ಯಡಿಯೂರಪ್ಪ ಸರ್ಕಾರ ಬರಬೇಕಾದ್ರೆ ಬಳ್ಳಾರಿ ರೆಡ್ಡಿ ಸಹೋದರರು ಹಣದ ಸಹಾಯ ಮಾಡಿದ್ದರು: ಬಿಜೆಪಿ ಶಾಸಕ ಬಹಿರಂಗ ಹೇಳಿಕೆ | Madalu Virupakshappa on Janaradhana Reddy Karunakara Reddy Economical Help in forming BS Yediyurappa BJP Govt


ಯಡಿಯೂರಪ್ಪ ಸರ್ಕಾರ ಬರಬೇಕಾದ್ರೆ ಬಳ್ಳಾರಿ ರೆಡ್ಡಿ ಸಹೋದರರು ಹಣದ ಸಹಾಯ ಮಾಡಿದ್ದರು: ಬಿಜೆಪಿ ಶಾಸಕ ಬಹಿರಂಗ ಹೇಳಿಕೆ

ಬಿಎಸ್ ಯಡಿಯೂರಪ್ಪ, ಜನಾರ್ದನ ರೆಡ್ಡಿ

ವಿಜಯನಗರ: ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಸರ್ಕಾರ ಬರಬೇಕಾದ್ರೆ ಬಳ್ಳಾರಿ ರೆಡ್ಡಿ ಸಹೋದರರು ಹಣದ ಸಹಾಯ ಮಾಡಿದ್ದರು. 2008 ಕ್ಕಿಂತ ಮೊದಲು ಬಿಜೆಪಿ ಸರ್ಕಾರ ಇರಲಿಲ್ಲ. ಸರ್ಕಾರ ಬರಬೇಕಿದ್ದರೆ ಹಣ ಬೇಕು. ಈ ವಿಚಾರವನ್ನು ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ ಅವರು ಕರುಣಾಕರ ರೆಡ್ಡಿ ಬಳಿ ಹೇಳಿದ್ದರು. ತಕ್ಷಣ ಕರುಣಾಕರ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರಿಗೆ ಪೋನ್ ಮಾಡಿದ್ದರು. ಒಂದೇ ಮಾತಿಗೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಬೇಕಾದ್ರೆ ನಾನು ಹಣದ ಸಹಾಯ ಮಾಡುವೆ ಎಂದು ಹೇಳಿ ಹಣಕಾಸಿನ ಸಹಾಯವನ್ನು ರೆಡ್ಡಿ ಸಹೋದರರು ಮಾಡಿದ್ದರು ಎಂದು ಬಿಜೆಪಿ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಬಹಿರಂಗವಾಗಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಶ್ರೀರಾಮಲು ಈ ಮೂರು ಜನ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಹಕಾರ ನೀಡಿ ರಾಜ್ಯ ಸುತ್ತಿದ್ದರು. ಇವರ ಸಹಕಾರದ ಪರಿಣಾಮ 2008 ರಿಂದ 2013 ವರೆಗೆ ಬಿಜೆಪಿ ಸರ್ಕಾರ ಬಂತು ಎಂದು ರೆಡ್ಡಿಗಳು ಬಿಜೆಪಿಗೆ ಚುನಾವಣೆ ವೇಳ ಹಣಕಾಸಿನ ಸಹಾಯ ಮಾಡಿದ್ದನ್ನು ಬಹಿರಂಗ ವೇದಿಕೆಯಲ್ಲಿಯೇ ಬಿಜೆಪಿ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಬಾಯಿ ಬಿಟ್ಟಿದ್ದಾರೆ. ಚುನಾವಣೆ ವೇಳೆ ಹಣಕಾಸಿನ ಸಹಾಯ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ.

TV9 Kannada


Leave a Reply

Your email address will not be published.