ಬೆಂಗಾಳಿ ಸೂಪರ್​ಸ್ಟಾರ್ ಹಾಗೂ ಬಿಜೆಪಿ ನಾಯಕ ಯಶ್ ಕಾರಣದಿಂದಲೇ ಟಿಎಂಸಿ ಸಂಸದೆ ಹಾಗೂ ನಾಯಕ ನಟಿ ನುಸ್ರತ್ ಜಹಾನ್ ಪತಿಯಿಂದ ದೂರಾದ್ರಾ? ಅನ್ನೋ ಬಿಸಿ ಬಿಸಿ ಚರ್ಚೆ ಪಶ್ಚಿಮ ಬಂಗಾಳದಲ್ಲಿ ಶುರುವಾಗಿದೆ. ಯಶ್ ಹಾಗೂ ನುಸ್ರತ್ ಅತ್ಯಂತ ಕ್ಲೋಸ್ ಫ್ರೆಂಡ್ಸ್ ಆಗಿದ್ರು ಅನ್ನೋದು ಪಶ್ಚಮ ಬಂಗಾಳದಲ್ಲಿ ಎಲ್ಲರಿಗೂ ತಿಳಿದಿರುವಂಥದ್ದೆ.. ಆದ್ರೆ ಅವರಿಬ್ಬರ ನಡುವೆ ಪ್ರೀತಿ ಕೂಡಾ ಮೂಡಿತ್ತಾ? ಅದೇ ಕಾರಣದಿಂದಾಗಿ ನುಸ್ರತ್ ಪತಿ ನಿಖಿಲ್ ಜೈನ್​ರಿಂದ ದೂರಾದ್ರಾ? ಅನ್ನೋದು ಲೇಟೆಸ್ಟ್​ ಸುದ್ದಿಯಾಗಿದೆ.

ಹೌದು.. ಪಶ್ಚಿಮ ಬಂಗಳಾದ ಲೇಡಿ ಸೂಪರ್ ಸ್ಟಾರ್ ಹಾಗೂ ಯಂಗ್ ಸಂಸದೆ ನುಸ್ರತ್ ಜಹಾನ್ ತಮ್ಮ ಪತಿ ನಿಖಿಲ್ ಜೈನ್​ರಿಂದ ಬಹಳ ದಿನಗಳ ಹಿಂದೆಯೇ ದೂರಾಗಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಅವರು ಪ್ರೆಗ್ನೆಂಟ್​ ಆಗಿದ್ದು, ಅವರ ಹೊಟ್ಟೆಯಲ್ಲಿರೋ ಮಗು ನನ್ನದಲ್ಲ ಅಂತ ನುಸ್ರತ್​​ರ ಪತಿ ನಿಖಿಲ್ ಹೇಳಿದ್ದಾರೆ ಎನ್ನಲಾದ ಬೆನ್ನಲ್ಲೇ, ನುಸ್ರತ್ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಆ ಹೇಳಿಕೆಯಲ್ಲಿ ಅವರು 2019ರಲ್ಲಿ ಟರ್ಕಿಯಲ್ಲಿ ನಿಖಿಲ್​ರನ್ನು ಮದುವೆಯಾಗಿದ್ದರ ಬಗ್ಗೆ ವಿವರಣೆ ನೀಡಿದ್ದಾರೆ. ಜೊತೆಗೆ ಅದು ಮದುವೆಯೇ ಅಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಹಾಗಿದ್ರೆ ನುಸ್ರತ್ ಹೇಳಿದ್ದೇನು? ಅವರ ಮಾತುಗಳಲ್ಲೇ ಓದಿ..

