‘ಯಾರ ಹಕ್ಕನ್ನು, ಯಾರ ಅಧಿಕಾರವನ್ನು ಯಾರು ಪ್ರಶ್ನಿಸಬಾರದು’ -ಸಂಸದೆ ಸುಮಲತಾ


ಮಂಡ್ಯ: ಎಲ್ಲೆಡೆಯೂ ಹಿಜಾಬ್​ನ ವಿವಾದ ಬೂದಿ ಮುಚ್ಚಿದ ಕೆಂಡದಂತಿದೆ. ಹಿಜಾಬ್​ ಸಂಬಂಧವಾಗಿ ಶ್ರೀರಂಗಪಟ್ಟಣದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದು, ರಾಜಕೀಯ ಪಕ್ಷ ಹಾಗೂ ನಾಯಕರುಗಳು ಮಾತನಾಡುವಾಗ ಯೋಚಿಸಿ ಮಾತನಾಡಬೇಕು ಎಂದು ಸಲಹೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ, ನಾನು ಈ ವಿಚಾರವಾಗಿ ಏನನ್ನು ಹೇಳುವುದಿಲ್ಲ. ಸದ್ಯ ಈ ಪ್ರಕರಣ ಕೋರ್ಟ್​ನಲ್ಲಿದೆ. ರಾಜಕೀಯ ಪಕ್ಷ ಹಾಗೂ ನಾಯಕರುಗಳು ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ಈಗಾಗಲೇ ಸಮಾಜದಲ್ಲಿ ಗೊಂದಲ ಸೃಷ್ಠಿಯಾಗಿದೆ. ಅದಕ್ಕೆ ಪೆಟ್ರೋಲ್​ ಹಾಕಿ ಮತ್ತಷ್ಟು ಉರಿಸುವ ಕೆಲಸವಾಗಬಾರದು ಎಂದಿದ್ದಾರೆ.

News First Live Kannada


Leave a Reply

Your email address will not be published.