ಲಖನೌ: ಕೊರೊನಾ ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಸೋಂಕಿತರ ಸಂಖ್ಯೆ ಮಾತ್ರವಲ್ಲದೇ ಸಾವಿನ ಸಂಖ್ಯೆಯಲ್ಲೂ ವಿಶ್ವಮಟ್ಟದಲ್ಲಿ ಭಾರತ ದಾಖಲೆ ಬರೆಯುತ್ತಿದೆ. ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರ ನಡೆಸುವುದು ಕುಟುಂಬಸ್ಥರಿಗೆ, ಸರ್ಕಾರಗಳಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಈ ನಡುವೆಯೇ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಯಮುನಾ ನದಿಯ ದಡದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಮೃತದೇಹಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲಾ ಕೇಂದ್ರವಾಗಿರುವ ಹಮೀರ್‌ಪುರದ ಬಳಿ ಹರಿಯುವ ಯಮುನಾ ನದಿಗೆ ಕೊರೊನಾ ಸೋಂಕಿತರ ಮೃತದೇಹವನ್ನು ಎಸೆಯಲಾಗಿದೆ. ನಿನ್ನೆ ಒಂದೇ ದಿನ ಸುಮಾರು 7 ಮೃತ ದೇಹಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಹಮೀರ್‌ಪುರದ ಎಸ್​​ಪಿ ಅನೂಪ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನದಿಯ ದಡದಲ್ಲಿ ಹಲವು ಮೃತದೇಹಗಳು ಪತ್ತೆಯಾಗಿರುವುದಾಗಿ ಹೇಳಿದ್ದಾರೆ.

ಕಾನ್ಪುರ ಹಾಗೂ ಹಮೀರ್‌ಪುರ ಜಿಲ್ಲೆಗಳಲ್ಲಿ ಸೋಂಕಿನಿಂದ ಸಾವನ್ನಪ್ಪಿದ ಅಂತ್ಯ ಸಂಸ್ಕಾರ ನಡೆಸಲು ಸಮಸ್ಯೆ ಎದುರಾಗುತ್ತಿದೆ. ಇದರ ನಡುವೆಯೇ ಅರೆಬರೆ ಬೆಂದ ಮೃತ ದೇಹಗಳನ್ನು ತಂದು ನದಿಗೆ ಎಸೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯದಲ್ಲಿ ಆತಂಕ ಹೆಚ್ಚಿಸಿದೆ. ನದಿಯಲ್ಲಿ ಒಂದು ಅಥವಾ ಎರಡು ಮೃತ ದೇಹಗಳು ಸಿಗುವುದು ಇಲ್ಲಿ ಸಾಮಾನ್ಯ. ಆದರೆ ಕೊರೊನಾ ಎರಡನೇ ಅಲೆಯ ನಡುವೆ ಇಷ್ಟು ಮೃತ ದೇಹಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಮೃತದೇಹಗಳ ಅಂತ್ಯ ಸಂಸ್ಕಾರದಲ್ಲಿ ಉಂಟಾಗುತ್ತಿರುವ ಲೋಪಗಳೇ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

The post ಯಮುನಾ ನದಿ ದಡದಲ್ಲಿ ಕೊರೊನಾ ಸೋಂಕಿತರ ಅರೆ ಬೆಂದ ಮೃತದೇಹಗಳು ಪತ್ತೆ appeared first on News First Kannada.

Source: newsfirstlive.com

Source link