ಆ ಮದುವೆ ಮದುವೆಯೇ ಅಲ್ಲ..!
ನಾವು ವಿದೇಶಿ ನೆಲದಲ್ಲಿದ್ದಾಗ.. ಜೊತೆಗೆ ಟರ್ಕಿಶ್ ಮದುವೆ ಕಾನೂನಿನ ಪ್ರಕಾರ ಆದ ಮದುವೆ. ಭಾರತದಲ್ಲಿ ಮದುವೆ ಅಂತಾ ಪರಿಗಣಿತವಾಗಲ್ಲ. ಅಕ್ಕಿಂತ ಹೆಚ್ಚಾಗಿ ಇದು ಅಂತರ್​ ಧರ್ಮೀಯ ವಿವಾಹ. ಹೀಗಾಗಿ ಸ್ಪೆಷಲ್ ಮ್ಯಾರೇಜ್ ಆ್ಯಕ್ಟ್ ಅಡಿಯಲ್ಲಿ ಇದನ್ನು ನೋಂದಾಯಿಸಿಕೊಳ್ಳಬೇಕಾಗುತ್ತೆ. ಆದ್ರೆ ನಮ್ಮ ವಿಷಯದಲ್ಲಿ ಇದಾಗಿಲ್ಲ. ಹೀಗಾಗಿ ಕಾನೂನಿನ ಪ್ರಕಾರ ಈ ಮದುವೆ ಮದುವೆಯಲ್ಲ. ಬದಲಿಗೆ ಲಿವ್ ಇನ್ ರಿಲೇಶನ್​ಶಿಪ್ ಅಷ್ಟೇ. ಹೀಗಾಗಿ ಡಿವೋರ್ಸ್​ನ ಪ್ರಶ್ನೆಯೇ ಉದ್ಭವಿಸಲ್ಲ.ಇನ್ನು ನಾವಿಬ್ಬರೂ ಬಹಳ ಹಿಂದೆಯೇ ಬೇರೆಯಾಗಿದ್ದೇವೆ. ಆದ್ರೆ ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ನಾನು ಮಾತನಾಡಲು ಇಚ್ಛಿಸುವುದಿಲ್ಲ. ಹೀಗಾಗಿ ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಬೇರೆಯಾದ ಆಧಾರದ ಮೇಲೆ ನನ್ನ ನಡೆಗಳನ್ನು ನನಗೆ ಸಂಬಂಧವಿಲ್ಲದ ಯಾರೂ ಪ್ರಶ್ನಿಸುವಂತಿಲ್ಲ. ಇನ್ನು ಆರೋಪಿತ ಮದುವೆ ಕಾನೂನು ಬಾಹಿರವಾಗಿದ್ದು, ಮುಂದುವರೆಯುವಂಥದ್ದಲ್ಲ. ಹೀಗಾಗಿ ಕಾನೂನಿನ ಕಣ್ಣಿನಲ್ಲಿ ಇದು ಮದುವೆಯೇ ಅಲ್ಲ.

ನಾನು ಬ್ಯುಸಿನೆಸ್​ ಅಥವಾ ಯಾವುದೇ ಕಾರಣಕ್ಕಾಗಿ ನಾನು ಎಲ್ಲಿಗೆ ಭೇಟಿ ನೀಡುತ್ತಿದ್ದೇನೆ.. ಏನು ಮಾಡುತ್ತಿದ್ದೇನೆ ಅನ್ನೋದು ನನ್ನಿಂದ ಬೇರೆಯಾದ ವ್ಯಕ್ತಿಗೆ ಸಂಬಂಧವಿಲ್ಲ. SOME ONE ಹೇಳಿದಂತೆ ನಾನು ಯಾರ ಹಣವನ್ನೂ ಬಳಸುತ್ತಿಲ್ಲ. ಬದಲಾಗಿ ನನ್ನ ಖರ್ಚನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಜೊತೆಗೆ ನನ್ನ ಕುಟುಂಬದ, ನನ್ನ ಸೋದರಿಯ ವಿದ್ಯಾಭ್ಯಾಸದ ಖರ್ಚನ್ನೂ ನಾನೇ ಮಾಡಿಕೊಂಡಿದ್ದೇನೆ. ನನಗೆ ಇನ್ನೊಬ್ಬರ ಕ್ರೆಡಿಟ್​ ಕಾರ್ಡ್ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ನ್ನನ್ನು ತಾನು ಶ್ರೀಮಂತ ಮತ್ತು ನಾನು ಅವರನ್ನ ಬೆಳೆಸಿದೆ ಅಂತಾ ಹೇಳುವ ವ್ಯಕ್ತಿಯೇ.. ನನ್ನ ಹಣವನ್ನ ಕಾನೂನು ಬಾಹಿರವಾಗಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಕಂಪ್ಲೇಂಟ್ ಕೂಡ ದಾಖಲಿಸುತ್ತಿದ್ದೇನೆ. ಅಷ್ಟೇ ಅಲ್ಲ ನನ್ನ ಬ್ಯಾಗ್​ಗಳು, ಬಟ್ಟೆ ಮತ್ತು ಆಭರಣಗಳೂ ಸಹ ಆ ವ್ಯಕ್ತಿ ಬಳಿಯೇ ಉಳಿದಿವೆ. ಕಾನೂನು ಬಾಹಿರವಾಗಿ ಅವರು ಅದನ್ನು ಇಟ್ಟುಕೊಂಡಿದ್ದಾರೆ.

