ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ವಿಚಾರದಲ್ಲಿ ಹಾಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದು ಈ ಸ್ಥಾನ ನನಗೆ ಬಂದ್ಯಾ ಪುಟ್ಟ ಹೋದ್ಯಾ ಪುಟ್ಟ ಇದ್ದಂಗೆ ಎಂದಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕಿಂತ ನಾನು ಶಾಸಕನಾಗೇ ಇರುತ್ತೇನೆ. ನನಗೆ ಇದರಅವಶ್ಯಕತೆ ಇಲ್ಲ.ಇದರಲ್ಲಿ ಕೆಲಸ ಮಾಡೋದು ಏನು ಇಲ್ಲ ಚೇಂಬರ್ ಮತ್ತು ಚೇರು ಬಿಟ್ರೆ ಏನು ಇಲ್ಲ. ಇದೊಂಥರಾ ಬಂದ್ಯಾ ಪುಟ್ಟ ಹೋದ್ಯಾ ಪುಟ್ಟ ಇದ್ದ ಹಾಗೇ ಎಂದು ರೇಣುಕಾಚಾರ್ಯ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಮೊನ್ನೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ ನನ್ನ ಮೇಲೆ ಕೇಸ್ ಹಾಕಿ ಎಂದು ಹೇಳಿದ್ದೇನೆ. ಕೊರೊನಾ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಕೇಸ್ ಹಾಕಿ ಎಂದು ಎಸ್ಪಿಗೆ ತಿಳಿಸಿದ್ದೇನೆ. ಆದ್ರೆ ನಾನು ಯಾವುದೇ ಒತ್ತಡ ಹಾಕಿಲ್ಲ ಎಂದಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಬಳಿಕ ಬಿಜೆಪಿ ಪಕ್ಷದಲ್ಲಿ ಅನೇಕ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಸ್ಥಾನ ಹೊರತುಪಡಿಸಿ, ಉಳಿದೆಲ್ಲಾ ಬದಲಾವಣೆ ಆಗಲಿದೆ. ಯತ್ನಾಳ್ ಹೇಳಿರೋದು ಸತ್ಯ. ಅಭಿವೃದ್ಧಿ ದೃಷ್ಟಿಯಿಂದ ಒಂದಷ್ಟು ಬದಲಾವಣೆ ಆಗಲಿದೆ. ನೋಡಿದ ಮುಖಗಳನ್ನೇ ಜನ ಎಷ್ಟು ಬಾರಿ ನೋಡ್ತಾರೆ ಎಂದು ಪರೋಕ್ಷವಾಗಿ ಹಿರಿಯ ಸಚಿವರ ವಿರುದ್ಧ ಗರಂ ಆಗಿದ್ದಾರೆ.
The post ಯತ್ನಾಳ್ ಹೇಳಿದ್ದು ಸತ್ಯ.. ಸಂಪುಟದಲ್ಲಿ ಶೀಘ್ರದಲ್ಲೇ ಬದಲಾವಣೆ ಆಗುತ್ತೆ -ರೇಣುಕಾಚಾರ್ಯ appeared first on News First Kannada.