ಯಡಿಯೂರಪ್ಪ ಎಲ್ಲಾ ವರ್ಗದ ಮಾಸ್​​ ಲೀಡರ್​​​; ಶಾಸಕ ಎಂ.ಪಿ ರೇಣುಕಾಚಾರ್ಯ

ಯಡಿಯೂರಪ್ಪ ಎಲ್ಲಾ ವರ್ಗದ ಮಾಸ್​​ ಲೀಡರ್​​​; ಶಾಸಕ ಎಂ.ಪಿ ರೇಣುಕಾಚಾರ್ಯ

ಬೆಂಗಳೂರು: ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಬದಲಾವಣೆ ಕುರಿತು ಸಿಎಂ ರಾಜಕೀಯ ಕಾರ್ಯದರ್ಶಿ ಮತ್ತು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತಾಡಿದ ಎಂ.ಪಿ ರೇಣುಕಾಚಾರ್ಯ, ಸಿಎಂ ಬದಲಾವಣೆ ಬಗ್ಗೆ ಮಾಧ್ಯಮದಲ್ಲಿ ಬಂದ ವರದಿ ಗಮನಿಸಿದ್ದೇನೆ. ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಇನ್ನು, ನಾಯಕತ್ವ ಬದಲಾವಣೆ ಬಗ್ಗೆ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಮಾಹಿತಿ ಪಡೆಯುತ್ತೇನೆ. ಯಡಿಯೂರಪ್ಪ ಕೇವಲ ವೀರಶೈವ ಲಿಂಗಾಯತ ಸಮುದಾಯ ಮಾತ್ರವಲ್ಲ ಬದಲಿಗೆ ಎಲ್ಲಾ ವರ್ಗದ ಮಾಸ್​​ ಲೀಡರ್​​ ಎಂದು ಹೊಗಳಿದರು.

ಹೀಗೆ ಮುಂದುವರಿದ ಅವರು, ಬಿಜೆಪಿಗೆ ಎಲ್ಲಾ ಸಮುದಾಯಗಳ ಸಪೋರ್ಟ್​ ಇದೆ. ಅರುಣ್ ಸಿಂಗ್ ರಾಜ್ಯ ಪ್ರವಾಸಕ್ಕೂ ಮುನ್ನ ಸಹಿ ಸಂಗ್ರಹ ಮಾಡಿದ್ದು‌ ನಿಜ. ಕೇವಲ 66 ಶಾಸಕರು ಅಷ್ಟೇ ಅಲ್ಲ ಸಾಕಷ್ಟು ಶಾಸಕರು ಸಹಿ ಹಾಕಿದ್ದರು. ಬಳಿಕ ರಾಜ್ಯಾಧ್ಯಕ್ಷ ಕಟೀಲು ಸೂಚನೆ ಮೇರೆಗೆ ಅಲ್ಲಿಗೆ ಅದನ್ನು ಸ್ಟಾಪ್​​ ನಿಲ್ಲಿಸಲಾಗಿತ್ತು ಎಂದು ಹೇಳಿದರು.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಏರಿಕೆ; ಸಂಸತ್​​ಗೆ ಸೈಕಲ್​​​ ತುಳಿದು ಬಂದು ಡಿ.ಕೆ ಸುರೇಶ್​​ ಪ್ರತಿಭಟನೆ

ಯಡಿಯೂರಪ್ಪ ನಮ್ಮ ನಾಯಕರು. ಅವರ ನಾಯಕತ್ವದಲ್ಲೇ ಮುನ್ನಡೆಯುತ್ತೇವೆ. ಇವರು ನಮ್ಮ ರಾಜಕೀಯ ಮಾರ್ಗದರ್ಶಕರು ಎಂದರು ಶಾಸಕ ಎಂ.ಪಿ ರೇಣುಕಾಚಾರ್ಯ. ಇನ್ನು, ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಗೃಹ ಸಚಿವ ಬಸವರಾಜ್​​ ಬೊಮ್ಮಾಯಿ, ಎಂ.ಪಿ ರೇಣುಕಾಚಾರ್ಯ ಸೇರಿದಂತೆ ಹಲವರು ಬಿ.ಎಸ್​ ಯಡಿಯೂರಪ್ಪನ್ನು ಭೇಟಿಯಾಗಿದ್ದಾರೆ.

The post ಯಡಿಯೂರಪ್ಪ ಎಲ್ಲಾ ವರ್ಗದ ಮಾಸ್​​ ಲೀಡರ್​​​; ಶಾಸಕ ಎಂ.ಪಿ ರೇಣುಕಾಚಾರ್ಯ appeared first on News First Kannada.

Source: newsfirstlive.com

Source link