ಹೀಗೆ ಗಂಭೀರವಾದ ಸಾಲು ಸಾಲು ಆರೋಪಗಳನ್ನು ನುಸ್ರತ್ ಜಹಾನ್ ಮಾಡಿದ್ದಾರೆ. ಹಾಗೆ ನೋಡಿದ್ರೆ, ನುಸ್ರತ್ ಜಹಾನ್ ತುಂಬಾ ಇಷ್ಟಪಟ್ಟೇ ನಿಖಿಲ್​ ಜೈನ್​ರನ್ನು ಮದುವೆಯಾಗಿದ್ರು. ನುಸ್ರತ್​ ಹಾಗೂ ನಿಖಿಲ್​ 2018ರಲ್ಲಿ ಪರಿಚಿತರಾಗಿದ್ರು. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿ 2019ರಲ್ಲಿ ಟರ್ಕಿಯಲ್ಲಿ ಹಸೆಮಣೆ ಏರಿದ್ದರು. ಬಳಿಕ ನುಸ್ರತ್​ ಜಹಾನ್​, ಸಿಂಧೂರ ಧರಿಸಿ ಧಾರ್ಮಿಕ ಪೂಜೆಗಳಲ್ಲಿ ಕೂಡ ಪಾಲ್ಗೊಂಡಿದ್ದರು. ಇದು ಹಲವು ಕಟ್ಟಾ ಸಂಪ್ರದಾಯವಾದಿಗಳ ಕಣ್ಣನ್ನು ಕೆಂಪು ಮಾಡಿತ್ತು. ಹೀಗೆ ಅತ್ಯಂತ ಅನ್ಯೋನ್ಯವಾಗಿದ್ದ ಈ ಜೋಡಿ ಹೀಗೆ ಬೇರೆ ಬೇರೆಯಾಗಿದ್ದು ಯಾಕೆ? ಒಬ್ಬರ ಮೇಲೆ ಒಬ್ಬರು ಇಷ್ಟು ಗಂಭೀರ ಆರೋಪಗಳನ್ನು ಮಾಡಿಕೊಳ್ತಿರೋದಾದ್ರೂ ಯಾಕೆ? ಅನ್ನೋ ಪ್ರಶ್ನೆಗೆ ಸ್ಪಷ್ಟ ಉತ್ತರವಂತೂ ಸಿಕ್ಕಿಲ್ಲ. ಆದ್ರೆ ಪತಿ, ಪತ್ನಿ ನಡುವೆ ಮತ್ತೊಬ್ಬ ವ್ಯಕ್ತಿ ಪ್ರವೇಶವಾಗಿರೋದು ಮಾತ್ರ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ.

ನುಸ್ರತ್ ಬಾಳಲ್ಲಿ ಮತ್ತೊಬ್ಬನ ಪ್ರವೇಶ?
ಟಿಎಂಸಿ ನಾಯಕಿ ಜೊತೆಯಾದನಾ ಬಿಜೆಪಿ ನಾಯಕ?

ಹೌದು.. ಸದ್ಯಕ್ಕೆ ಈ ಪ್ರಶ್ನೆ ಪಶ್ಚಿಮ ಬಂಗಾಳದಲ್ಲಿ ಜೋರಾಗಿಯೇ ಕೇಳಿ ಬರ್ತಿದೆ. ನುಸ್ರತ್ ಬಾಳಲ್ಲಿ ಮತ್ತೊಬ್ಬನ ಪ್ರವೇಶ? ಟಿಎಂಸಿ ನಾಯಕಿ ಜೊತೆಯಾದನಾ ಬಿಜೆಪಿ ನಾಯಕ? ಅಂತ ಬಂಗಾಳದ ಗಲ್ಲಿ ಗಲ್ಲಿಯಲ್ಲಿ ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ.

