ಯಶ್ ಕೈಯಲ್ಲಿ ಹಾವು; ಪ್ರಾಣಿ, ಪಕ್ಷಿಗಳ ಜತೆ ರಾಕಿಂಗ್ ಸ್ಟಾರ್ ಕುಟುಂಬ, ಇಲ್ಲಿದೆ ವಿಡಿಯೋ | Yash Share special video with Family He spent special time In Zoo


ರಾಧಿಕಾ ಪಂಡಿತ್ ಅವರು ಅನಿಮಲ್ ಪಾರ್ಕ್ ತೆರಳಿದ ದಿನ ಗಿಳಿ ಜತೆಗಿನ ಪೋಟೋ ಹಂಚಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಯಶ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ.

‘ಕೆಜಿಎಫ್ 2’ ಸಿನಿಮಾ (KGF Chapter 2) ತೆರೆಗೆ ಬಂದು ಎರಡು ತಿಂಗಳು ಕಳೆದಿದೆ. ಈ ಚಿತ್ರದ ಶೂಟಿಂಗ್ ಹಾಗೂ ಪ್ರಚಾರದಲ್ಲಿ ಬ್ಯುಸಿ ಆಗಿದ್ದ ಯಶ್, ಸಿನಿಮಾ ತೆರೆಗೆ ಬಂದ ಬಳಿಕ ಕುಟುಂಬದ ಜತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಈ ಕಾರಣಕ್ಕೆ ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ ಅವರು. ಯಶ್ ಅವರು (Yash) ಪತ್ನಿ ರಾಧಿಕಾ ಪಂಡಿತ್ (Radhika Pandit)​, ಮಕ್ಕಳಾದ ಆಯ್ರಾ, ಯಥರ್ವ್​, ಸಹೋದರಿ ನಂದಿನಿ ಹಾಗೂ ಕುಟುಂಬದ ಇತರರ ಜತೆ ಇತ್ತೀಚೆಗೆ ಕನಕಪುರ ರಸ್ತೆಯಲ್ಲಿರುವ ಅನಿಮಲ್ ಪಾರ್ಕ್​​ಗೆ   ತೆರಳಿದ್ದರು. ಇದರ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ಲಕ್ಷಲಕ್ಷ ವೀಕ್ಷಣೆ ಕಾಣುತ್ತಿದೆ.

ರಾಧಿಕಾ ಪಂಡಿತ್ ಅವರು ಅನಿಮಲ್ ಪಾರ್ಕ್ ತೆರಳಿದ ದಿನ ಗಿಳಿ ಜತೆಗಿನ ಪೋಟೋ ಹಂಚಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಯಶ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಬೇರೆಬೇರೆ ಪ್ರಾಣಿ, ಪಕ್ಷಿ ಹಾಗೂ ಕೀಟಗಳ ಜತೆ ಯಶ್ ಹಾಗೂ ಅವರ ಕುಟುಂಬ ಸಮಯ ಕಳೆದಿದೆ. ಈ ಅನಿಮಲ್ ಪಾರ್ಕ್ ​ಅನ್ನು ಸಂಜೀವ್ ಅವರು ನಡೆಸುತ್ತಿದ್ದಾರೆ. ಅವರ ಬಗ್ಗೆ ಯಶ್ ಮೆಚ್ಚುಗೆ ಸೂಚಿಸಿದ್ದಾರೆ.

TV9 Kannada


Leave a Reply

Your email address will not be published.