ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟಿ20 ತಂಡ ನಾಯಕತ್ವ ಅಂತ್ಯಗೊಂಡಿದೆ. ಹೀಗಿರುವಾಗಲೇ ಇನ್ನು ಮುಂದೆ ಕೊಹ್ಲಿ ಟಿ20 ತಂಡದ ಓರ್ವ ಆಟಗಾರನಾಗಿ ಮುಂದುವರೆಯಲಿದ್ದಾರೋ ಅಥವಾ ತಂಡದಿಂದ ಹೊರಗುಳಿಯಲಿದ್ದಾರಾ ಎಂಬ ಚರ್ಚೆಗಳು ನಡೆಯುತ್ತಿವೆ. ಈಗ ಇದರ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗರಾ ವೀರೇಂದ್ರ ಸೆಹ್ವಾಗ್ ಮತ್ತು ಆಶಿಶ್ ನೆಹ್ರಾ, ಕೊಹ್ಲಿ ನಾಯಕತ್ವದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಎಷ್ಟೇ ಯುವ ಕ್ರಿಕೆಟಿಗರು ಟೀಮ್ ಇಂಡಿಯಾ ಸೇರಿದರೂ ಸಹ ಮತ್ತೋರ್ವ ಕೊಹ್ಲಿಯಂತೂ ನಮಗೆ ಸಿಗುವುದಿಲ್ಲ. ಆತ ತನ್ನ ಅದ್ಭುತ ಬ್ಯಾಟಿಂಗ್ ಮೂಲಕ ತೋರುವ ಸ್ಥಿರತೆ ಯಾರಿಂದಲೂ ಸಾಧ್ಯವಾಗುವುದಿಲ್ಲ. ಭಾರತ ಟಿ20 ತಂಡದಲ್ಲಿ ಆತನ ಸ್ಥಾನದ ಕುರಿತು ಪ್ರಶ್ನೆ ಎತ್ತುವುದು ಸರಿಯಲ್ಲ ಎಂದಿದ್ದಾರೆ ವಿರೇಂದ್ರ ಸೆಹ್ವಾಗ್.
ಆತ ಇಷ್ಟಪಡುವವರೆಗೂ ಟಿ20 ತಂಡದಲ್ಲಿ ಇರಬಹುದು. ಕೊಹ್ಲಿ ಜೊತೆಗೆ ಯುವ ಆಟಗಾರರ ಕಾಂಬಿನೇಷನ್ ಕಣಕ್ಕಿಳಿಯಬೇಕು. ಈ ರೀತಿ ಅನುಭವಿ ಮತ್ತು ಯುವ ಆಟಗಾರರ ಕಾಂಬಿನೇಷನ್ ತಂಡಕ್ಕೆ ದೊಡ್ಡ ಅನುಕೂಲವಾಗಿ ಪರಿಣಮಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.