ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ವಿಚಾರ ಚರ್ಚೆಯಾಗ್ತಿದೆ. ಇಂದು ಸ್ವತಃ ಸಿಎಂ ಬಿಎಸ್​ ಯಡಿಯೂರಪ್ಪ ರಾಜೀನಾಮೆ ಕುರಿತು ಮಾತನಾಡಿರೋದು ಅಚ್ಚರಿ ಮೂಡಿಸಿದೆ. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುಲಭವಲ್ಲ ಎಂದಿದ್ದಾರೆ.

ನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್​, ಸಿಎಂ ಬದಲಾವಣೆಯದ್ದು ಏನೇನು ಕತೆ ನನಗೆ ಗೊತ್ತಿಲ್ಲ, ಯಡಿಯೂರಪ್ಪನವರ ಲೀಡರ್​​ಶಿಪ್​​​ನಲ್ಲಿ ಚುನಾವಣೆ ನಡೆದಿದೆ. ಮೊನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ “ಯಡಿಯೂರಪ್ಪನವರೇ ಇನ್ನೆರಡು ವರ್ಷ ಸಿಎಂ” ಅಂತ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಅವರ ಪಕ್ಷದ ಆಂತರಿಕ ವಿಚಾರ ಎಂದರು.

ಇದನ್ನೂ ಓದಿ: ‘ರಾಜೀನಾಮೆ ಕೊಟ್ಟು ಹೋಗ್ತೀನಿ..’ -ಸಿಎಂ ಶಾಕಿಂಗ್​ ಪ್ರತಿಕ್ರಿಯೆ

ಒಟ್ನಲ್ಲಿ ಅವರ ಪಕ್ಷದಲ್ಲಿ ಶಾಸಕರ ನಡುವೆಯೂ ಭಿನ್ನಾಭಿಪ್ರಾಯ, ಸಚಿವರ ನಡುವೆ ಭಿನ್ನಾಭಿಪ್ರಾಯ, ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ. ಹೀಗೆ ಎಲ್ಲರ ಭಿನ್ನಾಭಿಪ್ರಾಯದಿಂದ ಆಡಳಿತ ಕುಸಿದಿದೆ. ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಸುಲಭವಂತೂ ಅಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದ್ರು.

The post ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುಲಭ ಅಲ್ಲ -ಡಿ.ಕೆ ಶಿವಕುಮಾರ್ appeared first on News First Kannada.

Source: newsfirstlive.com

Source link