ಬೆಂಗಳೂರು: ಆಹಾ ಆ ಡ್ರೆಸ್ ನೋಡ್ರಿ.. ಅದೇನು ಕಾಂಬಿನೇಷನ್.. ಗರಿ ಗರಿಯಾಗಿ ಐರನ್ ಮಾಡಿದ ಫಾರ್ಮಲ್ ಶರ್ಟು, ಪ್ಯಾಂಟು.. ಕೈಯಲ್ಲಿ ಡಬಲ್ ಮಾಸ್ಕ್​​.. ಟ್ರಿಮ್ ಮಾಡಿಸಿದ ದಾಡಿ, ತಲೆ ಕೂದಲು.. ಇವರನ್ನು ನೋಡಿದ್ರೆ ಯಾರೇ ಆದ್ರೂ ಯಾವುದೋ ಇಂಟರ್​ವ್ಯೂಗೆ ಬಂದ ಪದವೀಧರರು.. ಪಾಪ ನಿರುದ್ಯೋಗ ಇದ್ರೂ ಎಷ್ಟು ಚೆನ್ನಾಗಿ ರೆಡಿಯಾಗಿ ಬಂದಿದ್ದಾರೆ ಅಂತಾ ಯಾಮಾರಿ ಬಿಡ್ತಾರೆ..

ಆದ್ರೆ ಶಾಕಿಂಗ್ ಸಂಗತಿ ಗೊತ್ತಾ? ಇವ್ರು ಯಾವುದೋ ಇಂಟರ್​ವ್ಯೂಗೆ ಬಂದ ಮುಗ್ಧ ನಿರೋದ್ಯೋಗಿಗಳಲ್ಲ.. ಹಾಡಹಗಲೇ ಫೈನಾನ್ಶಿಯರ್ ವೊಬ್ಬನನ್ನು ನಡುರಸ್ತೆಯಲ್ಲಿ ಕೊಚ್ಚಿ..ಕೊಚ್ಚಿ ಕೊಂದ ಆರೋಪ ಹೊತ್ತಿರೋ ಕಿರಾತಕರು..!

ಎಸ್..ಹಾಡಹಗಲೇ ಫೈನಾನ್ಶಿಯರ್ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳು ಇಂದು ಬೆಳಗ್ಗೆಯೇ ವಕೀಲರ ವೇಷ ಧರಿಸಿ ನಗರದ ಎಸಿಎಂಎಂ ಕೋರ್ಟ್​​ನ ಹಾಲ್​ನಲ್ಲಿ ಹಾಜರಾಗಿದ್ದಾರೆ.

ಜುಲೈ 2 ರಂದು ಬನಶಂಕರಿ ಮೆಟ್ರೋ ನಿಲ್ದಾಣದ ಕೆಳಗೆ ಫೈನಾನ್ಸಿಯರ್ ಮದನ್ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಜಯನಗರ ಠಾಣೆ ಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಆರಂಭ ಮಾಡಿದ್ದರು.

ಆದರೆ ನಗರದಲ್ಲಿ ಇತ್ತೀಚಿನ ಕೆಲ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳ ಕಾಲಿಗೆ ಗುಂಡಿಟ್ಟಿದ್ದರು. ಇದರಿಂದ ಪೊಲೀಸರು ಕಾಲಿಗೆ ಗುಂಡು ಹಾರಿಸುತ್ತಾರೆ ಎಂಬ ಭಯದಲ್ಲಿದ್ದ ಏಳು ಮಂದಿ ಆರೋಪಿಗಳು, ವಕೀಲರಂತೆ ವೈಟ್ ಶರ್ಟ್, ಬ್ಲಾಕ್ ಪ್ಯಾಂಟ್ ಧರಿಸಿ ನ್ಯಾಯಾಲಯ ಎದುರು ಹಾಜರಾಗಿದ್ದಾರೆ. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆಯಲು ಜಯನಗರ ಠಾಣೆ ಪೊಲೀಸರು ಮುಂದಾಗಿದ್ದಾರೆ.

ಬನಶಂಕರಿ ಮೆಟ್ರೋ ನಿಲ್ದಾಣದ ಕೆಳಗೆ ಅಡುಗೋಡಿ ಫೈನಾನ್ಸಿಯರ್ ಮದನ್ ಎಂಬಾತನನ್ನು ಆರು ಜನ ಬೈಕ್ ನಲ್ಲಿ ಬಂದು ಕೊಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಹಳೆ ದ್ವೇಷದ ಹಿನ್ನಲೆ ಆರೋಪಿಗಳು ಮದನ್​ನನ್ನು ಕೊಲೆ ಮಾಡಿದ್ದರು ಎನ್ನಲಾಗಿದೆ.

The post ಯಾಮಾರಿ ಬಿಟ್ಟೀರಿ ಜೋಕೆ.. ಇವ್ರು ಇಂಟರ್​ವ್ಯೂಗೆ ಬಂದಿರೋ ಯುವಕರಲ್ಲ..ಕೊಚ್ಚಿ ಕೊಂದ ಕಿರಾತಕರು appeared first on News First Kannada.

Source: newsfirstlive.com

Source link