ದೇಶೀಯ ಕ್ರಿಕೆಟ್ನ ರಾಜ ಎಂದೇ ಕರೆಯಲಾಗುವ ರಣಜಿ ಟ್ರೋಫಿ ಸದ್ದು ಜೋರಾಗಿದೆ. ಸದ್ಯ ಮೊದಲ ಸುತ್ತಿನ ಎಲೈಟ್ ಪಂದ್ಯಗಳು ಮುಕ್ತಾಯಗೊಂಡಿವೆ. ಆದ್ರೆ ಕೆಲವರ ಇನ್ನಿಂಗ್ಸ್ಗಳು ಗಮನ ಸೆಳೆದಿದೆ. ಯಶ್ಧುಲ್ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿದ್ದರ ಹೊರತಾಗಿಯೂ FIVE ಬೆಸ್ಟ್ ಇನ್ನಿಂಗ್ಸ್, ಇಂಪ್ರೆಸ್ಸಿವ್ ಆಗಿವೆ.
ರಣಜಿ ಟ್ರೋಫಿಯಲ್ಲಿ ಯುವಕರ ಅಬ್ಬರ ಜೋರಾಗಿದ್ದು, ಆಟಗಾರರ ನಡುವೆ ಬಿಗ್ ಕಾಂಪಿಟೇಷನ್ ಏರ್ಪಟ್ಟಿದೆ. ಯಂಗ್ ಕ್ರಿಕೆಟರ್ಸ್, ಸೀನಿಯರ್ಗಳನ್ನೇ ನಿಬ್ಬೆರಗಾಗಿಸುವ ಪರ್ಫಾಮೆನ್ಸ್ ನೀಡಿದ್ದು, ದಿಗ್ಗಜರ ದಾಖಲೆಗಳನ್ನೇ ಪುಡಿಗಟ್ಟಿದ್ದಾರೆ. ಅದರಲ್ಲೂ ಅಂಡರ್-19 ಕ್ಯಾಪ್ಟನ್ ಯಶ್ಧುಲ್ ನೀಡಿದ ‘ಫಸ್ಟ್ ಕ್ಲಾಸ್’ ಇನ್ನಿಂಗ್ಸ್ಗಳು ವಿಶ್ವದ ಗಮನ ಸೆಳೆದಿದೆ. ಇದ್ರ ಹೊರತಾಗಿ ಟೂರ್ನಿಯಲ್ಲಿ ಇಂತಹ ಟಾಪ್-5 ಬೆಸ್ಟ್ ಇನ್ನಿಂಗ್ಸ್ಗಳು ಇಲ್ಲಿವೆ ನೋಡಿ!
ಸೌರಾಷ್ಟ್ರ ವಿರುದ್ಧ ದ್ವಿಶತಕ ಸಿಡಿಸಿದ ಸರ್ಫರಾಜ್ ಖಾನ್..!
ಮುಂಬೈ ರಣಜಿ ತಂಡದ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದಾರೆ. ಸೌರಾಷ್ಟ್ರ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ಈ ಯಂಗ್ ಪ್ಲೇಯರ್, ಭರ್ಜರಿ ದ್ವಿಶತಕ ಅಂದರೆ 275 ರನ್ ಸಿಡಿಸಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಸರ್ಫರಾಜ್ ಆಟಕ್ಕೆ ದಿಗ್ಗಜರೇ ಶಹಬ್ಬಾಸ್ಗಿರಿ ನೀಡಿದ್ದಾರೆ.
ಶತಕ ಸಿಡಿಸಿ ಫಾರ್ಮ್ಗೆ ಬಂದ ಅಜಿಂಕ್ಯ ರಹಾನೆ..!
ಸತತ ವೈಫಲ್ಯದಿಂದ ಭಾರತ ಟೆಸ್ಟ್ ತಂಡದಿಂದ ಕೈಬಿಡಲಾದ ಅಜಿಂಕ್ಯ ರಹಾನೆ ಮುಂಬೈ ತಂಡದ ಪರ ಆಡ್ತಿದ್ದಾರೆ. ರಾಷ್ಟ್ರೀಯ ತಂಡಕ್ಕೆ ದೂರವಾದ ಬೆನ್ನಲ್ಲೆ ತನಗೆ ಎದುರಾದ ದೇಶೀ ಅಗ್ನಿಪರೀಕ್ಷೆಯಲ್ಲಿ ರಹಾನೆ ಸೆಂಚೂರಿ ಬಾರಿಸಿ, ಟೀಮ್ ಇಂಡಿಯಾ ಸೆಲೆಕ್ಟರ್ಗಳಿಗೆ IAM FIT ಎಂಬ ಸಂದೇಶವನ್ನೂ ರವಾನಿಸಿದ್ದಾರೆ.
ಸ್ಫೋಟಕ 194 ರನ್ ಸಿಡಿಸಿದ ಶಾರೂಖ್ ಖಾನ್!
