ಶಾಸಕ ಎಸ್ ಆರ್ ವಿಶ್ವನಾಥ್, ವಿಶ್ವನಾಥ್ ವಿರುದ್ಧ ಸೋತಿದ್ದ ಗೋಪಾಲಕೃಷ್ಣ
ಬೆಂಗಳೂರು: ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ 5 ತಿಂಗಳ ಹಿಂದೆ ಸ್ಕೆಚ್ ಹಾಕಿದ್ದ ವಿಡಿಯೋ ಇದೀಗ ಬಹಿರಂಗವಾಗಿದೆ. ಮಾದನಾಯನಹಳ್ಳಿಯಲ್ಲಿರುವ ಗೋಪಾಲಕೃಷ್ಣ ಮನೆಯಲ್ಲಿ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಹತ್ಯೆ ಮಾಡಲು ನಡೆಸಿದ್ದ ಮಾತುಕತೆ ವಿಡಿಯೋ ಬಹಿರಂಗವಾಗಿದ್ದು, ಈ ಬಗ್ಗೆ ಸಿಎಂ ಮತ್ತು ಗೃಹಸಚಿವರಿಗೆ ಇಂದು ಬೆಳಗ್ಗೆ ವಿಶ್ವನಾಥ್ ಕರೆ ಮಾಡಿ ಮಾಹಿತಿ ನಿಡಿದ್ದಾರೆ. ಹೆಚ್ಚುವರಿ ಭದ್ರತೆಗೆ ವ್ಯವಸ್ಥೆ ಮಾಡುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಹತ್ಯೆ ಸ್ಕೆಚ್ ಬಗ್ಗೆ ಶಾಸಕ ಎಸ್ಆರ್ ವಿಶ್ವನಾಥ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದು, ಈ ಸಂಬಂಧ ನಾನು ಈವರೆಗೆ ಯಾವುದೇ ದೂರು ನೀಡಿಲ್ಲ. ಪ್ರಕರಣ ಸಂಬಂಧ ಸಿಸಿಬಿ ವಿಚಾರಣೆ ನಡೆಸುತ್ತಿದೆ ಅಂತ ತಿಳಿಸಿದ್ದಾರೆ.