ದೆಹಲಿ: ಯಮುನಾ ನದಿಯಲ್ಲಿ ಮಾಲಿನ್ಯಕಾರಕ ವಸ್ತುಗಳು ಹೆಚ್ಚಾದ ಹಿನ್ನೆಲೆ, ಭಾರೀ ಪ್ರಮಾಣದ ವಿಷಪೂರಿತ ನೊರೆ ಕಾಣಿಸಿಕೊಂಡಿದೆ. ದೆಹಲಿಯ ಖಿಲಂದಿ ಕುಂಜ್ ಬಳಿ ನೊರೆ ಕಾಣಿಸಿಕೊಂಡಿದ್ದು, ನೀರಿನ ಗುಣಮಟ್ಟ ಕುಸಿದಿದೆ ಅನ್ನೋದನ್ನ ಸೂಚಿಸುತ್ತಿದೆ.
ಇದೇ ಕಲುಷಿತ ನೀರಿನಲ್ಲಿ ಹಲವು ಮಹಿಳೆಯರು ಛತ್ಪೂಜಾ ಅಂಗವಾಗಿ ಪವಿತ್ರಸ್ನಾನ ಮಾಡುತ್ತಿರುವ ದೃಶ್ಯಗಳು ಕೂಡ ಕಂಡುಬಂದಿದೆ. ಮಾಲಿನ್ಯಕಾರಕ ವಸ್ತುಗಳ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ, ಈ ಹಿಂದೆ ಕೂಡ ಹಲವು ಬಾರಿ ನದಿಯಲ್ಲಿ ನೊರೆ ಕಾಣಿಸಿಕೊಂಡಿತ್ತು. ಸದ್ಯ, ಕಲುಷಿತ ನೀರಿನಲ್ಲೇ ಜನರು ಸ್ನಾನ ಮಾಡುತ್ತಿರುವುದರಿಂದ ಚರ್ಮರೋಗಗಳು ಉಂಟಾಗುವ ಸಾಧ್ಯತೆಗಳು ಕೂಡ ಹೆಚ್ಚಾಗಿದೆ.
ನದಿಯ ನೀರಿನ ಮೇಲೆ ನೊರೆಯನ್ನು ಕಂಡು ಹಲವರು ಯಮುನಾ ನದಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಕಲುಷಿತಗೊಳ್ಳುತ್ತಿರೋ ನದಿಯ ಆತಂಕ ವ್ಯಕ್ತಪಡಿಸಿದ್ದಾರೆ. ನೀರಿನಲ್ಲಿ ಇಳಿದರೇ ಅನಾರೋಗ್ಯಕ್ಕೆ ಒಳಗಾಗುತ್ತೇವೆ ಎಂದು ಗೊತ್ತಿದ್ದರೂ ಕೂಡ ಪವಿತ್ರ ಸ್ನಾತ ಮಾಡಲು ನದಿಗೆ ಇಳಿಯುತ್ತಿದ್ದೇವೆ ಎಂದು ಮಹಿಳೆಯರು ಹೇಳಿದ್ದಾರೆ. ಲಾಕ್ಡೌನ್ ಸಮಯದಲ್ಲಿ ನದಿಯಲ್ಲಿ ಕಲುಷಿತ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
You would think this is Antarctica. No, this is Yamuna river ❤ pic.twitter.com/iL8Em9WMxV
— BALA (@erbmjha) October 30, 2021