ಯಾದಗಿರಿಯಲ್ಲಿ ಅಣ್ಣನಿಂದ ತಂಗಿ ಮೇಲೆ ಅತ್ಯಾಚಾರ ಆರೋಪ! ಸಂತ್ರಸ್ತೆಯಿಂದ ದೂರು ದಾಖಲು | Brother has been accused of raping her younger sister at Yadgir

ಯಾದಗಿರಿಯಲ್ಲಿ ಅಣ್ಣನಿಂದ ತಂಗಿ ಮೇಲೆ ಅತ್ಯಾಚಾರ ಆರೋಪ! ಸಂತ್ರಸ್ತೆಯಿಂದ ದೂರು ದಾಖಲು

ಅತ್ಯಾಚಾರ ತಡೆಯೋಣ

ಯಾದಗಿರಿ: ಅಣ್ಣ ತನ್ನ ತಂಗಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ನಿನ್ನೆ (ಅ.6) ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಯುವತಿ ದೂರು ದಾಖಲಿಸಿದ್ದಾಳೆ. ಸಂತ್ರಸ್ತೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವ್ಯಾಪ್ತಿಯ ನಿವಾಸಿ. ಹಣ್ಣು ತರಲು ಹೋಗೋಣ ಅಂತ ಕರೆದುಕೊಂಡು ಹೋಗಿ ಅಣ್ಣ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಅಕ್ಟೋಬರ್ 4 ರಂದು ನಡೆದಿದೆ ಎಂದು ಹೇಳಲಾಗುತ್ತಿದೆ.

ಆರೋಪಿ ತನ್ನ ಚಿಕ್ಕಪ್ಪನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ನಿನ್ನೆ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಈ ಬಗ್ಗೆ ದೂರು ದಾಖಲಿಸಿದ್ದಾಳೆ. ಸದ್ಯ ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸೀತಾಫಲ ಹಣ್ಣು ತರಲು ಹೋಗೋಣ ಅಂತ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನಂತೆ. ಅತ್ಯಾಚಾರ ಎಸಗಿದ ಬಳಿಕ ಜೀವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳ ಬಂಧನ
ಬೆಳ್ತಂಗಡಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಾಲಕಿ ಅತ್ಯಾಚಾರದ‌ ಬಳಿಕ ಏಳು ತಿಂಗಳ ಗರ್ಭಿಣಿಯಾಗಿದ್ದಳು. 10ನೇ ತರಗತಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಬಾಲಕಿ ಜೆಸಿಬಿ ಚಾಲಕನಾಗಿದ್ದ ವ್ಯಕ್ತಿಯಿಂದ ಐದು ಬಾರಿ ಅತ್ಯಚಾರಕ್ಕೆ ಒಳಗಾಗಿದ್ದಳು. ಇದಕ್ಕೂ ಮೊದಲು ಬಾಲಕಿ ಸಂಬಂಧಿ ಒಬ್ಬರಿಂದ ಎರಡು ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದ ಮಾಹಿತಿ ತಿಳಿದುಬಂದಿದೆ. ಶಾಲೆಗೆ ಆರೋಗ್ಯ ತಪಾಸಣೆಗೆ ಬಂದಿದ್ದ ವೈದ್ಯರಿಗೆ ವಿದ್ಯಾರ್ಥಿಯ ದೇಹಸ್ಥಿತಿ ನೋಡಿ ಅನುಮಾನ ಉಂಟಾಗಿತ್ತು.

ಇದನ್ನೂ ಓದಿ

ಇಂದು ಉತ್ತರಾಖಂಡ್​​ಗೆ ಪ್ರಧಾನಿ ಮೋದಿ ಭೇಟಿ; 35 ಪಿಎಸ್​ಎ ಆಮ್ಲಜನಕ ಸ್ಥಾವರಗಳ ಲೋಕಾರ್ಪಣೆ

ಬಾರಾಬಂಕಿಯಲ್ಲಿ ಬಸ್​-ಟ್ರಕ್​ ನಡುವೆ ಭೀಕರ ಅಪಘಾತ; 9ಮಂದಿ ಸ್ಥಳದಲ್ಲೇ ಸಾವು

TV9 Kannada

Leave a comment

Your email address will not be published. Required fields are marked *