‘ಯಶೋದಾ ಚಿತ್ರಕ್ಕೆ ತೋರಿದ ಪ್ರೀತಿ, ಅಭಿಮಾನ ನನಗೆ ಸಿಕ್ಕ ಉತ್ತಮ ಉಡುಗೊರೆ’; ಸಮಂತಾ ಭಾವುಕ ಪತ್ರ – Samantha Writes A Heartfelt Letter To Her Fans For The Success Of ‘Yashoda’


ಯಶೋದಾ ಚಿತ್ರದ ಗೆಲುವಿಗೆ ಕಾರಣರಾದ ಅಭಿಮಾನಿಗಳಿಗಾಗಿ ಸಮಂತಾ ಭಾವನಾತ್ಮಕ ಪತ್ರವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಯಶೋದಾ ಚಿತ್ರಕ್ಕೆ ತೋರಿದ ಪ್ರೀತಿ, ಅಭಿಮಾನ ನನಗೆ ಸಿಕ್ಕ ಉತ್ತಮ ಉಡುಗೊರೆ’; ಸಮಂತಾ ಭಾವುಕ ಪತ್ರ

ನಟಿ ಸಮಂತಾ​ ರುತ್ ಪ್ರಭು

ನಟಿ ಸಮಂತಾ​ ರುತ್ ಪ್ರಭು (Samantha Ruth Prabhu) ಅಭಿನಯದ ‘ಯಶೋದಾ’ (Yashoda) ಚಿತ್ರ ನ. 11 ರಂದು ತೆರೆಗೆ ಬಂದಿತ್ತು. ಚಿತ್ರ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಇಂದಿಗೆ ಒಂದು ವಾರವಾಗಿದೆ. ಬಾಕ್ಸ್​ ಆಫೀಸ್​ನಲ್ಲಿ ‘ಯಶೋದಾ’ ಚಿತ್ರ ಸಖತ್​  ಕಮಾಯಿ ಮಾಡುತ್ತಿದೆ. ಮಹಿಳಾ ಪ್ರಧಾನವಾದ ಈ ಚಿತ್ರವನ್ನು ಹರಿ-ಹರೀಶ್​ ನಿರ್ದೇಶನ ಮಾಡಿದ್ದಾರೆ. ತೆಲುಗು ಸೇರಿದಂತೆ ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಲ್ಲೂ  ಚಿತ್ರ ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕಾಗಿ ನಟಿ ಸಮಂತಾ ಸಾಕಷ್ಟು ಹಾರ್ಡ್​ ವರ್ಕ್​ ಮಾಡಿದ್ದು, ಎರಡು ವಿಭಿನ್ನ ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ತಮಗೆ ಆರೋಗ್ಯದ ಸಮಸ್ಯೆ ಇದ್ದರೂ ಅವರು ಚಿತ್ರಕ್ಕೆ ಡಬ್​ ಮಾಡಿದ್ದರು. ಚಿತ್ರದ ಪ್ರಚಾರಕ್ಕೆ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇಷ್ಟೆಲ್ಲಾ ತೊಂದರೆಗಳ ನಡುವೆ ಸಮಂತಾ ಫ್ಯಾನ್ಸ್​​ ಅವರ ಕೈಬಿಟ್ಟಿಲ್ಲ. ‘ಯಶೋದಾ’ ಚಿತ್ರವನ್ನು ಗೆಲ್ಲಿಸಿದ್ದಾರೆ. ಸದ್ಯ ನಟಿ ಸಮಂತಾ ತನ್ನ ಅಭಿಮಾನಿಗಳಿಗೆ ಪತ್ರದ ಮೂಲಕ ಧನ್ಯವಾದ ಹೇಳಿದ್ದಾರೆ.

