ಬೆಂಗಳೂರು: ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ದರ್ಶನವನ್ನು ಕಂಠೀರವ ಸ್ಟೇಡಿಯಂನಲ್ಲಿ ಪಡೆದುಕೊಂಡಿದ್ದೇವು.. ಆದರೆ ಎಷ್ಟು ನೋಡಿದ್ರೂ ಸಮಾಧಾನ ಆಗ್ತಿಲ್ಲ. ಅಪ್ಪುರನ್ನ ಮರೆಯೋಕೆ ಆಗ್ತಿಲ್ಲ. ಅವ್ರು ಇಲ್ಲ ಅನ್ನೋದನ್ನ ಕೇಳೋಕೆ ಹಿಂಸೆ ಆಗ್ತಿದೆ. ಆದ್ದರಿಂದಲೇ ಇಂದು ಕೂಡ ಬಂದು ದರ್ಶನ ಪಡೆದುಕೊಂಡಿದ್ದೀನಿ ಎಂದು ನಟ ತಬಲಾ ನಾಣಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ತಬಲಾ ನಾಣಿ ಅವರು, ಸ್ಟುಡಿಯೋಗೆ ಶೂಟಿಂಗ್ ಅಂತಾ ಬಂದಾಗೆಲ್ಲಾ ಸಿಗುತ್ತಿದ್ದರು. ನಾವು ಅವರನ್ನು ಈ ರೀತಿ ಭೇಟಿಯಾಗೋಕೆ ಆಗ್ತಿಲ್ಲ. ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿರೋ ವ್ಯಕ್ತಿ ಅಪ್ಪು. ಅವರು ಇರೋವಾಗ ಅವರು ಎಂತವರು ಅಂತ ಗೊತ್ತಾಗ್ಲಿಲ್ಲ. ಈಗ ಅವರು ಹೋದ ಮೇಲೆ ಗೊತ್ತಾಗುತ್ತಿದೆ. ತುಂಬಾ ಜನರಿಗೆ ಆದರ್ಶ ಹೊಂದಿರೋ ವ್ಯಕ್ತಿ. ದಯವಿಟ್ಟು ಎಲ್ಲಾ ಪೋಷಕರಿಗೆ ಕೇಳಿಕೊಳ್ತೀನಿ. ಯಾರಿಗೂ ಕೂಡ ಅಪ್ಪು ಇಲ್ಲ ಅಂತಾ ಹೇಳ್ಬೇಡಿ. ಅವರ ತರ ಡ್ಯಾನ್ಸ್, ಸಹಾಯ ಮಾಡೋ ಗುಣ, ಅವರ ಆದರ್ಶಗಳ ಬಗ್ಗೆ ಹೇಳಿ. ಆ ಮೂಲಕ ಅವರು ನಮ್ಮ ಜೊತೆಯಲ್ಲಿದ್ದಾರೆ ಅಂತಾ ನಾವು ತೋರಿಸಿಕೊಡೋಣ ಎಂದು ಮನವಿ ಮಾಡಿದರು.
ಕಂಠೀರವ ಸ್ಟುಡಿಯೋಗೆ ಬಂದಾಗ ಒಮ್ಮೆ ಅಪ್ಪು ನನ್ನ ಮಾತನಾಡಿಸಿದ್ರು. ಎದ್ದೇಳು ಮಂಜುನಾಥ ಸಿನಿಮಾದ ಪಾತ್ರದ ಬಗ್ಗೆ ನನಗೆ ತುಂಬಾ ಹೊಗಳಿದ್ರು. ಹೊಸ ನಟನಾದ್ರೂ ನನ್ನನ್ನ ಕರೆದು ಅಪ್ಪಿ.. ಮುತ್ತಿಕ್ಕಿ ಹುರಿದುಂಬಿಸಿದ್ರು. ಅವರ ಜೊತೆ ಕಳೆದ ಕ್ಷಣಗಳನ್ನು ನಾನು ಯಾವತ್ತು ಮರೆಯೋದಿಲ್ಲ. ಅವರು ಮರಣ ಅಂತಾ ಹೇಳೋಕೆ ಆಗಲ್ಲ. ಅವರೆಂದಿಗೂ ಅಮರ ಎಂದರು.