ಯಾರಾಗ್ತಾರೆ ಬೆಂಗಳೂರು ಕ್ಯಾಪ್ಟನ್? ಇಬ್ಬರು ಆಟಗಾರರ ಮೇಲೆ RCB ದೊಡ್ಡ ಕಣ್ಣು..!


ಆರ್​​ಸಿಬಿಗೆ ನೂತನ ಹೆಡ್​ಕೋಚ್​ ನೇಮಕವಾಗಿದೆ. ಇದರ ಬೆನ್ನಲ್ಲೆ ಹೆಚ್ಚು ಚರ್ಚೆ ಆಗ್ತಿರುವ ವಿಷಯ ಅಂದರೆ, ಮುಂದಿನ ಕ್ಯಾಪ್ಟನ್​ ಯಾರು ಅನ್ನೋದು. ಅದರಲ್ಲೂ ಇಬ್ಬರ ಹೆರಸನ್ನ ಶಾರ್ಟ್​ ಲೀಸ್ಟ್​ ಮಾಡಿಕೊಂಡಿರುವ ಆರ್​​​ಸಿಬಿ, ಮೆಗಾ ಹರಾಜಿನಲ್ಲಿ ಖರೀದಿಸೋಕೆ ನಿರ್ಧರಿಸಿದೆ.

 

IPLನಲ್ಲಿ ಟ್ರೋಫಿ ಗೆಲ್ಲುವ ಕನಸಿನಲ್ಲಿರುವ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು, ನೂತನ ಹೆಡ್​​ಕೋಚ್ ಹೆಸರನ್ನ ಘೋಷಿಸಿದೆ. ಸಂಜಯ್​ ಬಂಗಾರ್ ಅವರನ್ನು​​ ಈ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೆ ನಾಯಕನ ಹುಡುಕಾಟದಲ್ಲಿ ಬ್ಯುಸಿಯಾಗಿರುವ ಆರ್​​​ಸಿಬಿ, ಈ ಇಬ್ಬರ ಮೇಲೆ ಕಣ್ಣಿಟ್ಟಿದೆ. ಹೌದು, ನಾಯಕತ್ವಕ್ಕಾಗಿ RCB ಶಾರ್ಟ್​​ ಲೀಸ್ಟ್​ಮಾಡಿಕೊಂಡ ಆಟಗಾರರು ಬೇಱರು ಅಲ್ಲ, KL ರಾಹುಲ್ ಮತ್ತು ಶ್ರೇಯಸ್ ಅಯ್ಯರ್.

ಮೆಗಾ ಹರಾಜಿನಲ್ಲಿ ಈ ಇಬ್ಬರನ್ನೂ ಖರೀದಿಸಿ ನಾಯಕನ ಪಟ್ಟ ನಿಡೋದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ಯಂತೆ ಆರ್​ಸಿಬಿ. ರಾಹುಲ್ ​- ಅಯ್ಯರ್​ ತಮ್ಮ ಫ್ರಾಂಚೈಸಿಗಳನ್ನ ತೊರೆಯುವ ಸುಳಿವು ನೀಡಿದ್ದು, ಹರಾಜಿಗೆ ಲಭ್ಯರಾಗಲಿದ್ದಾರೆ ಎನ್ನಲಾಗ್ತಿದೆ. ಹೀಗಿರುವಾಗ ಆರ್​ಸಿಬಿ ರಾಹುಲ್​-ಅಯ್ಯರ್​ ಪೈಕಿ ಒಬ್ಬರನ್ನ ಖರೀದಿಸಿ ನಾಯಕನ ಪಟ್ಟ ನೀಡಲು ಚಿಂತನೆ ನಡೆಸಿದೆ. ಆ ಮೂಲಕ ಎಲ್ಲಾ ಊಹಾಪೋಹಾಗಳಿಗೆ ತೆರೆ ಎಳೆಯಲು RCB ಮುಂದಾಗಿದೆ.

