ಯಾದಗಿರಿ: ಜಿಲ್ಲೆಯಲ್ಲಿ, ಇಂದಿನಿಂದ ಮೂರು ದಿನಗಳ ಕಾಲ ಸಂಪೂರ್ಣ ಲಾಕ್​​ಡೌನ್​ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ.

ನಿರಂತರವಾಗಿ ಕೊವಿಡ್ ಪಾಸಿಟಿವ್ ಕೇಸ್ ಏರಿಕೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಫುಲ್ ಲಾಕ್​ಡೌನ್​ ಜಾರಿ ಮಾಡಿದ್ದಾರೆ. ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಅಗತ್ಯ ವಸ್ತುಗಳು ಹೊರತು ಪಡಿಸಿ ಬೇರೆಲ್ಲಾ ಅಂಗಡಿಗಳು ಬಂದ್​ ಅಂತ ಜಿಲ್ಲಾಡಳಿತ ಆದೇಶವನ್ನ ಹೊರಡಿಸಿದೆ.

ಅಪ್ಪಿ ತಪ್ಪಿ ಅನಾವಶ್ಯಕವಾಗಿ ಹೊರಗಡೆ ಬಂದ್ರೆ ಕಠಿಣ ಕ್ರಮ ಕೈಗೊಳ್ಳೋದಾಗಿ ಪೊಲೀಸರು  ಎಚ್ಚರಿಕೆ ನೀಡಿದ್ದಾರೆ.

The post ಯಾದಗಿರಿಯಲ್ಲಿ ಇಂದಿನಿಂದ 3 ದಿನ ಸಂಪೂರ್ಣ ಲಾಕ್​ಡೌನ್​ appeared first on News First Kannada.

Source: newsfirstlive.com

Source link