–  ಬೋಟ್ ಗಳ ಜೊತೆಗೆ ಅಗ್ನಿ ಶಾಮಕದಳದ ಮಾಕ್ ಡ್ರಿಲ್

ಯಾದಗಿರಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದೆ. ಜಿಲ್ಲೆಯ ಕೃಷ್ಣಾ ನದಿ ತೀರದ 9 ಗ್ರಾಮಗಳಿಗೆ ಪ್ರವಾಹ ಭೀತಿ ಹಿನ್ನೆಲೆ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲು ಕಂದಾಯ ಸಚಿವರಿಗೆ ಸಹ ಪತ್ರ ಬರೆಯಲಾಗಿದೆ. ಇನ್ನೂ ನದಿ ತೀರದ ಜನರ ಸಮಸ್ಯೆ ಅರಿಯಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಕೊಠಡಿ ಆರಂಭ ಮಾಡಲಾಗಿದೆ.

ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ, ಹಾವಿನಾಳ, ಕರ್ನಾಳ, ರೋಜಾ, ಗೊಂದೆನೂರು, ಗೌಡೂರು, ಯಕ್ಷಂತಿ ಸೇರಿದಂತೆ ಮೊದಲಾದ 9 ಗ್ರಾಮಗಳ ಸ್ಥಳಾಂತರ ಮಾಡಲಾಗುತ್ತದೆ. ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾದರೆ, ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಬಿಡುವ ಸಾಧ್ಯತೆಯಿದೆ. ಒಟ್ಟು 33.33 ಟಿಎಂಸಿ ಸಂಗ್ರಹ ಸಾಮರ್ಥ್ಯದ ಬಸವಸಾಗರ ಜಲಾಶಯ ಸದ್ಯ, 21 ಟಿಎಂಸಿ ನೀರಿನ ಸಂಗ್ರಹ ಹೊಂದಿದೆ. 606 ಕ್ಯೂಸೆಕ್ ನೀರು ಒಳಹರಿವು ಇದ್ರೆ 107 ಕ್ಯೂಸೆಕ್ ಹೊರಹರಿವಿದೆ.

ಮತ್ತೊಂದು ಕಡೆ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದವಾಗಿದ್ದು, ಪ್ರವಾಹ ಭೀತಿ ಎದುರಿಸುವ ಗ್ರಾಮಕ್ಕೆ ಭೇಟಿ ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನೂ ಅಗ್ನಿಶಾಮಕ ದಳ ಹಾಗೂ ಪೊಲೀಸ ಸಿಬ್ಬಂದಿ ಜಂಟಿಯಾಗಿ, ಸುರಪುರ ತಾಲೂಕಿನ ಮಾಚಗುಂಡಾಳ ಕೆರೆಯಲ್ಲಿ ಬೋಟ್ ಮೂಲಕ ಪ್ರವಾಹ ಪರಿಸ್ಥಿತಿ ಎದುರಿಸುವ ಬಗ್ಗೆ ಮಾಕ್ ಡ್ರಿಲ್ ನಡೆಸಿದ್ದಾರೆ. ಮತ್ತೊಂದು ಕಡೆ ಕಂದಾಯ ಇಲಾಖೆಯ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದು, ಸ್ಥಳಾಂತರ ಗ್ರಾಮಗಳಿಗೆ ನಿತ್ಯ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

The post ಯಾದಗಿರಿ ಜಿಲ್ಲೆಯ ನದಿಪಾತ್ರದಲ್ಲಿ ಫುಲ್ ಅಲರ್ಟ್ – 9 ಗ್ರಾಮಗಳ ಸ್ಥಳಾಂತರಕ್ಕೆ ಸಿದ್ಧತೆ appeared first on Public TV.

Source: publictv.in

Source link