚದರ ಅಡಿ ವಿಸ್ತೀರ್ಣದ ಪುಟ್ಟ ಮನೆಯಲ್ಲಿ. ಅವರ ಮನೆ ಮುಂದೆ ಪಾರ್ಕ್ ಆಗಿರುವ ಈ ಸರ್ಕಾರೀ ಕಾರನ್ನೇ ಅವರು ಬಳಸುತ್ತಿದ್ದರು. ಯಾವುದೇ ರೀತಿಯಲ್ಲಿ ಸರ್ಕಾರದ ಭಾಗವಾಗಿರದ ಉಮೇಶ್ ಗೆ ಸರ್ಕಾರೀ ಕಾರು!

ಯಡಿಯೂರಪ್ಪ ಮತ್ತು ರಾಘವೇಂದ್ರ ಅವರ ಹಣಕಾಸಿನ ವ್ಯವಹಾರಗಳನ್ನು ಉಮೇಶ್ ನೋಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ. ಬಿ ಎಸ್ ವೈ ಮುಖ್ಯಮಂತ್ರಿಯಾಗಿದ್ದಾಗ ವರ್ಗಾವಣೆ ದಂಧೆ, ಕಡತಗಳ ವಿಲೇವಾರಿ ಮೊದಲಾದವುಗಳೆಲ್ಲ ಉಮೇಶ್ ಸುಪರ್ದಿಯಲ್ಲಿ ನಡೆಯುತ್ತಿದ್ದವು.

ನೀರಾವರಿ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ 2,000 ಕೋಟಿ ರೂ. ಗಳ ಕಿಕ್ಬ್ಯಾಕ್ ಪಡೆದ ಅರೋಪ ಉಮೇಶ್ ಮೇಲಿದೆ. ಅದರಲ್ಲಿ ಅವರ ಪಾಲೆಷ್ಟು, ಮೇಲಿನವರ ಪಾಲೆಷ್ಟು ಅನ್ನೋದು ತೆರಿಗೆ ಅಧಿಕಾರಿಗಳೇ ಹೊರಹಾಕಬೇಕು.

ಈ ಮನೆಯನ್ನು ಉಮೇಶ್ ಅದೃಷ್ಟಶಾಲಿ ಎಂದು ಪರಿಗಣಿಸಿದ್ದರಿಂದ ಕೋಟ್ಯಾಧಿಪತಿಯಾದ ನಂತರವೂ ಖಾಲಿ ಮಾಡುವ ಗೋಜಿಗೆ ಹೋಗಲಿಲ್ಲವಂತೆ. ಶಿವಮೊಗ್ಗದವರಾಗಿರುವ ಉಮೇಶ್ ತನ್ನ ತವರೂರು ಆಯನೂರಿನಲ್ಲೂ ಸಾಕಷ್ಟು ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದ್ದು ಅಲ್ಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಪತ್ತೆಯಾಗಿರುವ ಆಸ್ತಿ ವಿವರಗಳು ಇನ್ನಷ್ಟೇ ಬೆಳಕಿಗೆ ಬರಬೇಕು.

ಇದನ್ನೂ ಓದಿ:  ಯಡಿಯೂರಪ್ಪ ಆಪ್ತ ಉಮೇಶ್ ‘ಕಾರು’ಬಾರು ಸೀದಾ ನೀರಾವರಿ ನಿಗಮ ಗೋಲ್​ ಮಾಲ್​ಗೆ ಲಿಂಕ್ ಆಗಿದೆ: ಐಟಿ ಮೂಲಗಳು

TV9 Kannada

Leave a comment

Your email address will not be published. Required fields are marked *