ವಿಜಯಪುರ: ಸಚಿವ ಸಿ.ಪಿ.ಯೋಗೇಶ್ವರ್​ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಭೇಟಿಯಾಗಿದ್ದಾರೆ.

ಕಲಬುರಗಿಯಿಂದ ವಿಜಯಪುರ ಜಿಲ್ಲೆಗೆ ಆಗಮಿಸಿರೋ ಪ್ರವಾಸೋದ್ಯಮ ಇಲಾಖೆ ಸಚಿವ ಯೋಗೇಶ್ವರ್ ಇಂದು ಯತ್ನಾಳ್ ಅವರನ್ನ ನಗರದ ಹೊರವಲಯದಲ್ಲಿರುವ ಹೋಟೆಲ್​ ಒಂದರಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಕೆಲ ಕಾಲ ರಹಸ್ಯ ಮಾತುಕತೆಯನ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮಾತುಕತೆಯ ಬಳಿ ಉಭಯ ನಾಯಕರು ಹೋಟೆಲ್​​ನಲ್ಲಿ ಊಟ ಮಾಡಿದ್ದಾರೆ. ಬಸನಗೌಡ ಪಾಟೀಲ್​ ಯತ್ನಾಳ್ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ಬಂಡಾಯವೆದ್ದಿದ್ದಾರೆ. ಅಲ್ಲದೇ ಸಿಪಿ ಯೋಗೇಶ್ವರ್ ಕೂಡ ಇತ್ತೀಚೆಗೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಸಿಪಿ ಯೋಗೇಶ್ವರ್ ಅವರು ಯತ್ನಾಳ್​​ರನ್ನ ಭೇಟಿಯಾಗಿರೋದು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಸಿಎಂ ವಿರೋಧಿಗಳನ್ನ ಮತ್ತೆ ಒಂದು ಗೂಡಿಸುತ್ತಿದ್ದಾರೆ ಅನ್ನೋ ಚರ್ಚೆ ಬಿಜೆಪಿಯಲ್ಲಿ ಶುರುವಾಗಿದೆ.

The post ಯತ್ನಾಳ್ ಜೊತೆ ಯೋಗೇಶ್ವರ್ ‘ರಹಸ್ಯ ಮಾತುಕತೆ’ -ಸರ್ಕಾರದ ವಿರುದ್ಧ ಮತ್ತೊಂದು ‘ಹೊಸ ಅಸ್ತ್ರ’? appeared first on News First Kannada.

Source: newsfirstlive.com

Source link