ಬೆಂಗಳೂರು: ನಗರದ, ಕರ್ನಾಟಕ ವಿದ್ಯುತ್ ನಿಗಮದ ಆವರಣದಲ್ಲಿ 100 ಹಾಸಿಗೆಗಳ ಕೋವಿಡ್ ಆಸ್ಪತ್ರೆ ನಿರ್ಮಾಣವಾಗಿದೆ. ಈ ಸಮಾರಂಭದಲ್ಲಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.

ಬೋಯಿಂಗ್ ಸಂಸ್ಥೆಯು ಸೆಲ್ಕೋ, ಡಾಕ್ಟರ್ಸ್ ಫಾರ್ ಯೂ, ಸಹಯೋಗದೊಂದಿಗೆ ನಿರ್ಮಿಸಿರುವ 100 ಹಾಸಿಗೆಯ ಆಸ್ಪತ್ರೆ ಇದಾಗಿದ್ದು,
ಕೋವಿಡ್ ಎರಡನೇ ಅಲೆ ನಿಯಂತ್ರಣ ಕಾರ್ಯದಲ್ಲಿ ಸರ್ಕಾರದ ಜೊತೆ ಖಾಸಗಿ ಸಂಸ್ಥೆ,ಹಾಗೂ ಎನ್​ಜಿಓಗಳು ಕೈ ಜೋಡಿಸಿರುವುದು ಶ್ಲಾಘನೀಯ ಅಂತ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಅಲ್ಲದೇ, ಬೋಯಿಂಗ್ ಸಂಸ್ಥೆಯು ಸೆಲ್ಕೋ ಮತ್ತು ಡಾಕ್ಟರ್ಸ್ ಫಾರ್ ಯೂ ಸಹಯೋಗದೊಂದಿಗೆ ಕೋವಿಡ್ ಕೇರ್ ಸೆಂಟರ್ ನಿರ್ಮಿಸಿರುವುದು ಸಂತೋಷದ ವಿಚಾರ.ರಾಜ್ಯದ ಆರೋಗ್ಯ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲಿ ಸರ್ಕಾರದ ಜೊತೆ ಇತರ ಖಾಸಗಿ ಸಂಸ್ಥೆಗಳು ಕೈ ಜೋಡಿಸಲಿ ಎಂದು ಕರೆ ನೀಡಿದ್ದೀವಿ ಅಂತ ಸಿಎಂ ಹೇಳಿದ್ದಾರೆ.

ಕೋವಿಡ್ಮೂರನೇ ಅಲೆ ಸಮರ್ಥವಾಗಿ ಎದುರಿಸಲು ಸರ್ಕಾರ ಸನ್ನದ್ಧವಾಗಿದೆ. ಜನರು ಭಯಪಡುವ ಅಗತ್ಯ ಇಲ್ಲ. ಪ್ರತಿ ಜಿಲ್ಲೆಯಲ್ಲಿ ಮಕ್ಕಳ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗಿದೆ. ಸದ್ಯಕ್ಕೆ ಕೋವಿಡ್ ಅಲೆ ಕಡಿಮೆ ಆಗ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಕೋವಿಡ್ ನಿಂದ ಮೃತರಾದ ಆರ್ಥಿಕ ದುರ್ಬಲವಾದ ಕುಟುಂಬದವರಿಗೆ ಒಂದು ಲಕ್ಷ ಕೊಡಲು ಸರ್ಕಾರ ತೀರ್ಮಾನಿಸಿದೆ ಅಂತ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

The post ಯಲಹಂಕದಲ್ಲಿ 100 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ appeared first on News First Kannada.

Source: newsfirstlive.com

Source link