ತುಮಕೂರು: ಯಡಿಯೂರಪ್ಪ ಅವರ ಸರ್ಕಾರವನ್ನು ಕೆಳಗಿಳಿಸಿದರೆ ಬಿಜೆಪಿ ಪಕ್ಷ ಸರ್ವನಾಶವಾಗುತ್ತೆ ಎಂದು ತುಮಕೂರಿನಲ್ಲಿ ಬೆಳ್ಳಾವಿ ಮಠದ ಶ್ರೀ ಶ್ರೀ ಕಾರದ ವೀರ ಬಸವ ಸ್ವಾಮೀಜಿ ಹೇಳಿದರು.

ಸಿಎಂ ವಿಚಾರವಾಗಿ ನಡೆಯುತ್ತಿರುವ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರನ್ನು ಸರ್ಕಾರದಿಂದ ಇಳಿಸುವುದು ಸೂಕ್ತವಲ್ಲ. ಇಂದು ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟುವುದರಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದಾರೆ. ಅಧಿಕಾರಕ್ಕೆ ಬಂದಾಗಲೆಲ್ಲಾ ಪಕ್ಷದಲ್ಲಿ ಅವರಿಗೆ ತೊಂದರೆ ಕೊಟ್ಟಿದ್ದಾರೆ. ಆದರೂ ಅವರು ಕುಗ್ಗದೆ ಕೆಲಸ ಮಾಡಿದ್ದಾರೆ ಎಂದರು.

ಇವರು ಹಿಂದೂ ಸನಾತನ ಧರ್ಮದಲ್ಲಿ ಧೀಮಂತ ನಾಯಕ. ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಯಾವುದೇ ಜಾತಿ ಧರ್ಮವನ್ನು ನೋಡದೇ ನನ್ನ ಬೆಳೆ ನನ್ನ ರೈತ ಎಂದು ಎಲ್ಲರನ್ನು ಸಮಾನವಾಗಿ ನೋಡುತ್ತಿರುವ ಇವರನ್ನು ಸರ್ಕಾರದಿಂದ ಇಳಿಸುವುದು ಸರಿಯಲ್ಲ. ಅವರ ಜೊತೆ ನಾವೆಲ್ಲ ಸ್ವಾಮೀಜಿಗಳು ಇದ್ದೇವೆ. ಅವರನ್ನು ರಕ್ಷಣೆ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಕ್ರೀದ್ ಹಬ್ಬ- ಇಂದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವಿಲ್ಲ

ಒಂದು ವೇಳೆ ಅವರನ್ನು ಸರ್ಕಾರದಿಂದ ಕೆಳಗಿಳಿಸಿದರೆ ಬಿಜೆಪಿ ಪಕ್ಷ ಸರ್ವನಾಶವಾಗುತ್ತೆ. ಇದೇ ರೀತಿ ಮುಂದುವರಿದರೆ ನಾವು ಹೈಕಮಾಂಡ್‍ಗೆ ಹೇಗೆ ವಿಷಯ ಮುಟ್ಟಿಸಬೇಕೆಂದು ಗೊತ್ತು ಎಂದು ಎಚ್ಚರಿಸಿದರು.

The post ಯಡಿಯೂರಪ್ಪ ಸರ್ಕಾರವನ್ನು ಕೆಳಗಿಳಿಸಿದರೆ ಬಿಜೆಪಿ ಸರ್ವನಾಶ: ಶ್ರೀ ಕಾರದವೀರಬಸವ ಸ್ವಾಮೀಜಿ appeared first on Public TV.

Source: publictv.in

Source link