2020ರಲ್ಲಿ ನುಸ್ರತ್ ಜಹಾನ್ ವ್ಯಕ್ತಿಯೊಬ್ಬನ ಜೊತೆ ಚಿತ್ರವೊಂದರಲ್ಲಿ ನಟಿಸಿದ್ರು. ಆ ವ್ಯಕ್ತಿ ಬೇರೆ ಯಾರೂ ಅಲ್ಲ ಆತನ ಸದ್ಯ ಬಿಜೆಪಿ ನಾಯಕನಾಗಿರೋ ಬೆಂಗಾಲಿ ನಟ ಯಶ್ ದಾಸ್ ಗುಪ್ತಾ. 2020ರಲ್ಲಿ ಒಟ್ಟಿಗೇ ಚಿತ್ರವೊಂದರಲ್ಲಿ ನುಸ್ರತ್ ಹಾಗೂ ಯಶ್​ ದಾಸ್ ಕೆಲಸ ಮಾಡುತ್ತಿದ್ದಾಗ ಅವರಿಬ್ಬರು ಹತ್ತಿರವಾಗಿದ್ರು ಅಂತ ಸಾಕಷ್ಟು ಗಾಸಿಪ್​ ಸುದ್ದಿಗಳು ಹರಿದಾಡಿದ್ದವು. ಅದೂ ಎಷ್ಟರ ಮಟ್ಟಿಗೆ ಅಂದ್ರೆ ನುಸ್ರತ್ ಹಾಗೂ ಯಶ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ.. ಮುಂಬರೋ ದಿನಗಳಲ್ಲಿ ಒಟ್ಟಿಗೇ ಇರಲಿದ್ದಾರೆ ಅಂತಲೂ ಅಲ್ಲಿನ ಗಾಸಿಪ್​ ಕಾಲಮ್​ಗಳಲ್ಲಿ ಕಿಕ್ ಏರಿಸುವಂಥ ಸುದ್ದಿಗಳು ಪ್ರಕಟವಾಗಿದ್ದವು. ಹೀಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಇದೇ ನಿಜನಾ? ಇದೇ ಕಾರಣದಿಂದಾಗಿ ನುಸ್ರತ್ ಹಾಗೂ ನಿಖಿಲ್ ದೂರಾದ್ರಾ? ಅನ್ನೋ ಪ್ರಶ್ನೆ ಜೀವಂತವಾಗಿ ಬಿಟ್ಟಿದೆ.

ಒಟ್ಟಿನಲ್ಲಿ ಸಂಸದೆ ಕೂಡ ಆಗಿರೋ ನುಸ್ರತ್ ಜಹಾನ್ ಅವರ ಪ್ರತಿ ಹೆಜ್ಜೆಯೂ ಸಾಕಷ್ಟೂ ಚರ್ಚೆಯಂತೂ ಆಗುತ್ತೆ. ನಿಜಕ್ಕೂ ಮೂರನೇ ವ್ಯಕ್ತಿಯಿಂದ ನುಸ್ರತ್ ಹಾಗೂ ನಿಖಿಲ್ ಬೇರೆ ಯಾಗ್ತಿದ್ದಾರಾ? ಅಥವಾ ಇದು ತಾತ್ಕಾಲಿಕ ವೈಮನಸ್ಸಾ? ಇಲ್ಲವೇ ಬೇರೆ ಏನಾದ್ರೂ ಕಾರಣದಿಂದ ಇಬ್ಬರೂ ಬೇರೆಯಾಗಿದ್ದಾರಾ? ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ? ಅನ್ನೋದು ಸದ್ಯದ ಪ್ರಶ್ನೆಯಾಗಿದೆ.

The post ಯಶ್ ಕಾರಣದಿಂದಲೇ ಪತಿಯಿಂದ ದೂರಾದ್ರಾ ಟಿಎಂಸಿ ಸಂಸದೆ ನುಸ್ರತ್ ಜಹಾನ್..? appeared first on News First Kannada.

Source: newsfirstlive.com

Source link