ಪರೀಕ್ಷೆ ಬಹಿಷ್ಕರಿಸಿ ವಾಪಸ್ ನಡೆದ ವಿದ್ಯಾರ್ಥಿನಿಯರು
ಯಾದಗಿರಿ: ಉಡುಪಿಯಿಂದ ಪ್ರಾರಂಭವಾದ ಹಿಜಾಬ್ (Hijab) ಗಲಾಟೆ ಇಡೀ ರಾಜ್ಯವನ್ನೇ ಆವರಿಸಿದೆ. ಹಿಜಾಬ್ಗಾಗಿ ಮುಸ್ಲಿಂ ಸಮುದಾಯದ ಕೆಲ ವಿದ್ಯಾರ್ಥಿನಿಯರು (Students) ಪರೀಕ್ಷೆಯನ್ನೇ ಬಹಿಷ್ಕರಿಸುತ್ತಿದ್ದಾರೆ. ಯಾದಗಿರಿಯ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಹಿಜಾಬ್ ಮುಖ್ಯವೆಂದು ದ್ವಿತೀಯ ಪಿಯು ಪರೀಕ್ಷೆ ಬಹಿಷ್ಕರಿಸಿ ಆರು ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಕೇಳಿದ್ದರು. ಆದರೆ ಪರೀಕ್ಷಾ ಮೇಲ್ವಿಚಾರಕರು ಅವಕಾಶ ನೀಡಲಿಲ್ಲ.
ಇವತ್ತು ಕಲಾ ವಿಭಾಗದ ಮೊದಲ ವಿಷಯ ಅರ್ಥಶಾಸ್ತ್ರ ಪರೀಕ್ಷೆ ಇತ್ತು. ವಿದ್ಯಾರ್ಥಿನಿಯರು ಸರ್ಕಾರಿ ಬಾಲಕಿಯರ ಪ.ಪೂ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಿತ್ತು. ಆದರೆ ಹಿಜಾಬ್ಗೆ ಅವಕಾಶ ನೀಡದ ಹಿನ್ನೆಲೆ ವಾಪಸ್ ಆಗಿದ್ದಾರೆ.