ಯಾದಗಿರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ! 52 ಲಕ್ಷ ರೂ. ಮೌಲ್ಯದ ಮರಳು ಜಪ್ತಿ | Officers raided sand barges illegally in Yadagiri and seized sand worth Rs 52 lakh in Yadgir


ಯಾದಗಿರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ! 52 ಲಕ್ಷ ರೂ. ಮೌಲ್ಯದ ಮರಳು ಜಪ್ತಿ

ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

ಯಾದಗಿರಿ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಸುಮಾರು 52 ಲಕ್ಷ ರೂಪಾಯಿ ಮೌಲ್ಯದ ಮರಳನ್ನ ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಸುರಪುರ ತಾಲೂಕಿನ ಹೆಮ್ಮಡಗಿ ಮತ್ತು ಚೌಡೇಶ್ವರಹಾಳದಲ್ಲಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಕೃಷ್ಣಾ ನದಿಯಿಂದ ಮರಳನ್ನು ತಂದು ಸಂಗ್ರಹಿಸಲಾಗಿತ್ತು. ಸುರಪುರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಡಿವೈಎಸ್ಪಿ ದೇವರಾಜ್ ನೇತೃತ್ವದ ತಂಡ ನಿಖರ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದೆ. ಸದ್ಯ ಈ ಪ್ರಕರಣ ಸುರಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ವಾಡಹಳ್ಳಿ ಗೇಟ್ ರಿಜಾಯ್ ಪಾಷಾ(41) ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ತಾವರೆಕೆರೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಬಂಧಿತ ಆರೋಪಿಯಿಂದ 950 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ

ರಾಯಚೂರಿನಲ್ಲಿ ಕ್ರೂಸರ್ ಪಲ್ಟಿ! ಮಹಿಳೆ ಸಾವು, 7 ಜನರಿಗೆ ಗಾಯ

ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಇದೆಯಂತೆ: ಕ್ಯಾ. ಗಣೇಶ್ ಕಾರ್ಣಿಕ್

TV9 Kannada


Leave a Reply

Your email address will not be published. Required fields are marked *