ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್​ 2’ ವೀಕ್ಷಿಸಿದ ಕಮಲ್ ಹಾಸನ್, ಇಳಯರಾಜ​ ಹೇಳಿದ್ದೇನು? | Kamal Haasan and Ilaiyaraaj Praises Yash Starrer KGF Chapter 2 Movie


ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್​ 2’ ವೀಕ್ಷಿಸಿದ ಕಮಲ್ ಹಾಸನ್, ಇಳಯರಾಜ​ ಹೇಳಿದ್ದೇನು?

‘ಕೆಜಿಎಫ್: ಚಾಪ್ಟರ್ 2’ ಸಿನಿಮಾ (KGF Chapter 2) ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿದೆ. ಬಾಲಿವುಡ್​(Bollywood) ಬಾಕ್ಸ್ ಆಫೀಸ್​ನಿಂದ ಈ ಸಿನಿಮಾ 350 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 400 ಕೋಟಿ ರೂಪಾಯಿ ಗಡಿ ದಾಟುವ ಸೂಚನೆ ಸಿಕ್ಕಿದೆ. ಈ ವಿಚಾರ ಇಡೀ ತಂಡಕ್ಕೆ ಖುಷಿ ನೀಡಿದೆ. ಇನ್ನು, ದೊಡ್ಡದೊಡ್ಡ ಸ್ಟಾರ್​ಗಳು ‘ಕೆಜಿಎಫ್ 2’ ಸಿನಿಮಾ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಲ್ಲು ಅರ್ಜುನ್, ರಾಮ್ ಚರಣ್ (Ram Charan) ಮೊದಲಾದವರು ಯಶ್ ಚಿತ್ರದ ಬೆನ್ನು ತಟ್ಟಿದ್ದಾರೆ. ಈಗ ಹಿರಿಯ ನಟ ಕಮಲ್ ಹಾಸನ್ ಹಾಗೂ ಸಂಗೀತ ಲೋಕದ ದಿಗ್ಗಜ ಇಳಯರಾಜ ಅವರು ‘ಕೆಜಿಎಫ್: 2’ ವೀಕ್ಷಣೆ ಮಾಡಿದ್ದು, ಮೆಚ್ಚುಗೆ ಸೂಚಿಸಿದ್ದಾರೆ ಎಂದು ವರದಿ ಆಗಿದೆ.

‘ಕೆಜಿಎಫ್ 2’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬಂದಿತ್ತು. 15 ದಿನಕ್ಕೆ ಈ ಸಿನಿಮಾ ಬರೋಬ್ಬರಿ 900 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಕಂಡಿದೆ. ಕೇರಳದ ಮಂದಿ ಕೂಡ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ‘ಬೀಸ್ಟ್’ ಬದಲು ಜನರು ‘ಕೆಜಿಎಫ್ 2’ ವೀಕ್ಷಿಸಿದ್ದಾರೆ. ಈಗ ಕಮಲ್ ಹಾಸನ್ ಹಾಗೂ ಇಳಯರಾಜ ಅವರು ತಮಿಳಿನಲ್ಲಿ ಈ ಚಿತ್ರ ವೀಕ್ಷಣೆ ಮಾಡಿದ್ದಾರೆ.

ಕಮಲ್ ಹಾಸನ್ ಹಾಗೂ ಇಳಯರಾಜ ಇಬ್ಬರೂ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ. ವಿಶೇಷ ಸ್ಕ್ರೀನಿಂಗ್ ನಂತರ ಇಬ್ಬರೂ ಕ್ಯಾಮೆರಾಗೆ ಪೋಸ್​ ನೀಡಿದ್ದು ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳ ವಲಯದಲ್ಲಿ ಈ ಫೋಟೋಗಳು ಹರಿದಾಡುತ್ತಿವೆ.

ಲೋಕೇಶ್ ಕನಗರಾಜ್ ನಿರ್ದೇಶನದ, ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಜೂನ್ 3ರಂದು ತೆರೆಗೆ ಬರುತ್ತಿದೆ. ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಮೋಷನ್ ಮಾಡಲು ಚಿತ್ರತಂಡ ಪ್ಲ್ಯಾನ್ ರೂಪಿಸಿದೆ.     ಈ ಚಿತ್ರದ ಟ್ರೇಲರ್ ಮೇ 18ರಂದು ರಿಲೀಸ್ ಆಗುತ್ತಿದೆ.

‘ಕೆಜಿಎಫ್ 2’ ಸಿನಿಮಾ ಬಾಲಿವುಡ್​ನಲ್ಲಿ 350 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ‘ಪಿಕೆ’, ‘ಸಂಜು’ ಚಿತ್ರಗಳ ಕಲೆಕ್ಷನ್ ಹಿಂದಿಕ್ಕಿದೆ. ಬಾಲಿವುಡ್​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಸಿನಿಮಾ ಎಂದರೆ ಅದು ‘ದಂಗಲ್’. ಈ ಚಿತ್ರವನ್ನು ‘ಕೆಜಿಎಫ್ 2’ ಹಿಂದಿಕ್ಕಲಿದೆಯೇ ಎಂಬುದು ಸದ್ಯದ ಕುತೂಹಲ.

TV9 Kannada


Leave a Reply

Your email address will not be published.