ಮುಂಬಯಿ: ಯಾರಿಂದಲೂ ತಾನು ಅಸಮರ್ಥ ಎನಿಸಿಕೊಳ್ಳಲು ಇಚ್ಛಿಸುವುದಿಲ್ಲ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಹೇಳಿದ್ದಾರೆ.

ಸೋಮವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 45 ರನ್‌ ಅಂತರದ ಜಯ ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಧೋನಿ, “ತಂಡದಲ್ಲಿ ಯುವ ಆಟಗಾರರ ಜತೆ ಮುನ್ನುಗ್ಗುವುದು ಕಷ್ಟದ ವಿಚಾರ. ಆದರೆ ನನ್ನ ದೈಹಿಕ ಸಾಮರ್ಥ್ಯದ ಬಗ್ಗೆ ಅವರು ಆಡಿಕೊಳ್ಳುವಂತಾಗದಿದ್ದರೆ ಅದುವೇ ದೊಡ್ಡ ಸಕಾರಾತ್ಮಕ ವಿಚಾರ’ ಎಂದು 39 ವರ್ಷದ ಧೋನಿ ಹೇಳಿದ್ದಾರೆ.

“ಆಟವಾಡುತ್ತಿರುವಾಗ ಅನ್‌ಫಿಟ್‌ ಎಂದು ಯಾರಿಂದಲೂ ಹೇಳಿಸಿಕೊಳ್ಳಲು ನಾನು ಬಯಸುವುದಿಲ್ಲ. ಯುವ ಆಟಗಾರರು ಬಹಳ ವೇಗವಾಗಿ ಸಾಗುತ್ತಿದ್ದಾರೆ. ಈ ಸವಾಲು ಒಳ್ಳೆಯದು. 24ನೇ ವಯಸ್ಸಿನಲ್ಲಿದ್ದಾಗ ಫಾರ್ಮ್ ಬಗ್ಗೆ ನಾನು ಖಾತರಿ ನೀಡಿರಲಿಲ್ಲ. 40ನೇ ವಯಸ್ಸಿನಲ್ಲಿದ್ದಾರೆಗಲೂ ನೀಡಲು ಸಾಧ್ಯವಾಗದು. ಆದರೆ ಅವನೊಬ್ಬ ಅಸಮರ್ಥ ಎಂದು ಯಾರೂ ನನ್ನತ್ತ ಬೆರಳು ತೋರಿಸುವಂತೆ ಆಗದಿದ್ದರೆ ಸಾಕು, ಅದುವೇ ನನ್ನ ಪಾಲಿಗೆ ದೊಡ್ಡ ಫಿಟ್‌ನೆಸ್‌’ ಎಂದು ಧೋನಿ ಹೇಳಿದರು.

ಕ್ರೀಡೆ – Udayavani – ಉದಯವಾಣಿ
Read More