ಡೆಲ್ಲಿ ವಿರುದ್ಧ ತಮಿಳುನಾಡು ತಂಡದ ಆಲ್ರೌಂಡರ್ ಶಾರೂಖ್ ಖಾನ್ ಸಿಡಿಸಿದ ಸ್ಫೋಟಕ ಶತಕ, ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಕೇವಲ 148 ಎಸೆತಗಳಲ್ಲಿ 194 ರನ್ ಕಲೆ ಹಾಕಿದ ಶಾರೂಖ್, ದ್ವಿಶತಕದ ಅಂಚಿನಲ್ಲಿ ಎಡವಿದ್ರು. ಶಾರೂಖ್ರ ಬಿಗ್ ಇನ್ನಿಂಗ್ಸ್ ಬಗ್ಗೆ ಎಲ್ಲೆಡೆ ಟಾಕ್ ನಡೀತಿದ್ದು, ಭಾರತಕ್ಕೆ ಆಯ್ಕೆ ಮಾಡೋಕೆ ಚಿಂತನೆ ಕೂಡ ನಡೀತಿದೆ.
ಕನ್ನಡಿಗನ ಅರ್ಭಟಕ್ಕೆ ರೈಲ್ವೇಸ್ ಉಡೀಸ್..!
ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಗ್ರೇಟ್ ಪರ್ಫಾಮೆನ್ಸ್ ನೀಡಿದೆ. ಅದರಲ್ಲೂ ನಾಯಕ ಮನೀಷ್ ಪಾಂಡೆ, ಸ್ಫೋಟಕ ಇನ್ನಿಂಗ್ಸ್ಗೆ ಎದುರಾಳಿ ತತ್ತಿರಿಸ್ತು. ಮಿಡಲ್ ಆರ್ಡರ್ನಲ್ಲಿ ಮೇನ್ ಪಿಲ್ಲರ್ ಆಗಿ ನಿಂತ ಮನೀಷ್, ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 121 ಎಸೆತಗಳಲ್ಲಿ 156 ರನ್ ಚಚ್ಚಿದ್ದು, ಎಲ್ಲರನ್ನ ಇಂಪ್ರೆಸ್ ಮಾಡಿದೆ.
ಆಕರ್ಷಿಸಿದ ಹನುಮ ವಿಹಾರಿ ಕ್ಲಾಸಿಕ್ ಇನ್ನಿಂಗ್ಸ್
ಚಂಡೀಗಢದ ಎದುರು ಹೈದ್ರಾಬಾದ್ ಇಂಡಿಯಾ ತಂಡದ ಹನುಮ ವಿಹಾರಿ ನೀಡಿದ ಹೈ ಕ್ಲಾಸ್ ಪ್ರದರ್ಶನ ಭಾರತ ತಂಡದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಮೊದಲ ಇನ್ನಿಂಗ್ಸ್ ಅರ್ಧಶತಕ, 2ನೇ ಇನ್ನಿಂಗ್ಸ್ನಲ್ಲಿ ಶತಕದ ಸಾಧನೆ ಮಾಡಿದ್ದಾರೆ. ಸದ್ಯ ಶ್ರೀಲಂಕಾದ ಟೆಸ್ಟ್ ಸರಣಿಗೆ ಆಯ್ಕೆಯಾಗಿರೋ ವಿಹಾರಿ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಇವರಷ್ಟೆ ಅಲ್ಲ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 91 ರನ್ ಗಳಿಸಿ ಫಾರ್ಮ್ಗೆ ಮರಳುವ ವಿಶ್ವಾಸದಲ್ಲಿದ್ದಾರೆ. ಸಕೀಬಲ್ ಗನಿ ಸಿಡಿಸಿದ ತ್ರಿಶತಕ, ಟಿ.ಕೊಹ್ಲಿ, ಬಬುಲ್ ಕುಮಾರ್, ಎ.ವಸಿಸ್ಠ್ ಹೀಗೆ ಯುವ ಬ್ಯಾಟ್ಸ್ಮನ್ಗಳು ರನ್ ಕೊಳ್ಳೆಹೊಡೆದಿದ್ದಾರೆ. ಬ್ಯಾಟ್ಸ್ಮನ್ಗಳಷ್ಟೆ ಅಲ್ಲದೆ ಬೌಲರ್ಗಳು ವಿಕೆಟ್ ಬೇಟೆಯಾಡಿದ್ದಾರೆ.
ರಣಜಿ ಮೊದಲ ಪಂದ್ಯದಲ್ಲಿ ಮನೀಷ್.!
- ಇನ್ನಿಂಗ್ಸ್ 02
- ರನ್ 180
- ಎಸೆತ 156
- 04/06 13/10
ರಣಜಿ ಮೊದಲ ಪಂದ್ಯದಲ್ಲಿ ಸರ್ಫರಾಜ್
- ಇನ್ನಿಂಗ್ಸ್ 01
- ರನ್ 275
- ಎಸೆತ 401
- 04/06 30/07
ರಣಜಿ ಮೊದಲ ಪಂದ್ಯದಲ್ಲಿ ರಹಾನೆ
- ಇನ್ನಿಂಗ್ಸ್ 01
- ರನ್ 129
- ಎಸೆತ 290
- 04/06 19/02
ರಣಜಿ ಮೊದಲ ಪಂದ್ಯದಲ್ಲಿ ಶಾರೂಖ್
- ಇನ್ನಿಂಗ್ಸ್ 01
- ರನ್ 194
- ಎಸೆತ 148
- 04/06 20/10
ರಣಜಿ ಮೊದಲ ಪಂದ್ಯದಲ್ಲಿ ವಿಹಾರಿ
- ಇನ್ನಿಂಗ್ಸ್ 02
- ರನ್ 165
- ಎಸೆತ 283
- 04/06 23/00