ಯಶಸ್ವಿಯಾಯ್ತು ಪ್ರಾಯೋಗಿಕ ಚಿಕಿತ್ಸೆ; ಬರಲಿದೆ ಕ್ಯಾನ್ಸರ್​​ ರೋಗದಿಂದ ಗುಣಮುಖ ಮಾಡುವ ಔಷಧಿ | First Time In History cancer simply vanished after an experimental treatment


ಯಶಸ್ವಿಯಾಯ್ತು ಪ್ರಾಯೋಗಿಕ ಚಿಕಿತ್ಸೆ; ಬರಲಿದೆ ಕ್ಯಾನ್ಸರ್​​ ರೋಗದಿಂದ ಗುಣಮುಖ ಮಾಡುವ ಔಷಧಿ

ಕ್ಯಾನ್ಸರ್

Image Credit source: keralakaumudi

ದೋಸ್ಟಾರ್ಲಿಮಾಬ್ ಎಂಬುದು ಪ್ರಯೋಗಾಲಯ-ಉತ್ಪಾದಿತ ಅಣುಗಳನ್ನು ಹೊಂದಿರುವ ಔಷಧವಾಗಿದ್ದು ಅದು ಮಾನವ ದೇಹದಲ್ಲಿ ಬದಲಿ ಪ್ರತಿಕಾಯಗಳಾಗಿ ಕಾರ್ಯನಿರ್ವಹಿಸುತ್ತದೆ

ಗುದನಾಳದ ಕ್ಯಾನ್ಸರ್ (rectal cancer) ಹೊಂದಿರುವ ಜನರ ಒಂದು ಸಣ್ಣ ಗುಂಪನ್ನುಕ್ಯಾನ್ಸರ್ (Cancer) ಪ್ರಾಯೋಗಿಕ ಪರೀಕ್ಷೆಗೊಳಪಡಿಸಿದ್ದು ಅವರೆಲ್ಲರೂ ರೋಗಮುಕ್ತರಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಪತ್ರಿಕೆಯ ವರದಿ ಪ್ರಕಾರ ಒಂದು ಚಿಕ್ಕ ಕ್ಲಿನಿಕಲ್ ಪ್ರಯೋಗದಲ್ಲಿ, 18 ರೋಗಿಗಳು ಸುಮಾರು ಆರು ತಿಂಗಳ ಕಾಲ ದೋಸ್ಟಾರ್ಲಿಮಾಬ್ (Dostarlimab) ಎಂಬ ಔಷಧಿಯನ್ನು ನೀಡಲಾಗಿತ್ತು. ಹೀಗೆ ಔಷಧಿ ತೆಗೆದುಕೊಂಡವರಲ್ಲಿ ಕ್ಯಾನ್ಸರ್ ಗೆಡ್ಡೆಗಳು ಕಣ್ಮರೆಯಾಗಿವೆಯಂತೆ. ದೋಸ್ಟಾರ್ಲಿಮಾಬ್ ಎಂಬುದು ಪ್ರಯೋಗಾಲಯ-ಉತ್ಪಾದಿತ ಅಣುಗಳನ್ನು ಹೊಂದಿರುವ ಔಷಧವಾಗಿದ್ದು ಅದು ಮಾನವ ದೇಹದಲ್ಲಿ ಬದಲಿ ಪ್ರತಿಕಾಯಗಳಾಗಿ ಕಾರ್ಯನಿರ್ವಹಿಸುತ್ತದೆ. ಗುದನಾಳದ ಕ್ಯಾನ್ಸರ್ ಇರುವ ಎಲ್ಲ 18 ರೋಗಿಗಳಿಗೆ ಒಂದೇ ಔಷಧವನ್ನು ನೀಡಲಾಯಿತು. ಚಿಕಿತ್ಸೆಯ ಪರಿಣಾಮವಾಗಿ, ಪ್ರತಿ ರೋಗಿಯಲ್ಲಿ ಕ್ಯಾನ್ಸರ್ ಸಂಪೂರ್ಣವಾಗಿ ಮಾಯವಾಗಿದೆ. ಇದನ್ನುದೈಹಿಕ ಪರೀಕ್ಷೆಯಿಂದ ಕಂಡುಹಿಡಿಯಲಾಗುವುದಿಲ್ಲ. ಅದಕ್ಕಾಗಿ ಎಂಡೋಸ್ಕೋಪಿ, ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಅಥವಾ ಪಿಇಟಿ ಸ್ಕ್ಯಾನ್‌ಗಳು ಅಥವಾ ಎಂಆರ್‌ಐ ಸ್ಕ್ಯಾನ್‌ಗಳನ್ನು ಮಾಡಬೇಕು.

