ತುಮಕೂರು: ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ನಿಮಿತ್ತ ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಠಕ್ಕೆ ಆಗಮಿಸಿದ್ದರು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಯ ಮೇಲೆ ಸಿಎಂ ಗರಂ ಆದ ಪ್ರಸಂಗ ನಡೆಯಿತು.
ಇಂದು ನಾಡಿನ ಗುರುಪರಂಪರೆಯ ಶ್ರೇಷ್ಠ ಸಂತ, ಶತಾಯುಷಿ, ಕರ್ನಾಟಕ ರತ್ನ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 3ನೇ ವರ್ಷದ ಪುಣ್ಯಸ್ಮರಣೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಠಕ್ಕೆ ಆಗಮಿಸಿ ಕಾರಿನಿಂದ ಇಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಐಜಿ ಚಂದ್ರಶೇಖರ್, ಡಿವೈಎಸ್ಪಿ ಶ್ರೀನಿವಾಸ್ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಗೊತ್ತಿದ್ದರೂ ಯಾಕಿಷ್ಟು ಜನರನ್ನ ಸೇರಸಿದ್ದಿರಿ? ಇದರ ಜ್ಞಾನ ನಿಮಗೆ ಇಲ್ಲವೇನು? ಸೀನಿಯರ್ ಆಫೀಸರ್ ಆಗಿದ್ದಿರಿ, ಅಷ್ಟೂ ಗೊತ್ತಾಗಲ್ವೇ? ಅಲ್ಲಿ ಎಲ್ಲರಿಗೂ ಅಂತರ ಕಾಪಾಡಿಕೊಂಡು ನಿಲ್ಲಲು ಹೇಳಿ ಎಂದು ಖಡಕ್ ಸೂಚನೆ ನೀಡಿದರು.
The post ‘ಯಾಕ್ರೀ ಇಷ್ಟು ಜನರ ಸೇರಿಸಿದ್ದಿರಾ, ಗೊತ್ತಾಗಲ್ವೇ..? ’ IGP, DYSPಗೆ ಸಿಎಂ ಬೊಮ್ಮಾಯಿ ಕ್ಲಾಸ್ appeared first on News First Kannada.