ಬಾಗಲಕೋಟೆ: ಯಾವನ ಚಡ್ಡಿ ಕಿತ್ತು ಕೈಯಲ್ಲಿ ಬರುತ್ತೇ, ಆಗ ಇನ್ನೊಬ್ಬ ಬೆತ್ತಲೆಯಾಗುತ್ತಾನೆ ಎಂದು ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಸಿಎಂ ಕಿತ್ತಾಟದ ವಿಚಾರವಾಗಿ ಡಿಸಿಎಂ ಗೋವಿಂದ್ ಕಾರಜೋಳ ವ್ಯಂಗ್ಯವಾಡಿದ್ದಾರೆ.

ಬಾಗಲಕೋಟೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಎರಡು ಗುಂಪುಗಳಿಲ್ಲ. ಮೂರು ಗುಂಪುಗಳಿವೆ. ನಾಲ್ಕನೇಯದವರಾದ ಶಾಮನೂರು ಶಿವಶಂಕರಪ್ಪ ಇಣುಕಿ ನೋಡುತ್ತಿದ್ದಾರೆ. ಶಿವಶಂಕರಪ್ಪ ನನಗೂ ಈಗ 91 ವಯಸ್ಸು, ಇನ್ನೂ ನೂರು ದಾಟಿಲ್ಲ, ನನಗೂ ಐದು ವರ್ಷ ಅವಕಾಶ ಬೇಕೆನ್ನುತ್ತಿದ್ದಾರೆ. ಕಾಂಗ್ರೆಸ್ ನಲ್ಲಿನ ಕುಸ್ತಿ ಇಂದು ನಿನ್ನೆಯದಲ್ಲ. ಹಿಂದೆಯೂ ಕುಸ್ತಿಯಾಗಿ ಪಾಪ ಡಾ.ಪರಮೇಶ್ವರ್ ರನ್ನು ಮೂಲೆಗುಂಪು ಮಾಡಿದ್ದರು.

ಐದು ವರ್ಷ ಸಿಎಂ ಆಗುತ್ತೇನೆ ಎಂದು ರಾಜ್ಯದ ಉದ್ದಗಲಕ್ಕೂ ಓಡಾಡಿದರೂ, ಪರಮೇಶ್ವರ್‌ರನ್ನು ಅವರ ಪಾರ್ಟಿಯವರೇ ಸೋಲಿಸಿದ್ದರು. ಇದೇನು ಹೊಸದಲ್ಲ. ಒಬ್ಬರ ಚಡ್ಡಿ ಒಬ್ಬರು ಹಿಡಿದಿದ್ದಾರೆ. ಯಾವನ ಚಡ್ಡಿ ಕಿತ್ತು ಕೈಯಲ್ಲಿ ಬರುತ್ತೇ, ಆಗ ಇನ್ನೊಬ್ಬ ಬೆತ್ತಲೆಯಾಗುತ್ತಾನೆ ಎಂದು ಕಾಂಗ್ರೆಸ್ ನಲ್ಲಿ ಭಾವಿ ಸಿಎಂ ಕಿತ್ತಾಟದ ಬಗ್ಗೆ ಡಿಸಿಎಂ ಖಾರವಾಗಿ ನುಡಿದರು. ಇದನ್ನೂ ಓದಿ: ಮುಂದಿನ ಸಿಎಂ ಬಗ್ಗೆ ಕಾಂಗ್ರೆಸ್ ಕಾಣುತ್ತಿರುವುದು ಹಗಲು ಕನಸು: ಸಚಿವ ಸಿ.ಸಿ.ಪಾಟೀಲ್

ಪೆಟ್ರೋಲ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುವ ಹೀನ ಪರಿಸ್ಥಿತಿಗೆ ಬಂದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಹೆಚ್ಚಿದಾಗ, ಸ್ವಾಭಾವಿಕವಾಗಿ ದೇಶ ಹಾಗೂ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ರೇಟ್ ಹೆಚ್ಚಾಗುತ್ತದೆ. ಇದು ಕಾಂಗ್ರೆಸ್ ಗೆ ಗೊತ್ತಿಲ್ಲವೇ? ಗೊತ್ತಿದ್ದು, ರಾಜಕಾರಣ ಮಾಡಲಿಕ್ಕೆ ಮುಂದಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಜೀವಂತ ಇದ್ದೀವಿ ಎಂದು ತೋರಿಸಲು ಪ್ರಯತ್ನಿಸುತ್ತಿದ್ದಾ ಎಂದು ಹೇಳಿದರು.

ಅಧಿಕಾರಕ್ಕೇರುವ ಮೊದಲೇ ಕಾಂಗ್ರೆಸ್ ನಲ್ಲಿ ಸಿಎಂ ಕಿತ್ತಾಟ ವಿಚಾರಕ್ಕೆ ಎಮ್ಮೆ ಕಥೆ ಹೇಳಿ, ಕುಟುಕಿದ ಕಾರಜೋಳ, ಓರ್ವ ಶ್ರೀಮಂತನ ಮನೆಯಲ್ಲಿ ಎರಡು ಎಮ್ಮೆಗಳಿರುತ್ತವೆ, ಬಡವನಿಗೆ ಮಜ್ಜಿಗೆ ಆಸೆ, ಆದರೆ ಬಡವ ಪೈಲ್ವಾನ್ ಹಾಗೆಯೇ ಮಸ್ತ್ ಮೀಸೆ ಬಿಟ್ಟಿರುತ್ತಾನೆ. ಮಜ್ಜಿಗೆ ಕುಡಿಬೇಕಾದರೆ ಮೀಸೆ ಬೋಳಿಸಿಬೇಕು, ಯಾಕೆಂದರೆ ಮಜ್ಜಿಗೆ ಕುಡಿಯಲಿಕ್ಕೆ ಮೀಸೆ ಅಡ್ಡಿಯಾಗುತ್ತವೆ ಎಂದಾಗ ಬಡವ ಮೀಸೆ ಬೋಳಿಸುತ್ತಾನೆ, ಎಮ್ಮೆ ಈಯುತ್ತೆ, ಮಜ್ಜಿಗೆ ಕುಡಿಬೇಕು ಎಂದು ಬಡವ ಮೀಸೆ ಬೋಳಿಸಿದರೆ, ಎಮ್ಮೆ ಈಯಲಿಲ್ಲ, ಬಡವ ಮಜ್ಜಿಗೆ ಕುಡಿಯಲಿಲ್ಲ. ಮೀಸೆ ಬೋಳಿಸಿಕೊಂಡಿದ್ದು, ಅಷ್ಟೇ ಆಯ್ತು. ಅವನಿಗೆ ಮಜ್ಜಿಗೆಯೇ ಸಿಗಿಲಿಲ್ಲವೆಂದು ವ್ಯಂಗ್ಯವಾಡಿದರು.

The post ಯಾವನ ಚಡ್ಡಿ ಕಿತ್ತು ಕೈಯಲ್ಲಿ ಬರುತ್ತೆ, ಆಗ ಇನ್ನೊಬ್ಬ ಬೆತ್ತಲಾಗುತ್ತಾನೆ: ಗೋವಿಂದ್ ಕಾರಜೋಳ appeared first on Public TV.

Source: publictv.in

Source link