ರಕ್ಷಿತ್ ಶೆಟ್ಟಿ ಮತ್ತೊಮ್ಮೆ ದೊಡ್ಡ ಮಟ್ಟದ ಸಿನಿಮಾಕ್ಕೆ ಸಜ್ಜಾಗಿದ್ದಾರೆ. ತಾವೇ ಡೈರೆಕ್ಷನ್ ಮಾಡಿ ನಟಿಸಿದ್ದ ಉಳಿದವರು ಕಂಡಂತೆ ಸಿನಿಮಾವನ್ನ ಮತ್ತೊಂದು ದೃಶ್ಯ ಕೋನದಲ್ಲಿ ನೋಡಲು ಸಜ್ಜಾಗಿದ್ದಾರೆ. ನಿನ್ನೆಯಷ್ಟೇ ಟೈಟಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಗಮನ ಸೆಳೆದಿದ್ದು, ರಿಚರ್ಡ್ ಆಂಟನಿ ಸಿನಿಮಾದ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ರಕ್ಷಿತ್​ ಶೆಟ್ಟಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ನಟ ರಕ್ಷಿತ್ ಶೆಟ್ಟಿ ಅವರಿಗೆ ಮದುವೆ ವಿಚಾರದ ಕುರಿತ ಪ್ರಶ್ನೆ ತೂರಿ ಬಂದಿತ್ತು. ಇದಕ್ಕುತ್ತರಿಸಿದ ರಕ್ಷಿತ್​ ಶೆಟ್ಟಿ, ಯಾರನ್ನ ಮದ್ವೆ ಆಗ್ತೀನಿ ಅಂದೆ ನಾನು? ನನ್ನ ಮದುವೆ ಯಾವಾಗ ಅಂತ ನನಗೆ ಗೊತ್ತಿಲ್ಲ ಎಂದರು.

ನಾಯಿ ಬಲ ಇಡ್ಕೊಂಡು ಪ್ಯಾನ್​ ಇಂಡಿಯಾ ಸಿನಿಮಾ ಮಾಡ್ತಿಲ್ಲ..
ಇದೇ ತಮ್ಮ ಸಿನಿಮಾಗಳ ಕುರಿತು ಮಾತನಾಡಿದ ರಕ್ಷಿತ್​, ಚಾರ್ಲಿ ಸಿನಿಮಾ ಪೋಸ್ಟ್​ ಪ್ರೊಡಕ್ಷನ್ ವರ್ಕ್​​ ನಡೆಯುತ್ತಿದೆ. ಇದುವರೆಗೂ 40ಕ್ಕೂ ಮಂದಿಗೆ ಸಿನಿಮಾ ತೋರಿಸಿದ್ದೀನಿ, ಎಲ್ಲರೂ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಮೇಲೆ ಭಾರೀ ವಿಶ್ವಾಸವಿದೆ. ನಾಯಿಯನ್ನು ಪ್ರೀತಿಸುವವರು ಎಲ್ಲೆಡೆ ಇರುತ್ತಾರೆ. ನಾಯಿ ಬಲ ಇಡ್ಕೊಂಡು ಪ್ಯಾನ್​ ಇಂಡಿಯಾ ಸಿನಿಮಾ ಮಾಡ್ತಿಲ್ಲ. ಈ ಸಿನಿಮಾಗೆ ಅದರದ್ದೆ ಆದ ಪ್ರೇಕ್ಷಕರು ಇದ್ದಾರೆ. ಮೊದಲು ನಾಯಿ ಪ್ರೀತಿಸುವವರು ಥಿಯೇಟರ್​ ವರೆಗೂ ಬಂದು ರಿವ್ಯೂ ಕೊಟ್ಟರೆ ಇತರ ಪ್ರೇಕ್ಷಕರು ಆಗಮಿಸುತ್ತಾರೆ ಎಂದರು.

The post ಯಾರನ್ನ ಮದ್ವೆ ಆಗ್ತೀನಿ ಅಂದೆ ನಾನು?- ರಕ್ಷಿತ್​ ಶೆಟ್ಟಿ appeared first on News First Kannada.

Source: newsfirstlive.com

Source link