ಶ್ರೇಯಸ್​​ ಅಯ್ಯರ್ ಮೊದಲ ಹಂತದ IPL​ಗೆ ಲಭ್ಯರಿರಲಿಲ್ಲ. ಇಂಜುರಿ ಕಾರಣ IPL​ನಿಂದ ದೂರ ಉಳಿದಿದ್ರು. ನಂತರ 2ನೇ ಹಂತದ IPLಗೆ ಮರಳಿದ್ರೂ, ನಾಯಕನ ಜವಾಬ್ದಾರಿ ಫ್ರಾಂಚೈಸಿ ರಿಷಭ್​​ ಪಂತ್​ಗೆ ನೀಡಿತ್ತು. ಪಂತ್​​ ಕೂಡ ಡೆಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ರು. ಹೀಗಾಗಿ ಮುಂದಿನ ಸೀಸನ್​ನಲ್ಲೂ ಡೆಲ್ಲಿ ಪಂತ್​​ಗೆ ಕ್ಯಾಪ್ಟನ್ಸಿ ನೀಡುವ ಒಲವು ತೋರಿದೆ. ಹಾಗಾಗಿ ನಿರಿಕ್ಷೆಯಲ್ಲಿರುವ ಶ್ರೇಯಸ್‌ ಅಯ್ಯರ್‌ ಅವರನ್ನ RCB ಸಂಪರ್ಕಿಸಿದೆ ಎನ್ನಲಾಗ್ತಿದೆ.

KL ರಾಹುಲ್ ಕೂಡ ಪಂಜಾಬ್ ಕಿಂಗ್ಸ್​​ ತೊರೆಯುವುದು ಬಹುತೇಕ ಖಚಿತ. IPL ಮುಗಿದ ಬಳಿಕ ರಾಹುಲ್​ ಧನ್ಯವಾದ ಹೇಳಿ ಮಾಡಿದ್ದ ಟ್ವೀಟ್​ ಇದನ್ನೇ ಹೇಳುತ್ತಿತ್ತು. ಇದರ ಬೆನ್ನಲ್ಲೇ ಫ್ರಾಂಚೈಸಿಯ ಸಹ ಮಾಲೀಕ ನೆಸ್ ವಾಡಿಯಾ, ಒಬ್ಬ ಆಟಗಾರನ ಮೇಲೆ ಇಡೀ ತಂಡ ಅವಲಂಬಿತವಾಗಿಲ್ಲ ಎಂದು ನೀಡಿದ್ದ ಹೇಳಿಕೆ, ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಇದು ರಾಹುಲ್​ರನ್ನ ಉಳಿದುಕೊಳ್ಳುವುದು ಅನುಮಾನ ಎಂಬ ರೀತಿ ಹೇಳಿಕೆ ನೀಡಿದ್ರು. ಹಾಗಾಗಿ ಆರ್​​ಸಿಬಿ ರಾಹುಲ್​ ಮೇಲೆ ಕಣ್ಣಿಟ್ಟಿದೆ.

ಇನ್ನು ಇವರ ಮೇಲೆಯೇ ಆರ್​ಸಿಬಿ ಕಣ್ಣಿಡಲು ಕಾರಣ, ಈ ಇಬ್ಬರಿಗೆ IPLನಲ್ಲಿ ನಾಯಕತ್ವ ಅನುಭವ ಇರೋದ್ರಿಂದ. ತಂಡವನ್ನ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಹಿನ್ನಲೆ, ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗ್ತಿದೆ. ಇಬ್ಬರೂ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಡ್​​ ಆಗಲಿದ್ದಾರೆ. ಆದರೆ ಎಷ್ಟಾದರೂ ಸರಿ ಖರೀದಿ ಮಾಡಲೇಬೇಕೆಂಬ ನಿರ್ಧಾರಕ್ಕೆ ಬಂದಿದೆ. ಜೊತೆಗೆ ಭವಿಷ್ಯದ ದೃಷ್ಟಿಯಿಂದ ದೇವದತ್​ ಪಡಿಕ್ಕಲ್​​ಗೂ ನಾಯಕತ್ವ ನೀಡುವ ಬಗ್ಗೆ ಕೂಡ, ಆರ್​ಸಿಬಿ ಮ್ಯಾನೇಜ್​ಮೆಂಟ್ ಚರ್ಚೆ ನಡೆಸಿದೆ. ಆದರೆ ಯಾರಿಗೆ ಮಣೆ ಹಾಕುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

News First Live Kannada


Leave a Reply

Your email address will not be published. Required fields are marked *