‘ಯಶೋದಾ’ ಬಿಡುಗಡೆಯಾಗಿ ಒಂದು ವಾರ ಕಳೆದಿದೆ. ಮೂಲಗಳ ಪ್ರಕಾರ ಈ ಚಿತ್ರ 30 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. ಅತ್ಯಂತ ಕಡಿಮೆ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ. ಆದರೆ ನಿರ್ಮಾಪಕರ ಊಹೆಗೆ ಮೀರಿ ಈ ಚಿತ್ರ ಗಳಿಕೆ ಮಾಡುತ್ತಿದೆ. ಹೀಗಾಗಿ ‘ಯಶೋದಾ’ ಚಿತ್ರ ತಂಡ ಗೆಲುವಿನ ಖುಷಿಯಲ್ಲಿದೆ. ಚಿತ್ರದ ಗೆಲುವಿಗೆ ಕಾರಣರಾದ ಅಭಿಮಾನಿಗಳಿಗಾಗಿ ಸಮಂತಾ ಭಾವನಾತ್ಮಕ ಪತ್ರವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಪ್ರೀತಿಯ ಅಭಮಾನಿಗಳೇ, ನೀವು ‘ಯಶೋದಾ’ ಚಿತ್ರಕ್ಕೆ ತೋರಿಸಿದ ಪ್ರೀತಿ, ಅಭಿಮಾನ ನನಗೆ ಸಿಕ್ಕ ಉತ್ತಮ ಉಡುಗೊರೆ. ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ. ಇದು ಇಡೀ ‘ಯಶೋದಾ’ ಚಿತ್ರ ತಂಡದ ಶ್ರಮಕ್ಕೆ ಸಿಕ್ಕ ಪ್ರತಿಫಲ. ನೀವು ಥಿಯೇಟರ್​ಗಳಲ್ಲಿ ಸಂಭ್ರಮಿಸಿದ ಪರಿಯನ್ನು ನಾನು ಕಂಡಿದ್ದೇನೆ. ನಿಮ್ಮೆಲ್ಲಾ ಶುಭಾಶಯಗಳು ನನಗೆ ತಲುಪಿವೆ. ಪ್ರತಿಯೊಬ್ಬರಿಗೂ ನಾನು ಧನ್ಯವಾದ ತಿಳಿಸುತ್ತೇನೆ’ ಎಂದು ಪತ್ರ ಆರಂಭಿಸಿದ್ದಾರೆ ಸಮಂತಾ.

‘ಯಶೋದಾ ಚಿತ್ರದ ತಂಡಕ್ಕೂ ನಾನು ಧನ್ಯವಾದ ಅರ್ಪಿಸುತ್ತೇನೆ. ಅದರಲ್ಲಿಯೂ ನನ್ನ ಮೇಲೆ ನಂಬಿಕೆ ಇಟ್ಟು ಈ ಚಿತ್ರವನ್ನು ನಿರ್ಮಾಣ ಮಾಡಿದ ಕೃಷ್ಣ ಪ್ರಸಾದ್ ಅವರಿಗೆ ಮತ್ತು ನಿರ್ದೇಶಕರಾದ ಹರಿ-ಹರೀಶ್​ ಅವರಿಗೂ ತುಂಬು ಹೃದಯದ ಧನ್ಯವಾದ ತಿಳಿಸುತ್ತೇನೆ’ ಎಂದಿದ್ದಾರೆ ಅವರು. ಅದೇ ರೀತಿಯಾಗಿ ಚಿತ್ರದಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ ಇತರೆ ಸಹ ಕಲಾವಿದರಿಗೂ ಸಮಂತಾ ಧನ್ಯವಾದ ಹೇಳಿದ್ದಾರೆ.

ಸದ್ಯ ಸಮಂತಾ ಕೈಯಲ್ಲಿ ಹಲವು  ಆಫರ್​ಗಳಿವೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಅವರು ಮತ್ತೆ ಸಿನಿಮಾ ಕೆಲಸಗಳತ್ತ ಮುಖ ಮಾಡಲಿದ್ದಾರೆ. ‘ಶಾಕುಂತಲಂ’, ‘ಖುಷಿ’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓಡಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.