‘ಯಾಕ್ರೀ ಇಷ್ಟು ಜನರ ಸೇರಿಸಿದ್ದಿರಾ, ಗೊತ್ತಾಗಲ್ವೇ..? ’ IGP, DYSPಗೆ ಸಿಎಂ ಬೊಮ್ಮಾಯಿ ಕ್ಲಾಸ್


ತುಮಕೂರು: ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ನಿಮಿತ್ತ ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಠಕ್ಕೆ ಆಗಮಿಸಿದ್ದರು. ಈ ವೇಳೆ ಹಿರಿಯ ಪೊಲೀಸ್​ ಅಧಿಕಾರಿಯ ಮೇಲೆ ಸಿಎಂ ಗರಂ ಆದ ಪ್ರಸಂಗ ನಡೆಯಿತು. 

ಇಂದು ನಾಡಿನ ಗುರುಪರಂಪರೆಯ ಶ್ರೇಷ್ಠ ಸಂತ, ಶತಾಯುಷಿ, ಕರ್ನಾಟಕ ರತ್ನ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 3ನೇ ವರ್ಷದ ಪುಣ್ಯಸ್ಮರಣೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಠಕ್ಕೆ ಆಗಮಿಸಿ ಕಾರಿನಿಂದ ಇಳಿಯುತ್ತಿದ್ದಂತೆ ಹಿರಿಯ ಪೊಲೀಸ್​ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಐಜಿ ಚಂದ್ರಶೇಖರ್, ಡಿವೈಎಸ್​ಪಿ ಶ್ರೀನಿವಾಸ್​ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಕೋವಿಡ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಗೊತ್ತಿದ್ದರೂ ಯಾಕಿಷ್ಟು ಜನರನ್ನ ಸೇರಸಿದ್ದಿರಿ? ಇದರ ಜ್ಞಾನ ನಿಮಗೆ ಇಲ್ಲವೇನು? ಸೀನಿಯರ್​ ಆಫೀಸರ್​ ಆಗಿದ್ದಿರಿ, ಅಷ್ಟೂ ಗೊತ್ತಾಗಲ್ವೇ? ಅಲ್ಲಿ ಎಲ್ಲರಿಗೂ ಅಂತರ ಕಾಪಾಡಿಕೊಂಡು ನಿಲ್ಲಲು ಹೇಳಿ ಎಂದು ಖಡಕ್ ಸೂಚನೆ ನೀಡಿದರು.

The post ‘ಯಾಕ್ರೀ ಇಷ್ಟು ಜನರ ಸೇರಿಸಿದ್ದಿರಾ, ಗೊತ್ತಾಗಲ್ವೇ..? ’ IGP, DYSPಗೆ ಸಿಎಂ ಬೊಮ್ಮಾಯಿ ಕ್ಲಾಸ್ appeared first on News First Kannada.

News First Live Kannada


Leave a Reply

Your email address will not be published. Required fields are marked *