ಯಡಿಯೂರಪ್ಪ ವೀರಶೈವ ಲಿಂಗಾಯತ ಅಂದ್ರೆ ಅವರು ಹಿಂದೂ ಅಲ್ಲ: ಸಾಗರಹಳ್ಳಿ ನಟರಾಜ್ – Yediyurappa Not a Hindu If he veerashaiva lingayat Says sagaranahalli Nataraj


ಯಡಿಯೂರಪ್ಪ ವೀರಶೈವ ಲಿಂಗಾಯತ ಅಂದ್ರೆ ಅವರು ಹಿಂದೂ ಅಲ್ಲ ಎಂದು ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಯಡಿಯೂರಪ್ಪ ವೀರಶೈವ ಲಿಂಗಾಯತ ಅಂದ್ರೆ ಅವರು ಹಿಂದೂ ಅಲ್ಲ: ಸಾಗರಹಳ್ಳಿ ನಟರಾಜ್

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,

ತುಮಕೂರು: ಕರ್ನಾಟಕದಲ್ಲಿ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಗಳ ಮಧ್ಯೆ ವೀರಶೈವ ಲಿಂಗಾಯತ (veerashaiva lingayat) ಪ್ರತ್ಯೇಕ ಧರ್ಮ ಕೂಗು ಮತ್ತೆ ಕೇಳಿಬಂದಿದೆ. ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ಅವರು ವೀರಶೈವ ಲಿಂಗಾಯತ ಮಹಾಸಭಾ ಸಮಾವೇಶದ ಪೂರ್ವ ಸಭೆಯ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದು, ಯಡಿಯೂರಪ್ಪ(BS Yediyurappa) ಹಿಂದೂ ಅಲ್ಲ. ವೀರಶೈವ ಲಿಂಗಾಯತ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತುಮಕೂರಿನ ಖಾಸಗಿ ಹೋಟೆಲ್​ನಲ್ಲಿ ಇಂದು(ನ.10) ನಡೆದ ವೀರಶೈವ ಲಿಂಗಾಯತ ಮಹಾಸಭಾ ಸಮಾವೇಶದ ಪೂರ್ವಭಾವಿ ಸಭೆಯ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಾಗರಹಳ್ಳಿ ನಟರಾಜ್, ಯಡಿಯೂರಪ್ಪ ಹಿಂದೂ ಅಲ್ಲ. ವೀರಶೈವ ಲಿಂಗಾಯತ. ಯಡಿಯೂರಪ್ಪ ವೀರಶೈವ ಲಿಂಗಾಯತ ಅಂದ್ರೆ ಅವರು ಹಿಂದೂ ಅಲ್ಲ. ಯಡಿಯೂರಪ್ಪ ನಾನು ಹಿಂದೂ ಅಲ್ಲ ಅಂತ ಹೇಳೋದು ಬಿಡೋದು ಅವರ ವೈಯಕ್ತಿಕ ವಿಚಾರ. ಅವರು ಏನ್ ಬೇಕಾದ್ರು ಹೇಳಿಕೊಳ್ಳಲಿ ಎಂದು ಹೇಳಿದರು.

ಹಿಂದೂಸ್ತಾನ್ ಅಲ್ಲ, ಸಿಂಧೂಸ್ತಾನ್ ಮಾಡಿ: ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದ ಬಂಡಾಯ ಸಾಹಿತಿ ಬಸವರಾಜ್ ಸೂಳಿಭಾವಿ

ನಮ್ಮಲ್ಲಿ 106 ಉಪ‌ ಪಂಗಡಗಳಿವೆ. ಅವರೆಲ್ಲರೂ ವೀರಶೈವ ಲಿಂಗಾಯತರು. ಇವತ್ತಿನಿಂದ ಯಾರು ಲಿಂಗಾಧಾರಣೆ ಮಾಡ್ತಾರೋ, ಅವರೆಲ್ಲರೂ ವೀರಶೈವ ಲಿಂಗಾಯತರು‌. ನಮ್ಮ ಬೈಲವನ್ನೆಲ್ಲಾ ಒಪ್ಪಿಕೊಂಡು ಬರುವವರಿಗೆ ಸ್ವಾಗತ ಎಂದರು.

ವೀರಶೈವ ಲಿಂಗಾಯತ ಅನ್ನೋದು ಪ್ರತ್ಯೇಕ ಧರ್ಮ. ಹಿಂದೂ ಧರ್ಮಕ್ಕೂ, ನಮ್ಮ ಆಚರಣೆಗೂ ತುಂಬಾ ವ್ಯತ್ಯಾಸ ಇದೆ. ನಮ್ಮದೇ ಪ್ರತ್ಯೇಕ ಧರ್ಮ. ಹೇಗೆ ಬೌದ್ಧ ಧರ್ಮ, ಸಿಖ್ ಧರ್ಮ ಅಂತ ಪ್ರತ್ಯೇಕ ಮಾಡ್ತಿರೋ ಹಾಗೇ ನಮಗೂ ಪ್ರತ್ಯೇಕ ಧರ್ಮ ಕೊಡಿ ಎಂದು ಆಗ್ರಹಿಸಿದರು.

ಎಂಬಿ ಪಾಟೀಲ್ ಅವರ ಪ್ರತ್ಯೇಕ ಧರ್ಮ ಹೋರಾಟ ಸರಿಯಿದೆ. ಅದನ್ನ ನಾವು ಒಪ್ಪಿಕೊಳ್ತಿವಿ. ನಮ್ಮಲ್ಲೂ ಸಹ ಆಚರಣೆಗಳು ವಿಭಿನ್ನವಾಗಿವೇ. ಕೆಲವರಿಗೆ ವಿಭೂತಿ ಧರಿಸೋದು ಇಷ್ಟ ಇಲ್ಲದೇ ಇರಬಹುದು. ಇನ್ನು ಕೆಲವರಿಗೆ ರುದ್ರಾಕ್ಷಿ ಧರಿಸೋದು ಇಷ್ಟ ಇಲ್ಲದೆ ಇರಬಹುದು. ಇಂತಹವುದೆಲ್ಲಾ ಸೇರಿ ವೀರಶೈವ ಲಿಂಗಾಯತ ಧರ್ಮ ಎಂದು ಹೇಳಿದರು.

ನಾವು ಸಹ ಹಿಂದೂ ಧರ್ಮದ ಎಲ್ಲಾ ಹಬ್ಬಗಳನ್ನ ಮಾಡುತ್ತೇವೆ. ನಮ್ಮ ಆಚರಣೆ , ಶಾಸ್ತ್ರ, ಸಂಸ್ಕೃತಿ ಬೇರೆ. ನಾವು ಹಿಂದೂಗಳಲ್ಲ. ನಮಗೆ ಪ್ರತ್ಯೇಕ ಧರ್ಮ ಕೊಡಿ ಎಂದು ಹೇಳುತ್ತೇವೆ. ಆದ್ರೆ, ಸದ್ಯ ಸಮಾವೇಶದಲ್ಲಿ ಪ್ರತ್ಯೇಕ ಧರ್ಮದ ಬಗ್ಗೆ ಚರ್ಚೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.