ಯಶ್ ವೀಕೆಂಡ್​ ಸ್ಪೆಷಲ್​ ಕ್ಲಾಸ್- ಮಗಳಿಗೆ ಅ ಆ ಇ ಈ ಹೇಳಿಕೊಟ್ಟ ರಾಕಿಭಾಯ್


ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರುವ ನಟಿ ರಾಧಿಕಾ ಪಂಡಿತ್​ ಆಗಾಗ ತಮ್ಮ ಮಕ್ಕಳ ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೇ ಈ ಬಾರಿ ರಾಧಿಕಾ, ಯಶ್​ ಅವರು ತಮ್ಮ ಮಗಳು ಐರಾಗೆ ಕನ್ನಡದ ಅ, ಆ, ಇ, ಈ ಕನ್ನಡ ವರ್ಣಮಾಲೆ ಹೇಳಿಕೊಡುವ ಒಂದು ಕ್ಯೂಟ್​ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು “ವೀಕೆಂಡ್​ ಸ್ಪೆಷಲ್​ ಕ್ಲಾಸ್”​ ಅಂತ ಬರೆದುಕೊಂಡಿದ್ದಾರೆ.

ರಾಧಿಕಾ ಹಂಚಿಕೊಂಡಿರುವ ವಿಡಿಯೋದಲ್ಲಿ ಯಶ್​, ಐರಾಗೆ ಅ, ಆ, ಇ, ಈ ಹೇಳಿ ಕೊಡುವಾಗ ಐರಾ ತನ್ನ ಅಪ್ಪ ಯಶ್ ಏನು ಹೇಳಿ ಕೊಡುತ್ತಾರೋ ಅದನ್ನು ಮುದ್ದು ಮದ್ದಾಗಿ ರಿಪೀಟ್​ ಮಾಡಿದ್ದಾಳೆ. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

The post ಯಶ್ ವೀಕೆಂಡ್​ ಸ್ಪೆಷಲ್​ ಕ್ಲಾಸ್- ಮಗಳಿಗೆ ಅ ಆ ಇ ಈ ಹೇಳಿಕೊಟ್ಟ ರಾಕಿಭಾಯ್ appeared first on News First Kannada.

News First Live Kannada


Leave a Reply

Your email address will not be published. Required fields are marked *