ಯಾದಗಿರಿ: ಜಿಲ್ಲೆಯ ಎಸ್​ಪಿ ವೇದಮೂರ್ತಿ, ಅಲೆಮಾರಿ ಜನಾಂಗದವರಿಗೆ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಲಾಕ್​​ಡೌನ್ ನಿಂದ ಸಂಕಷ್ಟದಲ್ಲಿರುವ ಅಲೆಮಾರಿ ಜನಾಂಗದ 110 ಕುಟುಂಬಗಳಿಗೆ ಅಕ್ಕಿ ,ಸಕ್ಕರೆ, ತೊಗರಿ ಬೇಳೆಯುಳ್ಳ ಆಹಾರ ಕೀಟ್ ನೀಡಿದ್ದಾರೆ. ಕೋವಿಡ್ ಕರ್ತವ್ಯ ಪಾಲನೆ ಜೊತೆ ಬಿಡುವು ಮಾಡಿಕೊಂಡು ಬಡವರ ನೋವಿಗೆ ಸ್ಪಂದಿಸುತ್ತಿದ್ದಾರೆ ವೇದಮೂರ್ತಿ.

ಎಸ್​ಪಿ ಅವರ ಈ ಕಾರ್ಯಕ್ಕೆ ಡಿವೈಎಸ್​ಪಿ ಸಂತೋಷ ಬನ್ನಹಟ್ಟಿ ಹಾಗೂ ಸಿಪಿಐ ಸೋಮಶೇಖರ ಕೆಂಚರೆಡ್ಡಿ ಸಾಥ್ ನೀಡಿದ್ದಾರೆ.

ಇನ್ನು ಲಾಕ್​ಡೌನ್​ ವೇಳೆ ಜನರು ಸುಖಾ ಸುಮ್ಮನೆ ಮನೆಯಿಂದ ಹೊರಗೆ ಬರಬಾರದು. ಕೋವಿಡ್ ನಿಯಮ ಪಾಲಿಸಬೇಕು ಎಂದು ಸಾರ್ವಜನಿಕರಲ್ಲಿ ಪೊಲೀಸರು ಜಾಗೃತಿ ‌ಮೂಡಿಸುತ್ತಿದ್ದಾರೆ.

The post ಯಾದಗಿರಿ ಎಸ್​ಪಿ ಮಾನವೀಯ ಕಾರ್ಯ: 110 ಅಲೆಮಾರಿ ಕುಟುಂಬಗಳಿಗೆ ಫುಡ್​ ಕಿಟ್ appeared first on News First Kannada.

Source: newsfirstlive.com

Source link