ಬರಬಾರದ ಕೊರೊನಾ ವಕ್ಕರಿಸಿದಾಗ ಐಸೋಲೇಟ್​ ಆಗಿ ವೈದ್ಯರ ಸಲಹೆಯಂತೆ ಕಷ್ಟಪಟ್ಟು ಟ್ರೀಟ್ಮೆಂಟ್ ಪಡೆದು ಗುಣಮುಖರಾದ್ರೆ ಆಯ್ತು ಅನ್ನೋ ಆಶಾಭಾವ ಈ ಸೋಂಕಿತನಲ್ಲಿ ಇತ್ತು. ಆದ್ರೆ ಕೊರೊನಾ ಜೊತೆ ಜೊತೆಗೆ ಯಮನಾಗಿ ಕಾಡಿದ ಬ್ಲಾಕ್​, ವೈಟ್ ಅಂಡ್​ ಯೆಲ್ಲೋ ಫಂಗಸ್​ ಮಾರಿಗೆ ರೋಗಿಯೊಬ್ಬ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಘಾಜಿಯಾಬ್​​ನಲ್ಲಿ ಕೊರೊನಾ, ಬ್ಲಾಕ್​, ವೈಟ್ ಹಾಗೂ ಯೆಲ್ಲೋ ಫಂಗಸ್​ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಘಾಜಿಯಾಬಾದ್​ನಲ್ಲಿರುವ ಹರ್ಷ ಆಸ್ಪತ್ರೆಯ ENT ವೈದ್ಯ ಬಿಪಿ ತ್ಯಾಗಿ, ಮೃತ ರೋಗಿಯ ಹೆಸರು ಕನ್ವರ್ ಸಿಂಗ್, ಈತನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದೀಗ ಟಾಕ್ಸೆಮಿಯಾಗೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

59 ವರ್ಷದ ಸಿಂಗ್ ಅವರು ವಕೀಲರಾಗಿದ್ದರು. ಕೊರೊನಾ ದೃಢಪಟ್ಟ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 24 ರಂದು ಇವರಿಗೆ ಮೂರು ಫಂಗಸ್ ಸೋಂಕು ಇರೋದು ದೃಢಪಟ್ಟಿತ್ತು ಅಂತಾ ಡಾ.ತ್ಯಾಗಿ ತಿಳಿಸಿದ್ದಾರೆ. ಇದೇ ವೇಳೆ ಮತ್ತೊಂದು ಮಾಹಿತಿ ನೀಡಿರುವ ಡಾ.ತ್ಯಾಗಿ.. ನಮ್ಮ ಆಸ್ಪತ್ರೆಯಲ್ಲಿ ಮತ್ತೊಂದು ಯೆಲ್ಲೋ ಫಂಗಸ್​ ಕಾಣಿಸಿಕೊಂಡಿದೆ. ಸದ್ಯ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ.

The post ಯಮನಂತೆ ಕಾಡಿದ ಕೊರೊನಾ.. ಬ್ಲಾಕ್, ವೈಟ್​, ಯೆಲ್ಲೋ ಫಂಗಸ್​ಗೆ ಒಳಗಾಗಿ ರೋಗಿ ಸಾವು​ appeared first on News First Kannada.

Source: newsfirstlive.com

Source link