ನ್ಯೂಯಾರ್ಕ್‌ನ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ಡಾ ಲೂಯಿಸ್ ಎ. ಡಯಾಜ್ ಜೆ. ಇದು “ಕ್ಯಾನ್ಸರ್ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ” ಎಂದು ಹೇಳಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಕ್ಲಿನಿಕಲ್ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವ ರೋಗಿಗಳು ತಮ್ಮ ಕ್ಯಾನ್ಸರ್ ಅನ್ನು ತೊಡೆದುಹಾಕಲು ಇತರ ಚಿಕಿತ್ಸೆಗಳನ್ನೂ ಅನುಸರಿಸಿದ್ದಾರೆ. ಉದಾಹರಣೆಗೆ ಕಿಮೊಥೆರಪಿ, ವಿಕಿರಣ ಚಿಕಿತ್ಸೆ ಮುಂತಾದವು. 18 ರೋಗಿಗಳು ಮುಂದಿನ ಹಂತವಾಗಿ ಈ ಔಷಧಿಯ ಪ್ರಯೋಗಕ್ಕೆ ಮುಂದಾಗಿದ್ದು ಅದರ ಫಲಿತಾಂಶ ಅಚ್ಚರಿಯನ್ನುಂಟು ಮಾಡಿದೆ.

ಈ ಸಂಶೋಧನೆಗಳು ಈಗ ವೈದ್ಯಕೀಯ ಲೋಕದಲ್ಲಿ ಸದ್ದು ಮಾಡುತ್ತಿವೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ತಜ್ಞರಾಗಿರುವ ಡಾ. ಅಲನ್ ಪಿ.ವೇನೂಕ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಪ್ರತಿಯೊಬ್ಬ ರೋಗಿಯೂ ಸಂಪೂರ್ಣ ಗುಣಮುಖವಾಗಿರುವುದು ಇದೇ ಮೊದಲು. ಇಂಥಾ ಸಂಶೋಧನೆ ವಿಶ್ವದಲ್ಲೇ ಮೊದಲನೆಯದು ಎಂದು ಶ್ಲಾಘಿಸಿದರು. ಪ್ರಯೋಗ ಔಷಧದಿಂದ ಎಲ್ಲಾ ರೋಗಿಗಳು ಗಮನಾರ್ಹ ತೊಡಕುಗಳನ್ನು ಅನುಭವಿಸದ ಕಾರಣ ಇದು ವಿಶೇಷವಾಗಿ ಪ್ರಭಾವಶಾಲಿಯಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಯೋಗಕ್ಕಾಗಿ, ರೋಗಿಗಳು ಆರು ತಿಂಗಳವರೆಗೆ ಪ್ರತಿ ಮೂರು ವಾರಗಳಿಗೊಮ್ಮೆ ದೋಸ್ಟಾರ್ಲಿಮಾಬ್ ಅನ್ನು ತೆಗೆದುಕೊಂಡರು. ಅವರೆಲ್ಲರೂ ತಮ್ಮ ಕ್ಯಾನ್ಸರ್ ರೋಗ ಒಂದೇ ಹಂತದಲ್ಲಿದ್ದರು. ಅಂದರೆ ಗುದನಾಳದಲ್ಲಿ ಕ್ಯಾನ್ಸರ್ ಇದ್ದು,ಇದು ಬೇರೆಲ್ಲೂ ಹರಡಿರಲಿಲ್ಲ.

ಔಷಧವನ್ನು ಪರಿಶೀಲಿಸಿದ ಕ್ಯಾನ್ಸರ್ ಸಂಶೋಧಕರು ಚಿಕಿತ್ಸೆಯು ಭರವಸೆಯನ್ನು ತೋರುತ್ತಿದೆ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ. ಆದರೆ ಹೆಚ್ಚಿನ ರೋಗಿಗಳಿಗೆ ಇದು ಕಾರ್ಯನಿರ್ವಹಿಸುತ್ತದೆಯೇ ಮತ್ತು ಕ್ಯಾನ್ಸರ್ ನಿಂದ ರೋಗಿಗಳು ನಿಜವಾಗಿಯೂ ಗುಣಮುಖರಾಗುತ್ತಾರೆಯೇ ಎಂದು ನೋಡಲು ದೊಡ್ಡ ಪ್ರಮಾಣದ ಪ್ರಯೋಗದ ಅಗತ್ಯವಿದೆ ಎಂದು ಹೇಳಿದ್ದಾರೆ.

TV9 Kannada


Leave a Reply

Your email address will not be published.